ಹಿಮಾಲಯ ಫೌಂಡೇಷನ್ ಹಾಗೂ ಸುವರ್ಣ ಬೆಳಕು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಇಂದು ಬೆಳಗ್ಗೆ (ಏಪ್ರಿಲ್ 9) ನಗರದ ಸಿದ್ದಪ್ಪ ಚೌಕದ ಬಳಿ ಬಡ 10 ಕುಟುಂಬಗಳಿಗೆ ದಿನನಿತ್ಯ ಬಳಸುವ ಆಹಾರ ದಿನಸಿ ಸಾಮಗ್ರಿ ಕಿಟ್ ವಿತರಣೆ ಮಾಡಲಾಯಿತು.

ನಂತರ ಮಾತನಾಡಿದ ಹಿರಿಯ ಸಮಾಜಸೇವಕ ಡಾ.ಕೆ.ರಘುರಾಂ ವಾಜಪೇಯಿ ಅವರು ಮಹಾಮಾರಿ ಕರೋನದಿಂದ ಸಂಕಷ್ಟದಿಂದ ಜನ ಸಾಮಾನ್ಯರು ಜೀವನ ನಡೆಸುವುದೇ ದುಸ್ತರವಾಗಿರುವ ಈ ದಿನಗಳಲ್ಲಿ ಆರ್ಥಿಕವಾಗಿ ಹಿಂದುಳಿದ ದಿನಗೂಲಿ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸುತ್ತಿದ್ದೇವೆ. ಇದು ಸಮಾಜಕ್ಕೆ ನಮ್ಮ ಕೈಲಾದ ಅಳಿಲು ಸೇವೆ. ಮುಂದಿನ ದಿನಗಳಲ್ಲಿ ಈ ಸಂಕಷ್ಟ ದೂರವಾಗಿ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ದಾಸ್ತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ.ತಿಮ್ಮಯ್ಯ, ಹಿಮಾಲಯ ಫೌಂಡೇಷನ್ ಅಧ್ಯಕ್ಷ ಎನ್.ಅನಂತ, ಕಾರ್ಯದರ್ಶಿ ಹರ್ಷವರ್ಧನ, ಸುವರ್ಣ ಬೆಳಕು ಸಂಸ್ಥೆಯ ಅಧ್ಯಕ್ಷ ಮಹೇಶ್ ನಾಯಕ್, ಮಹೇಶ್, ವಾಸು, ಚಂದ್ರು ಇನ್ನಿತರರು ಉಪಸ್ಥಿತರಿದ್ದರು.

. ಕಾರ್ಯಕ್ರಮದಲ್ಲಿ ಹಿರಿಯ ಸಮಾಜಸೇವಕ ಡಾ.ಕೆ,ರಘುರಾಂ ವಾಜಪೇಯಿ, ದಾಸ್ತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ.ತಿಮ್ಮಯ್ಯ, ಹಿಮಾಲಯ ಫೌಂಡೇಷನ್ ಅಧ್ಯಕ್ಷ ಎನ್.ಅನಂತ, ಕಾರ್ಯದರ್ಶಿ ಹರ್ಷವರ್ಧನ, ಸುವರ್ಣ ಬೆಳಕು ಸಂಸ್ಥೆಯ ಅಧ್ಯಕ್ಷ ಮಹೇಶ್ ನಾಯಕ್, ಮಹೇಶ್, ವಾಸು, ಚಂದ್ರು ಇನ್ನಿತರರನ್ನು ಕಾಣಬಹುದು.

 

By admin