*ಮನೆಯೇ ಮಂತ್ರಾಲಯ ! ಮನೆಯೇ ವಿದ್ಯಾಲಯ..*

ನಮಗೆಲ್ಲ ತಿಳಿದಿರುವ ಹಾಗೆ 2020 ಅಗೋಚರವಾಗಿ ಕರೋನ ಮಹಾಮಾರಿ ಇಡೀ ವಿಶ್ವವನ್ನು ವ್ಯಾಪಿಸಿತು ಆಗ ಇಡೀ ಪ್ರಪಂಚವೇ ಲಾಕ್ ಡೌನ್ ಎಂಬ ಘೋರ ಸನ್ನಿವೇಶದಲ್ಲಿ ಮನೆಯಲ್ಲಿಯೇ ಎಲ್ಲರೂ ಉಳಿಯಬೇಕಾದ ಜೀವ ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ಲಕ್ಷಾಂತರ ಸಾವುನೋವುಗಳು ಒಂದೆಡೆಯಾದರೆ, ಇನ್ನೊಂದೆಡೆ ಮಂದಿರ ಮಠ ಮಾನ್ಯಗಳು ಚರ್ಚು ಮಸೀದಿಗಳೆಲ್ಲವೂ ಬಾಗಿಲು ಜಡಿದುಕೊಂಡ ಯಾವ ಭಕ್ತಾದಿಗಳಿಗೂ ಪ್ರವೇಶಕೊಡದೆ ತನ್ನ ಪಾಡಿಗೆ ತನ್ನ ಪೂಜೆ ಪುನಸ್ಕಾರವನ್ನು ಸದ್ದಿಲ್ಲದೆ ನಡೆಯುತ್ತ ಸಾಗಿತ್ತು. ಇದಕ್ಕೆಲ್ಲಾ ಕಾರಣ ನಮಗೆ ಗೊತ್ತಾಗಿದೆ *”ಮನುಷ್ಯನ ಅತ್ಯಂತ ದುರಾಸೆ ಮತ್ತು ಪ್ರಕೃತಿಗೆ ವಿರುದ್ಧವಾದ ದಿನಚರಿಯ ನಡವಳಿಕೆ ಬದುಕಿನ ರೀತಿನೀತಿಗಳು ವಿರುದ್ಧವಾಗಿರುವುದರಿಂದ ಪ್ರಕೃತಿಯೇ ನಮಗೆ ಈ ಪಾಠವನ್ನು ಕಲಿಸಿದೆ.”* ಎಂದು

 

ಯದಾ ಯದಾಹಿ ಧರ್ಮಸ್ಯ। ಗ್ಲಾನಿರ್ಭವತಿ ಭಾರತ ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್। ಪರಿತ್ರಾಣಾಯ ಸಾಧೂನಾಂ। ವಿನಾಶಾಯ ಚ ದುಷ್ಕೃತಾಮ್ ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ॥ ಭಗವಾನ್ ಶ್ರೀಕೃಷ್ಣರು ಭಗವದ್ಗೀತೆಯಲ್ಲಿ ಯಾವಾಗೆಲ್ಲ ಧರ್ಮದ ಅವನತಿ ಉಂಟಾಗಿ ಅಧರ್ಮದ ತಾಂಡವ ಹೆಚ್ಚಾಗುತ್ತದೋ ಆಗ ನಾನು ಪುನಃಪುನಃ ಅವತರಿಸಿ ಬರುವೆ ಎಂಬ ಅಭಯ ವಾಣಿಯಂತೆ

 

ಶ್ರೀಮಂತರಾದಿಯಾಗಿ ಬಡವರವರೆಗೂ ಎಲ್ಲರನ್ನೂ ಮನೆಯೊಳಗೆ ದಿಗ್ಬಂಧನದಲ್ಲಿರಿಸಿದ್ದು ಯಾಕೆಂದರೆ ಪ್ರಕೃತಿಯ ಧರ್ಮವನ್ನು ಪುನರ್ ಸ್ಥಾಪನೆಗಾಗಿ ಮನುಷ್ಯ ತನ್ನ ತನವನ್ನು ಮತ್ತೆ ಆತ್ಮಾವಲೋಕನ ಮಾಡಿಕೊಂಡು ಪುನಶ್ಚೇತನಗೊಳಿಸಿಕೊಳ್ಳಲು ಬಹುಪಾಲು ಜನರಿಗೆ ಕೊಟ್ಟಂಥ ಅವಕಾಶವಿದು.

