ನಂಜನಗೂಡು: ಲಾಕ್ ಡೌನ್ ಇದ್ದರೂ ಉಲ್ಲಂಘಿಸಿ ತಂದೆಯೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ತಡೆದ ಪೊಲೀಸರ ಮುಂದೆ ಹೈಡ್ರಾಮ ಮಾಡಿದ್ದರಿಂದ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬೈಕ್ ನ್ನು ವಶಕ್ಕೆ ಪಡೆದಿರುವ ಘಟನೆ ನಂಜನಗೂಡು ತಾಲೂಕು ಹಂಡುವಿನಹಳ್ಳಿ ಚೆಕ್ ಪೋಸ್ಟ್ ಬಳಿ ನಡೆದಿದೆ. ನಂಜನಗೂಡು ತಾಲೂಕಿನ ಶಿರಮಳ್ಳಿ ಗ್ರಾಮದ ನಿವಾಸಿ ಶಂಕರ್(30) ಬಂಧಿತ ವ್ಯಕ್ತಿ. ಈತ ಲಾಕ್ ಡೌನ್ ಇದ್ದರೂ ತಂದೆಯೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದನು. ಈ ವೇಳೆ ಹಂಡುವಿನಹಳ್ಳಿ ಚೆಕ್ ಪೋಸ್ಟ್ ಬಳಿ ಪೊಲೀಸರು ಆತನನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಲ್ಲದೆ, ತಂದೆಯನ್ನು ರಸ್ತೆಯಲ್ಲಿ ಮಲಗಿಸಿ ಅದರ ವೀಡಿಯೋ ಮಾಡಿ ಎಲ್ಲರಿಗೂ ಕಳುಹಿಸಿದ್ದಾನೆ. ಈತನ ಸಮಾಧಾನ ಪಡಿಸಲು ಪೊಲೀಸರು ಯತ್ನಿಸಿದರೂ ಈತ ಪೊಲೀಸರ ಮಾತಿಗೆ ಸೊಪ್ಪು ಹಾಕದೆ ಕೊರೊನಾ ಕರ್ತವ್ಯ ನಿರತ ಪೊಲೀಸರ ಮುಂದೆ ಹೈಡ್ರಾಮಾ ಮಾಡಿದ್ದಾನೆ.
ಕೊನೆಗೆ ಈತನ ವಿರುದ್ಧ ಪ್ರಕರಣ ದಾಖಲಿಸಿ ಬೈಕ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By admin