ಊಟ ಮಾಡಿದ ತಕ್ಷಣ ಟಾಯ್ಲೆಟ್‌ಗೆ ಹೋಗಬೇಕೆನಿಸೋದು, ಹೋಗಿದ್ರೂ ಸಂಪೂರ್ಣವಾಗಿ ಮುಗಿದಿಲ್ಲ ಎಂದು ಅನಿಸೋದು, ಕೆಲವೊಮ್ಮೆ ಮಲಬದ್ಧತೆ ಹಾಗೂ ಕೆಲವೊಮ್ಮೆ ಬೇಧಿ, ಸಭೆ-ಸಮಾರಂಭಗಳಿಗೆ ಹೋದಾಗ ಅಥವಾ ಭಯ/ tension ಆದಾಗ ಪದೇ ಪದೇ ಟಾಯ್ಲೆಟ್‌ಗೆ ಹೋಗಬೇಕೆಂದು ಅನಿಸೋದು – ಇವು IBS (Irritable Bowel Syndrome) ಅಥವಾ ಗ್ರಹಣಿ ಕಾಯಿಲೆಯ ಲಕ್ಷಣಗಳಾಗಿರಬಹುದು.
IBS ಒಂದು ಜೀರ್ಣಾಂಗ ವ್ಯವಸ್ಥೆಯ ಏರುಪೇರಿನಿಂದ ಉಂಟಾಗುವ ಕಾಯಿಲೆ. ನಾವು ಪ್ರತಿದಿನವೂ ಸೇವಿಸುವ ಆಹಾರ ಜೀರ್ಣವಾಗಿ, ನಮ್ಮ ದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಕೊಟ್ಟು, ಉಳಿದ ತ್ಯಾಜ್ಯವನ್ನು ದೊಡ್ಡ ಕರುಳಿನ ಭಾಗಕ್ಕೆ ರವಾನಿಸಿ, ಅಲ್ಲಿ ನೀರಿನ ಅಂಶವನ್ನು ಹೀರಿಕೊಂಡು ಮಲದ ರೂಪದಲ್ಲಿ ದೇಹದಿಂದ ವಿಸರ್ಜನೆ ಮಾಡುತ್ತದೆ. ಇದು ಪ್ರತಿದಿನವೂ, ಪ್ರತಿಯೊಬ್ಬರೂ ಆಹಾರ ಸೇವಿಸಿದಾಗ ನಡೆಯುವ ಪ್ರಕ್ರಿಯೆ.
ಆಹಾರವನ್ನು ಜೀರ್ಣಿಸುವ ಪ್ರಕ್ರಿಯೆಯಲ್ಲಿ ಸ್ವಲ್ಪ ಸಮಯ, ಗ್ರಹಣಿ (Colon) ಎಂಬ ಭಾಗದಲ್ಲಿ ಆಹಾರವನ್ನು ಹಿಡಿದಿಟ್ಟುಕೊಳ್ಳಲಾಗುತ್ತದೆ. ಆದರೆ, IBS ಅಥವಾ ಗ್ರಹಣಿ ಕಾಯಿಲೆ ಇರುವವರಿಗೆ, ಈ ಪ್ರಕ್ರಿಯೆ ಸಮರ್ಪಕವಾಗಿ ನಡೆಯುವುದಿಲ್ಲ. ಆಹಾರವನ್ನು ಹಿಡಿದಿಟ್ಟುಕೊಳ್ಳದೆ ಅದರಲ್ಲಿರುವ ಯಾವುದೇ ಸಾರವನ್ನು ತೆಗೆದುಕೊಳ್ಳದೆ, ಸಂಪೂರ್ಣವಾಗಿ ತಿಂದಂತಹ ಆಹಾರವನ್ನು ಅದೇ ರೀತಿ ದೇಹದಿಂದ ಹೊರಹಾಕಲಾಗುತ್ತದೆ.
ಅಧ್ಯಯನಗಳ ಪ್ರಕಾರ, ಭಾರತದಲ್ಲಿ ಪ್ರತಿ 100 ಜನರಲ್ಲಿ ಸುಮಾರು 1 ರಿಂದ 4 ಜನರಿಗೂ IBS ಇರುವ ಸಾಧ್ಯತೆ ಇದೆ. ಬಹುತೆಕ ಜನರು IBS ಲಕ್ಷಣಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದರ ಪರಿಣಾಮವಾಗಿ ಅವರ ದೈನಂದಿನ ಜೀವನದ ಮೇಲೆ ಪ್ರಭಾವ ಬೀರುತ್ತದೆ.