 

ಲಾಕ್ ಡೌನ್ ಸಂದರ್ಭ ಭಾರತದಲ್ಲಿ ಇರುವ ಪ್ರತಿಯೊಬ್ಬ ಪ್ರಜೆಗೂ ಇದೊಂದು ಸದುಪಯೋಗಪಡಿಸಿಕೊಳ್ಳುವ ವರ್ಷ ಆಗಿತ್ತು ಎಂದರು ತಪ್ಪಾಗುವುದಿಲ್ಲ. ಬಹಳಷ್ಟು ಜನ ತಮ್ಮನ್ನು ತಾವು ವ್ಯಕ್ತಿತ್ವ ವಿಕಸನಗೊಳಿಸಿಕೊಂಡಿದ್ದು ಉಂಟು, ಬಹಳಷ್ಟು ಜನ ಓದುಗರು ಪುಸ್ತಕದ ಕಡೆ ಮುಖ ಮಾಡಿದ್ದು ಉಂಟು, ಮತ್ತಷ್ಟು ಜನ ಹೊಸ ಉದ್ಯಮಗಳನ್ನು ತಾವೇ ಹುಟ್ಟು ಹಾಕಿದ್ದೂ ಉಂಟು ಹೀಗೆ ಒಂದಿಲ್ಲೊಂದು ಶ್ರೇಷ್ಠ ವ್ಯಕ್ತಿಗಳು ಸಾಮಾನ್ಯರಿಂದ ಶ್ರೇಷ್ಠವಾದಂತಹ ಕೆಲಸಗಳನ್ನು ಮಾಡುತ್ತಾ ಜಗತ್ತಿನ ಕಣ್ಮನ ಸೆಳೆದಿದ್ದಾರೆ ಅನ್ನೋದ್ರಲ್ಲಿ ಸಂಶಯವಿಲ್ಲ.

 

ಇಂಥದ್ದೇ ಒಂದು ಸಾಲಿಗೆ ಸೇರುವ ಕುಟುಂಬವನ್ನು ನಿಮ್ಮ ಮುಂದೆ ಪರಿಚಯಿಸುವುದಕ್ಕೆ ನಾನು ಈ ಅಂಕಣ.

 

ಲಾಕ್ ಡೌನ್ ಸಂಧರ್ಭದಲ್ಲಿ ಶಾಲೆಯೆಲ್ಲಾ ಆನ್ ಲೈನ್ ಮೂಲಕ ತನ್ನ ಚಟುವಟಿಕೆ ಆರಂಭಿಸಿತು. ಪಾಠಪ್ರವಚನ ಇವೆಲ್ಲವೂ ಮೊಬೈಲ್ ನ ಮೂಲಕವೇ ಪ್ರಾರಂಭವಾಯಿತು ಮತ್ತು ಮಕ್ಕಳು ಪಾಠಗಳೊಂದಿಗೆ ಮೊಬೈಲ್ ನಲ್ಲಿಯೇ ಮಗ್ನರಾಗಿ ಆಟಗಳನ್ನು ಆಡುವುದರತ್ತ ತಮ್ಮ ಚಿತ್ತ ಹರಿಸಿದರು. ನಾಲ್ಕು ಗೋಡೆಗಳ ಮಧ್ಯದೊಳಗೆ ಬಾಗಿಲು ಹಾಕಿಕೊಂಡು ಒಂಟಿಯಾಗಿ ಮೊಬೈಲ್ ಮತ್ತು ತಾವು *ಒಂದು ಜಗತ್ತು* ಎಂಬಂತೆ ಮಕ್ಕಳು ಮೈಮರೆತಿದ್ದವು.

 

ಆದರೆ ಮೈಸೂರಿನ ಕುವೆಂಪುನಗರದ “ಎಂ.ಬ್ಲಾಕ್” ನ ಒಂದು ರಸ್ತೆಯ *ಶ್ರೀಮತಿ ಆಶಾ ರಾಜೇಶ್ ಮತ್ತು ಕುಟುಂಬ* ಇದರೆಲ್ಲದರಿಂದ ಹೊರತಾಗಿದೆ. ಪತ್ರಕರ್ತನಾಗಿ ಒಬ್ಬ ಯೋಗ ಶಿಕ್ಷಕನಾಗಿ ನಾನು ಅಲ್ಲಿಗೆ ತೆರಳಿದ್ದಾಗ ಎಲ್ಲಾ ಮಕ್ಕಳು *ನಮಸ್ತೆ* ಜೈಶ್ರೀರಾಮ್ ಎಂಬ ಉದ್ಘೋಷಗಳಿಂದ ಪ್ರೀತಿ ತುಂಬಿದ ಕಣ್ಣುಗಳಿಂದ ನಮ್ಮನ್ನು ಸ್ವಾಗತಿಸುತ್ತಿದ್ದುದು ನಿಜವಾಗಲೂ ನಮ್ಮನ್ನು ರೋಮಾಂಚನಗೊಳಿಸಿದ್ದು ಹೌದು.

