ನಗರದ ಸ್ವ್ವಾಂತ್ರಂತ್ರ್ಯ ಉದ್ಯಾನವನದಲ್ಲಿ ಇಂದು ಬೆಳಿಗ್ಗೆ ಕೆ.ಎಸ್. ಬದ್ರಿನಾರಯಣ ರವರು ಕಣ್ಣು ರೆಪ್ಪೆ ಮಿಟುಕಿಸದೇ ಸತತ 15 ನಿಮಿಷಗಳ ಕಾಲ ಸೂರ್ಯಪಾನ ಮಾಡಿದರು.
ಈ ಸಾಧನೆಯನ್ನು ಬದ್ರಿ ನಾರಾಯಣ ರವರು ತಮ್ಮ ತಾಯಿಗೋಸ್ಕರ ಮಾಡುತ್ತಿರುವುದಾಗಿ ತಿಳಿಸಿದ ಅವರು ನಮ್ಮ ತಾಯಿ ರಥ ಸಪ್ತಮಿಯಂದು ಹುಟ್ಟಿದ್ದು ಅವರಿಗಾಗಿ ಈ ಸಾಧನೆಯನ್ನು ಕೈಗೊಂಡಿದ್ದು ನನ್ನ ಈ ಸಾಧನೆ ಅವರಿಗೆ ಕಾಣಿಕೆಯಾಗಿ ನೀಡಲು ಅಭ್ಯಾಸವನ್ನು ಸತತವಾಗಿ ಅಭ್ಯಾಸ ಮಾಡಿ ಇನ್ನು ಸಿದ್ಧಿಸಿಕೊಂಡಿರುವುದಾಗಿ ಹೇಳಿದರು.
ಈ ಸಾಧನೆ ಸುಲಭವಲ್ಲ, ಸತತವಾಗಿ ಅಭ್ಯಾಸ ಮಾಡಿದರೆ ಮಾತ್ರ ಇದನು ಸಿದ್ಧಿಸಿಕೊಳ್ಳಬಹುದೆಂದು ತಿಳಿಸಿದ ಅವರು ಸೂರ್ಯಪಾನ ಅಭ್ಯಾಸದ ಜೊತೆಗೆ ಪ್ರಾಣಾಯಾಮವನ್ನು ಮಾಡಿದ ಅವರು ಪ್ರಾಣಾಯಾಮದಿಂದ ನಮ್ಮ ದೇಹದ 72 ಸಾವಿರ ನರಮಂಡಲಗಳು ಶುದ್ದಿಯಾಗುತ್ತದೆ ಇದರ ಜೊತೆಗೆ ಸೂರ್ಯಪಾನ ಮಾಡಿದರೆ ಆ ಶುದ್ಧಿ ಕರಣ ಇನ್ನು ಹೆಚ್ಚಾಗಿ ಆರೋಗ್ಯವಾಗಿರುಬಹುದೆಂದು, ಇದರ ಜೊತೆಗೆ ಸೂರ್ಯನಿಂದ ವಿಟಮಿನ್ ಡಿ ದೇಹದಲ್ಲಿ ಹೆಚ್ಚು ಶೇಖರಣೆಯಾಗುವುದಾಗಿ ತಿಳಿದರು.
ಸೂರ್ಯಪಾನದಿಂದ ಮೂರನೇ ಕಣ್ಣು ಅಕ್ಟಿವೇಟ್ ಆಗುತ್ತದೆಯೇ ಎಂಬ ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದ ಅವರು ಮೂರನೇ ಕಣ್ಣು ಎಂದರೆ ನಮ್ಮ ಮೆದುಳಿನಲ್ಲಿ ನರಮಂಡಲ ವ್ಯವಸ್ಥೆಯ ಮದ್ಯೆ ಭಾಗದಲ್ಲಿ ಫಿನಿಯನ್ ಗ್ಲಾಂಡ್ ಎಂಬ ಗ್ರಂಥಿಯು ಆಕ್ಟಿವೇಟ್ ಆಗುತ್ತದೆ ಎಂದು ತಿಳಿಸಿದರು.
