ಚಾಮರಾಜನಗರ: ಚಾಮರಾಜನಗರ ಗ್ರಾಮಾಂತರ ಠಾಣೆ ವೃತ್ತನಿರೀಕ್ಷಕರಾಗಿ ಅಧಿಕಾರವಹಿಸಿಕೊಂಡಿರುವ ಚಿಕ್ಕರಾಜಶೆಟ್ಟಿ ಅವರನ್ನು ಕೋಡಿಮೋಳೆ ಭಗತ್‌ಸಿಂಗ್ ಯುವಸೇನೆ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು.
ಸನ್ಮಾನಸ್ವೀಕರಿಸಿದ ಗ್ರಾಮಾಂತರ ಠಾಣೆ ವೃತ್ತನಿರೀಕ್ಷಕರಾದ ಚಿಕ್ಕರಾಜಶೆಟ್ಟಿ ಮಾತನಾಡಿ, ಸಂಘಗಳು ಜನಪರ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ನೊಂದವರಿಗೆ ಆಸರೆಯಾಗಬೇಕು ಎಂದರು.
ಅಧ್ಯಕ್ಷ ಕಾಂತರಾಜು, ಸರಗೂರುಮೋಳೆ ಮಹೇಶ್, ಮಲ್ಲೇಶ್ ಶಿವು ಹಾಜರಿದ್ದರು.