 

ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಪೂಜೆ ಪುನಸ್ಕಾರ ಶ್ಲೋಕಗಳು ಭಕ್ತಿಗೀತೆಗಳು ಗೋವಿಗೆ ಮತ್ತು ಹಿರಿಯರಿಗೆ ನಿಸ್ವಾರ್ಥವಾಗಿ ಸೇವೆ ಮಾಡುತ್ತಾ ಹೀಗೆ ಹಲವಾರು ರೀತಿಯಲ್ಲಿ ಮನಸೂರೆಗೊಳಿಸುವಂತ ಸಂಸ್ಕಾರ ಭರಿತವಾದ ಸಂಪ್ರದಾಯಗಳನ್ನಿಟ್ಟುಕೊಂಡು ಆಚರಣೆಯಲ್ಲಿರುವ ಇವರ ಕುಟುಂಬವನ್ನು ಗಮನಿಸುತ್ತಿದ್ದ ಆ ರಸ್ತೆಯ ಹಲವಾರು ಮಕ್ಕಳು ತಮ್ಮ ಪೋಷಕರು ಇವರತ್ತ ಚಿತ್ತೈಸಿ ನಾವು ಬರಬಹುದೇ!? ಎಂಬ ಪ್ರಶ್ನೆಗಳನ್ನಿಟ್ಟು ಕೇಳಿದರು.

 

ಅವರೆಲ್ಲರಿಗೂ ತೆರೆದ ಮನದಿಂದ ತೆರೆದ ಹಸ್ತಗಳಿಂದ ಮಕ್ಕಳನ್ನು ಅಪ್ಪಿಕೊಂಡು ಮಕ್ಕಳಲ್ಲಿ ಮಕ್ಕಳಾಗಿ ವಿದ್ಯಾರ್ಥಿಗಳಲ್ಲಿ ವಿದ್ಯಾರ್ಥಿಗಳಾಗಿ ಅವರೆಲ್ಲರಿಗೂ ಹಿಂದೂ ಧರ್ಮದ ಸಂಸ್ಕಾರ ಸಂಸ್ಕೃತಿ ಸಂಪ್ರದಾಯಗಳನ್ನು ಹೇಳಿಕೊಡುತ್ತಾ ಕರೋನದ ಮಹಾಮಾರಿ ಲಾಕ್ ಡೌನ್ ಸಂದರ್ಭವನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಂಡು ಮಕ್ಕಳನ್ನು ಇವತ್ತು ಸಂಸ್ಕಾರ ಭರಿತವಾಗಿ ಎದ್ದುಕಾಣುವಂತೆ ಮಾಡಿರುವ ಇದೆಲ್ಲದರ ಫಲ ಇವರ ಕುಟುಂಬಕ್ಕೆ ಸಲ್ಲುತ್ತದೆ.

 

ಸಂಸ್ಕೃತ ಭಾಷೆ ಸಂಸ್ಕೃತ ಶ್ಲೋಕಗಳು ಇವುಗಳನ್ನು ಉಚಿತವಾಗಿ ಯಾವುದೇ ಹಣದ ಅಪೇಕ್ಷೆಯಿಲ್ಲದೆ ತಮ್ಮ ಸಂಪ್ರದಾಯ – ತಮ್ಮದೇ ಕರ್ತವ್ಯ ಮರೆಯದೆ ಮಾಡಬೇಕು, ಅದೇ ರಾಷ್ಟ್ರದ ಜೀವಾಳ ಎನ್ನುವ ಭಾವನೆಯಿಂದ ತಮ್ಮ ಕುಟುಂಬ ಮಾಡುತ್ತಿರುವ ಆಚರಣೆಯಲ್ಲಿ ಆ ಇಡಿಯ ರಸ್ತೆಯ ಮಕ್ಕಳುಗಳು ತಾವೇ ತಾವಾಗಿ ಪಾಲ್ಗೊಂಡು ತಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಅಲ್ಲಿನ ಮಕ್ಕಳು ನೋಡಲು ಅದ್ಭುತ ಅವರು ತಮ್ಮ ತಂದೆ ತಾಯಿಯರಿಗೆ ಮುಂಜಾನೆ ಎದ್ದು ನಮಸ್ಕರಿಸಿ ಶ್ಲೋಕಗಳನ್ನು ಹೇಳಿ ಶಾಲೆಗೆ ತೆರಳುವ ಪರಿ ಕಲಿಸಿಕೊಟ್ಟಿದ್ದು, ಹಿರಿಯರಿಗೆ ಗೌರವಿಸಿ ನಮಸ್ಕರಿಸುವುದು ಮತ್ತು ಎಲ್ಲರನ್ನು ಸಮಾನ ಭಾವದಿಂದ ಕಾಣುವುದು ಈ ನಿಟ್ಟಿನಲ್ಲಿ ಶಾಲೆಯ ವಿದ್ಯಾಭ್ಯಾಸದ ಜೊತೆಜೊತೆಗೆ ನಮ್ಮ ಹಿಂದೂ ಧರ್ಮದ ನೈಜ ವಿದ್ಯಾಭ್ಯಾಸವನ್ನು ಯಾವುದೇ ಜಾತಿ -ಧರ್ಮ – ಪ್ರಾಯ- ಲಿಂಗ ಭೇದವಿಲ್ಲದೆ ಸಣ್ಣ 4.5ವರ್ಷದ ಪ್ರಾಯ ದಿಂದ ಹಿಡಿದು 84ವರ್ಷದ ಹಿರಿಯರವರೆಗೂ ಸೇರಿಸಿಕೊಂಡು ಮನೆಯ ಮೂಲಕವೇ ಅರಿವು ಮೂಡಿಸುತ್ತಿರುವ *ಶ್ರೀಮತಿ ಆಶಾ ರಾಜೇಶ್* ಮತ್ತು ತಮ್ಮ ಇಬ್ಬರು ಮಕ್ಕಳು *ಕುಮಾರಿ ವೇದಿಕಾ .ಕೆ.ಆರ್* ಮತ್ತು *ಕುಮಾರಿ. ನಮ್ರತಾ. ಆರ್ ಶ್ರೀವತ್ಸ* ಈ ಎರಡೂ ರತ್ನಗಳು ತಾಯಿಯ ತಂದೆಯ ಹೆಜ್ಜೆಯಂತೆ ತಾವು ಕೂಡ ನಡೆಯುತ್ತ ನುಡಿಯುತ್ತ, ಬೆಂಬಲವಾಗಿ ನಿಂತುಕೊಂಡು ತಾವೂ ಕೂಡ ಶ್ಲೋಕಗಳನ್ನ ಕಲಿತು ಆಚರಣೆಯಲ್ಲಿ ಇರಿಸಿಕೊಂಡು, ತಮ್ಮ ಮನೆಯನ್ನೇ ಮಂತ್ರಾಲಯವಾಗಿಸಿಕೊಂಡು- ಮನೆಯೇ ಮೊದಲ ಪಾಠಶಾಲೆ ಎಂಬ ನಾಣ್ನುಡಿಗೆ ತಕ್ಕಂತೆ