ಬದ್ರಿ ನಾರಾಯಣ ರವರು ನಗರದ ನಂದಿನ ಲೇ ಔಟ್ ನಿವಾಸಿಯಾಗಿದ್ದು, ಇವರ ತಾಯಿ ಭಾರತಿ, ತಂದೆ ಶ್ರೀನಿವಾಸ್. ಜೀನವದಲ್ಲಿ ಇನ್ನೊಬ್ಬರಿಗೆ ನೆರವಾಗುವ ಮನಸ್ಸು, ಸಾಮಾಜಿಕ ಕಳಕಳಿ, ಏನ್ನಾದರೂ ಸಾಧಿಸುವ ತವಕ ಇವೆಲ್ಲವೂ ಒಂದೇ ವ್ಯಕ್ತಿಯಲ್ಲಿ ಇದ್ದರೆ, ಹೇಗಿರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಕೆ.ಎಸ್.ಬದ್ರಿನಾರಾಯಣರವರು. ಇವರು ನಮ್ಮ ಮೈಸೂರಿವರು ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವೇ.
ಬದ್ರಿ ನಾರಾಯಣ್ ವೃತ್ತಿಯಲ್ಲಿ ಸಾಪ್ಟ್‍ವೇರ್ ಇಂಜಿನಿಯರ್. ಮಲೇಶೀಯಾದಲ್ಲಿನ ಪ್ರತಿಷ್ಟಿತ ಕಂಪನಿಯೊಂದರಲ್ಲಿ ಕೆಲಸವನ್ನು ನಿರ್ವಹಿಸಿ ಮತ್ತೆ ಮೈಸೂರಿಗೆ ವಾಪಸ್ಸಾಗಿರುವ ಇವರು ಜೆóಮೋಟೊ ಕಂಪನಿಯ ಡೆಲಿವರಿ ಬಾಯ್‍ಯಾಗಿ ಕೆಲಸ ನಿರ್ವಹಿಸುತ್ತಿರುವ ಇವರು ತಮ್ಮ ಈ ವೃತ್ತಿಯ ಬಗ್ಗೆ ಇವರಿಗೆ ಒಂದು ರೀತಿಯ ಹೆಮ್ಮೆಯೂ ಇದೆ ಅದು ಹೇಗೆಂದರೆ, ಹೋಮ್ ಡೆÉಲಿವರಿಗಾಗಿ ತೆರಳುವ ಸಂದರ್ಭದಲ್ಲಿ ರಸ್ತೆಯಲ್ಲಿ ತೆರಳುವ ರಸ್ತೆ ಬದಿಯಲ್ಲಿ ನೀರು ಪೋಲಾಗುತ್ತಿದ್ದರೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಪೋಲಾಗುತ್ತಿರುವ ನೀರಿನ್ನು ಸರಿಪಡಿಸಲು ಸಲಹೆ ನೀಡುತ್ತಾರೆ, ಬೀದಿ ದೀಪ ಉರಿಯುತ್ತಿದ್ದ ಸಂದರ್ಭದಲ್ಲಿಯೂ ಸಂಬಂಧ ಪಟ್ಟ ಇಲಾಖೆಗೆ ದೂರವಾಣಿ ಕರೆ ಮಾಡಿ ಅವರ ಗಮನಕ್ಕೆ ತರುವ ಸಾಮಾಜಿಕ ಕಳಕಳಿಯ ಕೆಲಸವನ್ನು ಈ ವೃತ್ತಿಗೆ ಜೊತೆಗೆ ನಿರ್ವಹಿಸುತ್ತಿದ್ದಾರೆ.
