ಗುಂಡ್ಲುಪೇಟೆ: ತಾಲೂಕಿನ ಹೊಂಗಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ 13 ಮಂದಿ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಮನು ಶ್ಯಾನುಭೋಗ್ ಮತ್ತು ಭಾರತೀಯ ಜನತಾ ಪಾರ್ಟಿಯ ಬೆಂಬಲಿತರು ಎಲ್ಲಾ ಸ್ಥಾನಗಳಿಗೂ ಚುನಾಯಿತರಾದರು.

ಸಂಘದ ಕಚೇರಿ ಆವರಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ನಿರ್ದೇಶಕರಾಗಿ ಮಹದೇವಪ್ಪ, ಮಂಜಪ್ಪ, ಮಲ್ಲಪ್ಪ, ಲೋಕೇಶ್, ಶಿವಪ್ಪ, ಶಂಭುಲಿಂಗಪ್ಪ, ಮಹದೇವಪ್ಪ, ಶಿವಪ್ಪ, ಶಿವಮ್ಮ, ಅನ್ನಪೂರ್ಣಮ್ಮ, ನಾಗರಾಜಶೆಟ್ಟಿ, ಗೌರಮ್ಮ ಸಿದ್ದನಾಯ್ಕ, ವೆಂಕಟಯ್ಯ ಆಯ್ಕೆಯಾದರು.

ನೂತನ ನಿರ್ದೇಶಕರನ್ನು ಗ್ರಾಮ ಪಂಚಾಯಿತಿ ಸದಸ್ಯ ಎಚ್.ಆರ್.ರೇವಣ್ಣ, ಪ್ರಭುಸ್ವಾಮಿ, ಸರ್ವಸ್ವಾಮಿ, ಗೌಡಿಕೆಕೂಸಣ್ಣ, ಕುರಟ್ಟಿ ಬಸವಣ್ಣ, ಕುರಟ್ಟಿರವಿ, ಪಿಎಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ್, ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಮನುಶ್ಯಾನುಭೋಗ್, ಪ್ರಸಾದ್‍ಚನ್ನಮಲ್ಲಿಪುರ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಚ್.ಸಿ.ಸ್ವಾಮಿ, ಮಂಜಪ್ಪ ಅಭಿನಂದಿಸಿದರು.

ವರದಿ: ಬಸವರಾಜು ಎಸ್.ಹಂಗಳ