ಇಡಿಯ ಓಣಿಯನ್ನು ಮಕ್ಕಳ ಅದ್ಭುತ ಪರಿವರ್ತನೆಗೆ ಸಾಕ್ಷಿಯಾಗಿರುವ ಸಂಪೂರ್ಣ ಶ್ರೇಷ್ಠತೆಯ ಫಲ ಇವರಿಗೆ ಸಲ್ಲುತ್ತದೆ.

 

ವಿದ್ಯಾಧನಂ ಸರ್ವಧನ ಪ್ರಧಾನಂ ॥ ವಿದ್ಯಾದಾನವೇ ಸರ್ವ ಧನಕ್ಕಿಂತಲೂ ಮಿಗಿಲು ಮತ್ತು ಪ್ರಧಾನವಾದುದು ಎಂಬಂತೆ ಇವರು ಎಷ್ಟೋ ಸ್ಪಷ್ಟವಾದ ಉಚ್ಚಾರಣೆ ಇಲ್ಲದ ಮಕ್ಕಳಿಗೆ ಹೇಳಿಕೊಡುತ್ತಾ ಈಗ ಅವರಗಳು ಆರಾಮವಾಗಿ ಶ್ಲೋಕಗಳನ್ನು ಹೇಳುವ ಮಟ್ಟಕ್ಕೆ ಬೆಳೆದಿದ್ದಾರೆ ಎಂದರೆ ನಿಜ ವಾಗಿಯೂ ಅದ್ಭುತವೇ ಸರಿ.

ಈ ಶ್ರೇಷ್ಠವಿದ್ಯೆ ಸಂಸ್ಕೃತಿ ಮತ್ತು ವ್ಯಕ್ತಿತ್ವಕ್ಕೆ ಬಹಳಷ್ಟು ಗೌರವವನ್ನು ಪ್ರೀತಿಯನ್ನು ಹಾಗೂ ದೇಶದ ಬಗ್ಗೆ ಧರ್ಮದ ಬಗ್ಗೆ ಕಾಳಜಿಯಿಂದ ಹೊತ್ತುಕೊಂಡು ನಡೆಸುತ್ತಿರುವ ಶ್ರೀಮತಿ ಆಶಾ ರಾಜೇಶ್ ಮತ್ತು ಕುಟುಂಬ ಅವರ ಈ ಸೇವೆಗೆ ನನ್ನ ಕಡೆಯಿಂದ ಸಲಾಂ. ಜೈ ಹಿಂದ್. ವಂದೇ ಭಾರತ ಮಾತರಂ.

✒️ಪುರುಷೋತ್ತಮ್ ಅಗ್ನಿ. ಎಸ್

By admin