ಕುರುಬ ಸಂಘದ ನೂತನ ಅಧ್ಯಕ್ಷರಾದ ಬಿ.ಸುಬ್ರಹ್ಮಣ್ಯರಿಗೆ ಮೈಸೂರಿನಲ್ಲಿ ಅದ್ಧೂರಿ ಸ್ವಾಗತ

ಮೈಸೂರ:- ಕರ್ನಾಟಕ ಪ್ರದೇಶ ಕುರುಬರ ಸಂಘದ ನೂತನ ಪ್ರಭಾರ ಅಧ್ಯಕ್ಷರಾಗಿ ಆಯ್ಕೆಯಾದ ಬಿ.ಸುಬ್ರಹ್ಮಣ್ಯ ಅವರು, ಮೈಸೂರಿಗೆ ಮೊದಲ ಬಾರಿಗೆ ಆಗಮಿಸಿದ ಹಿನ್ನೆಲೆ ಸಂಘದ ವತಿಯಿಂದ ಸಾಂಸ್ಕೃತಿಕ ಕಲಾ ತಂಡದಿಂದ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿ, ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಬುಧವಾರ ನಗರದ ಡಿ.ದೇವರಾಜು ಅರಸು ರಸ್ತೆಯ ಶ್ರೀ ಶಿವಾಯ ಮಠದ ಹತ್ತಿರ ಮೆರವಣಿಗೆ ಮೂಲಕ ಸ್ವಾಗತಿಸಿದ ಕುರುಬ ಸಮಾಜದ ಮುಖಂಡರು ಹಾಗೂ ಜಿಲ್ಲಾ ಪದಾಧಿಕಾರಿಗಳು, ಪುಷ್ಪಮಾಲೆಗಳನ್ನು ಹಾಕುವ ಮೂಲಕ ಅಭಿನಂದನೆ ಸಲ್ಲಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಧ್ಯಕ್ಷರಾದ ಬಿ.ಸುಬ್ರಹ್ಮಣ್ಯ ಅವರು, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಕುರುಬ ಸಮುದಾಯ ಎಸ್‌ಟಿಗೆ ಸೇರ್ಪಡೆಯಾಗಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕುಲಶಾಸ್ತ್ರೀಯ ಅಧ್ಯಯನಕ್ಕೆ ಶಿಫಾರಸು ಮಾಡಿದ್ದಾರೆ. ಈ ಹೋರಾಟದಲ್ಲಿ ನಮ್ಮ ಬೆನ್ನಿಗೆ ಅವರು ನಿಲ್ಲಲು ಭರವಸೆ ನೀಡಿದ್ದಾರೆ‌ ಎಂದರು.

ಕಾಗಿನೆಲೆ ಕನಕ ಗುರುಪೀಠದ ಸ್ವಾಮೀಜಿಗಳು, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ಎಚ್.ವಿಶ್ವನಾಥ್ ಎಲ್ಲರನ್ನೂ ಭೇಟಿ ಮಾಡುತ್ತೇನೆ. ಒಗ್ಗೂಡಿಸಿ ಈ ಹೋರಾಟವನ್ನು ಮುಂದುವರುತ್ತೇನೆ ಎಂದು ತಿಳಿಸಿದರು.

ಸಮುದಾಯದ ಸರ್ವಾಂಗೀಣ ಏಳಿಗೆಗೆ ನಾನು ಬದ್ಧ. ಜನಾಂಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅನೇಕ ಸೌಲಭ್ಯಗಳನ್ನು ಒದಗಿಸಲು ಶಕ್ತಿಮೀರಿ ಶ್ರಮಿಸುತ್ತೇನೆ. ಸಮುದಾಯದಲ್ಲಿ ಅನೇಕ ಯುವಕರು ಉನ್ನತ ಅಧಿಕಾರಿಗಳ ಸ್ಥಾನಕ್ಕೇರಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದುಡಿಯುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ರಂಗರಾಜು ಅವರು ಮಾತನಾಡಿ, ಹಿಂದುಳಿದ ಜನಾಂಗದ ವ್ಯಕ್ತಿ ಯುವಕರಿಂದಲೂ ನಾಯಕತ್ವ ಗುಣ ಮೈಗೂಡಿಸಿಕೊಂಡು ಬಂದವರು. ಮಿತಭಾಷಿ, ನಿಷ್ಠೂರವಾದಿ, ಸದಾ ಕ್ರಿಯಾಶೀಲರು ಎಂದು ಪ್ರಶಂಸಿಸಿದರು.

