ಮೈಸೂರು. ಜನವರಿ 10 (ಕರ್ನಾಟಕ ವಾರ್ತೆ):- ಕರ್ನಾಟಕರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ “ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾತರಬೇತಿಕೇಂದ್ರ”ದ ವತಿಯಿಂದಐ.ಬಿ.ಪಿ.ಎಸ್‍ರಾಷ್ಟ್ರೀಕೃತ ಬ್ಯಾಂಕ್ ನವರು ಮುಂದಿನ ದಿನಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅಧಿಕಾರಿಗಳ ಮತ್ತುಗುಮಾಸ್ತರಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ತರಬೇತಿಯನ್ನು ನೀಡಲು ನಿರ್ಧರಿಸಿದೆ.
ಆಸಕ್ತರು 2022 ರಜನವರಿ 14 ರೊಳಗಾಗಿ ಬೆಳಗ್ಗೆ 10.00 ಗಂಟೆಯಿಂದ ಸಂಜೆ 4.00 ಗಂಟೆಯತನಕತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಕೋರಿದೆ ಹೆಚ್ಚಿನ ಮಾಹಿತಿಗಾಗಿದೂರವಾಣಿ ಸಂಖ್ಯೆ 0821-2515944 ಅನ್ನು ಸಂಪರ್ಕಿಸಬಹುದುಎಂದುಕರಾಮುವಿ ಕುಲಸಚಿವರಾದ ಪ್ರೊ. ಆರ್. ರಾಜಣ್ಣಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