ಇದರ ಜೊತೆಗೆ ಇವರು ರಸ್ತೆ ಬದಿಯಲ್ಲಿನ ಹಲವಾರು ಬಡವರಿಗೆ ತಮ್ಮ ಖರ್ಚಿನಲ್ಲೇ ಬಿಸ್ಕೇಟ್, ಹಣ್ಣು-ಹಂಪಲ, ನೀರಿನ ಬಾಟೆಲ್‍ಗಳನ್ನು ನೀಡುವ ಉದಾರ ಮನೋಭಾವ ಇವರದು.್ದ ಇಷ್ಟೇ ಅಲ್ಲದೇ, ಸ್ವಚ್ಚ ನಗರಿಗೆ ಸಹಕಾರಿಯಾಗುವಂತೆ ಕೆಲವರು ಸಿಕ್ಕ ಸಿಕ್ಕ ರಸ್ತೆ ಬದಿಯಲ್ಲೇ ಬಿಸಾಡಿರುವ ಮರು ಬಳಕೆಯ ಪ್ಲಾಸ್ಟಿಕ್ ಬಾಟೆಲ್‍ಗಳನ್ನು ಸಂಗ್ರಹಿಸಿ ಅದನ್ನು ಮತ್ತೆ ಮರುಬಳಕೆಗಾಗಿ ನಗರಪಾಲಿಕೆಯ ಪ್ಲಾಸ್ಟಿಕ್ ಸಂಗ್ರಹಲಾಯಕ್ಕೆ ನೀಡುವ ಇವರು ಮೈಸೂರು ಸ್ವಚ್ಚ ನಗರಿಗಾಗಿ ತಮ್ಮ ಕೈಲಾದ ಸೇವೆಯನ್ನೂ ಸಹ ಮಾಡುತ್ತಾ ಬಂದಿರವುದು ವಿಶೇಷವೇ.
ಜೊತೆಗೆ ಕಾಂಗ್ರೇಸ್ ಗಿಡ (ಪಾಥೇನಿಯಂ) ಎಲ್ಲೆಂದರಲ್ಲಿ ಬಹಳ ವೇಗವಾಗಿ ಹಬ್ಬುವ ಪಾರ್ಥೇನಿಯಂನ ಹೂ ಮನುಷ್ಯನ ಶ್ವಾಸಕೋಶಕ್ಕೆ ಹಾನಿಯುಂಟು ಮಾಡುತ್ತದೆ ಇದರಿಂದ ಉಸಿರಾಟದ ತೊಂದರೆಯಾಗುವ ಸಂಭವವಿದ್ದು, ಅದೂ ಕೋವಿಡ್-19 ಸಂದರ್ಭದಲ್ಲಿ ಇದು ಇನ್ನೂ ಹೆಚ್ಚು ಅಪಾಯಕಾರಿಯಾದ್ದರಿಂದ ಪಾರ್ಥೇನಿಯಂ ಗಿಡವನ್ನು ಕಂಡರೆ ಅದನ್ನು ಅಲ್ಲೇ ಕಿತ್ತು ಹಾಕುವ ಕೆಲಸವನ್ನು ಆಗಾಗ ನಿರ್ವಹಿಸುತ್ತಿರುತ್ತಾರೆ.
ಮೊದಲು ಯೋಗದಲ್ಲಿ ರಾಜಾಸನ ವೆನಿಸಿಕೊಂಡಿರುವ ಶೀರ್ಷಾಸನವನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಂಡ ಇವರು ಇದನ್ನೇ ಹಲವಾರು ಕಡೆ ಪ್ರದರ್ಶನ ನೀಡಿದ್ದು, ಹಲವಾರು ಪುರಾತನಸ್ಥಳ/ದೇವಾಲಯಗಳಾದ ಶ್ರೀರಂಗಪಟ್ಟಣ, ಬೇಲೂರು, ಹಳೇಬೀಡು, ಸೋಮನಾಥಪುರ, ತಲಕಾಡು, ತಮಿಳುನಾಡಿನ ರಾಮೇಶ್ವರಂ, ತಂಜಾವೂರು, ಚಿದಂಬರಂ ಮತ್ತು ಯುನೆಸ್ಕೋ, ಮಲೇಶಿಯಾ, ಕಾಂಬೋಡಿಯಾ ಸೇರಿದಂತೆ ಇನ್ನಿತರೆಡೆಗಳಲ್ಲಿ ಶೀರ್ಷಾಶನ ಪ್ರದರ್ಶನ ಮಾಡಿದ್ದು, ಜೊತೆಗೆ ಒಂದು ವರ್ಷದಲ್ಲೇ ಒಂದು ಸಾವಿರ ಪ್ರದರ್ಶನ ನೀಡಿ ವಿಶ್ವ ದಾಖಲೆ ಲಿಮ್ಕಾ ಬುಕ್ ರೆಕಾರ್ಡ್, ಇಂಡಿಯಾ ಆಫ್ ಬುಕ್ ರೆಕಾರ್ಡ್, ಏಷ್ಯಾ ಆಫ್ ಬುಕ್ ರೆಕಾಡ್, ಅಸಿಸ್ಟ್ ಆಫ್ ಬುಕ್ ರೆಕಾರ್ಡ್ ಸೇರಿದಂತೆ ಇನ್ನಿತರೇ ಹಲವಾರು ಸಂಘ ಸಂಸ್ಥೆಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ತಮಿಳುನಾಡಿನ ರಾಮೇಶ್ವರಂನಲ್ಲಿನ ಸಮುದ್ರದ ಮಧ್ಯದಲ್ಲಿ ಸಿಹಿ ನೀರು ದೊರಕುವ ಆಶ್ವರ್ಯದ ಸಿಹಿನೀರಿನ ಕಲ್ಯಾಣಿ ಸೇರಿದಂತೆ 108 ವಿವಿಧ ಸ್ಥಳಗಳಲ್ಲಿ ಬೆಳಿಗ್ಗೆ 07.00 ಗಂಟೆಯಿಂದ ಸಂಜೆ 07.00 ಗಂಟೆಯವರೆಗೆ ಒಂದೇ ದಿನದಲ್ಲಿ 108 ಸ್ಥಳಗಳಲ್ಲಿ ಶೀರ್ಷಾಶನದ ಪ್ರದರ್ಶನಕ್ಕೆ ಮತ್ತೊಮ್ಮೆ ವಿಶ್ವದಾಖಲೆ ಭಾಜನರಾಗಿರುವುದು ಇವರ ಮತ್ತೊಂದು ವಿಶೇಷತೆಯಾಗಿದೆ.
ಇವರ ಮತ್ತೊಂದು ಸಾಧನೆಯೆಂದರೆ ಡಾ||ಅಬ್ದುಲ್ ಕಲಾಂ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಸತತ 27 ನಿಮಿಷಗಳ ಕಾಲ ಕಣ್ಣರೆಪ್ಪೆ ಮಿಟುಕಿಸದೇ ಸೂರ್ಯನ ನೋಡಿದ ದಾಖಲೆಯು ಇವರ ಮುಡಿಗೇರಿದೆ. ಇವರು 12 ಗಂಟೆಯ ಸಮಯದಲ್ಲಾರೂ ಸರಿ, ಮಧ್ಯಾಹ್ನ 2.00 ಗಂಟೆಯಲ್ಲಿಯು ಕಣ್ಣರೆಪ್ಪೆ ಮಿಟುಕಿಸದೇ ಸೂರ್ಯನನ್ನು ದಿಟ್ಟಿಸುವ ಕಲೆ ಇವರಿಗೊಲಿದಿದೆ.
ಕೋವಿಂಡ್-19ನ ಲಾಕ್‍ಡೌನ್ ಸಂದರ್ಭದಲ್ಲಿ ಇವರು ವಿವಿಧ ಬಗೆಯ ಬೆಂಕಿಪೊಟ್ಟಣಗಳ ಸಂಗ್ರಹವನ್ನು ಮಾಡಿ ಅದನ್ನೆಲ್ಲಾ ಉದ್ದದ ಪೆಟ್ಟಿಗೆಗೆ ಅಂಟಿಸಿ ಅದನ್ನೇ ತಮ್ಮ ವಿಭಿನ್ನ ಶೈಲಿಯ ದಾಖಲೆಯನ್ನಾಗಿಸಿಕೊಂಡಿದ್ದಾರೆ.
ಸಮಾಜಕ್ಕಾಗಿ ಅನೇಕ ರೀತಿಯಲ್ಲಿ ಸೇವೆಸಲ್ಲಿಸುತ್ತಿರುವ ಇವರು ತಮ್ಮ ಜೀವನÀ ಸಾಧನೆಯನ್ನು ತಮ್ಮ ತಾಯಿಗಾಗಿ ಎಂದು ಹೇಳುತ್ತಾರೆ. ನನ್ನ ಈ ಸಾಧನೆಯನ್ನು ನೋಡಿ ಅವರು ತೃಪ್ತಿ ಪಟ್ಟರೆ ನನ್ನ ಜೀವನ ಸಾರ್ಧಕವಾಗುತ್ತದೆ ಎಂದು ಹಂಬಲಿಸುವ ಇವರ ಸಮಾಜಿಕ ಸೇವೆಗೆ ಇನ್ನಷ್ಟು ಪ್ರಶಸ್ತಿಗಳು ಇವರ ಮುಡಿಗೇರಲಿ.