IBS ಅಥವಾ ಗ್ರಹಣಿ ಕಾಯಿಲೆಗೆ ಕಾರಣಗಳೇನು?
- ಆಹಾರ ನಿಯಮಗಳು ಮತ್ತು ವಿಧಾನಗಳನ್ನು ಪಾಲಿಸದೇ ತಿನ್ನುವುದು
ಇದು ಮೊದಲ ಮತ್ತು ಪ್ರಮುಖ ಕಾರಣ. ಊಟ ಮಾಡುವ ಸಮಯ, ಕ್ರಮ, ಸ್ಥಳ ಮತ್ತು ಮನಸ್ಸು — ಇವನ್ನೆಲ್ಲಾ ಪಾಲಿಸುವುದು ಅತ್ಯಂತ ಮುಖ್ಯ. ಆಹಾರ ಸೇವಿಸುವ ವಿಧಾನಗಳನ್ನು ಪಾಲಿಸದೇ ಊಟ ಮಾಡುವುದರಿಂದ IBS ಹೆಚ್ಚುವ ಸಾಧ್ಯತೆ ಇದೆ. - ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದೆ ಇರುವುದು, ಅತಿಯಾಗಿ ತಿನ್ನುವುದು, ಹೆಚ್ಚು ಖಾರ, ಎಣ್ಣೆ, ಮಸಾಲೆ, ಮಾಂಸ ಮತ್ತು ಜಂಕ್ ಫುಡ್ ಸೇವನೆ , ಹೆಚ್ಚಾಗಿ ತಣ್ಣನೆಯ ಆಹಾರ ಸೇವನೆ (ಐಸ್ಕ್ರೀಮ್, ಕೋಲ್ಡ್ ಡ್ರಿಂಕ್ಸ್, ಫ್ರಿಜ್‌ನಲ್ಲಿ ಇಟ್ಟ ಆಹಾರಗಳನ್ನು) ಅತಿಯಾಗಿ ಸೇವಿಸುವುದರಿಂದ IBS ಉಂಟಾಗಬಹುದು.
- ಹಿಂದಿನ ದಿನ ಉಳಿದ/ಹಳಸಿದ ಆಹಾರ ಅಥವಾ ಹೆಚ್ಚು ಮೈದಾ ಹಿಟ್ಟಿನ ಆಹಾರ ಸೇವನೆ ಇದು IBS ಸಮಸ್ಯೆಗೆ ಕಾರಣವಾಗಬಹುದು.
- ತೀವ್ರ ಮಾನಸಿಕ ಒತ್ತಡವು IBS ಸಮಸ್ಯೆಯನ್ನು ಪ್ರಚೋದಿಸಬಹುದು.
- ಮಲವಿಸರ್ಜನೆ ಅಥವಾ ಮೂತ್ರವನ್ನು ತಡೆಯುವುದು, ಇದು IBS ಸಮಸ್ಯೆಗಳಿಗೆ ಕಾರಣವಾಗಬಹುದು.
- ಬ್ಯಾಕ್ಟೀರಿಯಲ್ ಇನ್ಫೆಕ್ಷನ್-IBS ಹೆಚ್ಚಿಸಲು ಕಾರಣವಾಗಬಹುದು. ಕರುಳಿನ ಬ್ಯಾಕ್ಟೀರಿಯಾ ಸೋಂಕಿಗೆ ಒಳಗಾದವರು IBSನಿಂದ ಬಳಲಬಹುದು.
ಮುಂದಿನ ಭಾಗದಲ್ಲಿ IBS ನ ಲಕ್ಷಣಗಳು ಮತ್ತು ಚಿಕಿತ್ಸೆ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗುವುದು.
IBS ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಉಚಿತ ಸಲಹೆಗಾಗಿ, ದಯವಿಟ್ಟು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮೈಸೂರು ಗೆ ಭೇಟಿಕೊಡಿ. ಸಂಪರ್ಕಿಸಿ: [8762052998]