ರಾಜ್ಯದಲ್ಲಿ ಅತ್ಯಂತ ಕೆಳಮಟ್ಟದಲ್ಲಿ ಸಮುದಾಯದ ಜನರು ಜೀವನ ನಡೆಸುತ್ತಿದ್ದಾರೆ. ಅವರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲೆತ್ತಬೇಕು. ಜನಾಂಗದ ವಿದ್ಯಾರ್ಥಿ ಸಂಘಗಳು ಹಾಗೂ ವಿದ್ಯಾರ್ಥಿ ನಿಲಯಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ತುರ್ತಾಗಿ ನೆರವೇರಿಸಬೇಕಿದೆ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯ ಬೀರಿಹುಂಡಿ ಬಸವಣ್ಣ ಅವರು ಮಾತನಾಡಿ, ಕುರುಬ ಸಮುದಾಯ ತನ್ನದೇ ಆದ ಇತಿಹಾಸ ಹೊಂದಿದೆ. ಅಂತಹ ಸಮುದಾಯಕ್ಕೆ ಅಧ್ಯಕ್ಷರಾಗಿರುವ ಸುಬ್ರಹ್ಮಣ್ಯ ಅವರು ಸಂಘಟನೆ ಚತುರರಾಗಿದ್ದು, ಸಮಾಜದ ಏಳಿಗೆಗಾಗಿ ಶ್ರಮಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುಬ್ರಹ್ಮಣ್ಯ ಅವರು ವಿದ್ಯಾರ್ಥಿ ದೆಸೆಯಿಂದಲೂ ಸಂಘಟನೆಯಲ್ಲಿ ಬಹಳ ಮುಂಚೂಣಿಯಲ್ಲಿದ್ದಾರೆ. ನನ್ನ ರಾಜಕೀಯ ಬೆಳಣಿಗೆಯಲ್ಲಿ ಅವರ ಪಾತ್ರ ಪ್ರಧಾನವಾಗಿದ್ದು, ಎಲ್ಲಾ ಚುನಾವಣೆಯಲ್ಲಿ ನೇತೃತ್ವ ವಹಿಸಿ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರುಗಳಾದ ಜೆ.ಗೋಪಿ, ನಾಗರಾಜು, ಅಭಿಲಾಷ್, ಮಾದೇಗೌಡ, ಮಹದೇವು, ಕನಕ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಸಿದ್ದಯ್ಯ, ಬ್ಯಾಂಕ್ ಪುಟ್ಟಸ್ವಾಮಿ, ರಾಜಣ್ಣ, ವಿ.ಸಿ.ಬಸವಣ್ಣ, ರೇವಣ್ಣ, ಆಲಹಳ್ಳಿ ಬಸವಣ್ಣ, ಆಲಹಳ್ಳಿ ನಂಜೇಗೌಡ, ತಾಲ್ಲೂಕು ಕುರುಬ ಸಂಘದ ಅಧ್ಯಕ್ಷ ಶಿವಪ್ಪ ಕೋಟೆ, ಉದ್ಯಮಿ ಬಸವೇಗೌಡ, ಶ್ರೀನಿವಾಸ ಹಾಗೂ ವಿವಿಧ ತಾಲ್ಲೂಕಿನ ಕುರುಬ ಸಂಘದ ಅಧ್ಯಕ್ಷರು, ಸದಸ್ಯರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
[18:46, 1/6/2021] S ಮಹೇಶ್ ಸಂಜೆ ಸಮಾಚಾರ: ವಕೀಲ ರವೀಂದ್ರ ಹತ್ಯೆ ಖಂಡಿಸಿ ಪ್ರತಿಭಟನೆ

ಗುಂಡ್ಲುಪೇಟೆ: ವಕೀಲರಾದ ರವೀಂದ್ರ ಹತ್ಯೆ ಖಂಡಿಸಿ ತಾಲ್ಲೂಕು ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಮುಂದೆ ಕಾರ್ಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ರವಿಕಾಂತ್ ಮಾತನಾಡಿ, ವಕೀಲರ ರಕ್ಷಣೆಗಾಗಿ ಕಾನೂನು ರಚನೆ ಮಾಡಬೇಕೆಂದು ಹಲವು ದಿನಗಳಿಂದ ವಕೀಲರುಗಳು ಬೇಡಿಕೆ ಇಟ್ಟಿದ್ದರೂ ಕಾಯ್ದೆ ರಚನೆಯಾಗದಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮದ್ದೂರು ತಾಲ್ಲೂಕಿನ ನವಿಲೇ ಗ್ರಾಮದಲ್ಲಿ ವಕೀಲರಾದ ರವೀಂದ್ರ ಅವರನ್ನು ಹತ್ಯೆ ಮಾಡಿರುವುದು ಖಂಡಿನೀಯ. ಇದರ ಬಗ್ಗೆ ಸರ್ಕಾರ ಮತ್ತು ಅಲ್ಲಿನ ಪೆÇಲೀಸ್ ವ್ಯವಸ್ಥೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಸಿಕ್ಕೆಯಾಗುವ ಮೂಲಕ ರವೀಂದ್ರ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದರು.

ವಕೀಲರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಪಿ.ಎಸ್. ಗುರುಪ್ರಸಾದ್, ವಕೀಲರಾದ ಶಿವಣ್ಣ, ಪ್ರಭುಸ್ವಾಮಿ, ಪುಟ್ಟಸ್ವಾಮಿ, ರಾಜೇಶ್, ಕಾಂತರಾಜ್, ನಾಗೇಂದ್ರ, ಹಂಗಳ ರಾಜೇಶ್, ಯೋಗೇಶ್ ಕುಮಾರ್, ದೇವರಹಳ್ಳಿ ಕೆಂಪರಾಜು, ಹೆಚ್.ಬಿ. ಮೂರ್ತಿ, ಪಾಳ್ಯ ದೇವರಾಜ್, ಕಿಲಗೆರೆ ಶ್ರೀನಿವಾಸ್, ನಂದೀಶ್, ಲಕ್ಷ್ಮೀ, ಸೌಮ್ಯ, ಅನಿಲ್ ಕುಮಾರ್, ಆಂಜನೇಯ ಸೇರಿದಂತೆ ಇತರರು ಇದ್ದರು.

ವರದಿ: ಬಸವರಾಜು ಎಸ್ ಹಂಗಳ

By admin