ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮದ ದನಗಳ ಜಾತ್ರೆಯಲ್ಲಿ ಪ್ರಗತಿಪರ ರೈತ ಹರದೂರು ಮಲ್ಲೇಗೌಡ ಸುಮಾರು 1ಲಕ್ಷದ 50 ಸಾವಿರ ಮೌಲ್ಯದ ಹೋರಿಗಳನ್ನು ವಾದ್ಯಗೋಷ್ಠಿಯೊಂದಿಗೆ ಜಾತ್ರೆಯಲ್ಲಿ ಪ್ರದರ್ಶನ ನಡೆಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಕೆ ವೆಂಕಟೇಶ್ ಮಾತನಾಡಿ ರೈತರುಗಳು ಕೃಷಿ ಚಟುವಟಿಕೆಗಳಿಗೆ ತಮಗೆ ಇಷ್ಟವಾದ ರಾಸುಗಳನ್ನು ಕೊಳ್ಳಲು ದನದ ಜಾತ್ರೆಗಳು ಅನುಕೂಲವಾಗುತ್ತವೆ ಎಂದರು. ಪ್ರಗತಿಪರ ರೈತ ಹರದೂರು ಮಲ್ಲೇಗೌಡ ಮಾಧ್ಯಮದೊಂದಿಗೆ ಮಾತನಾಡಿ ಕಳೆದ 8 ವರ್ಷಗಳಿಂದ ಹೋರಿಗಳನ್ನು ಸಾಕುತ್ತಾ ಬಂದಿದ್ದೇವೆ .ಸರ್ಕಾರವು ಮೂಲಭೂತ ಸೌಕರ್ಯ ಒದಗಿಸಿ ದನಗಳ ಜಾತ್ರೆ ಆಯೋಜನೆ ಮಾಡಬೇಕು ಕೊರೋನಾ ಇರುವುದರಿಂದ ಸರ್ಕಾರ ಯಾವುದೇ ಮೂಲಭೂತ ಸೌಕರ್ಯ ಒದಗಿಸಿಲ್ಲ ಎಂದರು . ಹೋರಿಗಳಿಗೆ ಹೂವಿನಿಂದ ಅಲಂಕಾರ ಮಾಡಿದ್ದು ಭಾರೀ ಜಾನುವಾರು ಪ್ರಿಯರ ಗಮನ ಸೆಳೆಯಿತು.
ಕೃಷಿಕರಾದ ಜಾನುವಾರು ಪ್ರಿಯರು ಭಾರೀ ಕುತೂಹಲದಿಂದ ಪ್ರದರ್ಶನ ವೀಕ್ಷಿಸಿದರು.
.ಈ ಸಂದರ್ಭದಲ್ಲಿ ರೈತರಾದ ಮೈಲಾರಿಗೌಡ ,ಗೋವಿಂದೇಗೌಡ, ಸಣ್ಣ ಕಾಳೇಗೌಡ, ಮಲ್ಲೇಶ್, ಪುಟ್ಟರಾಜು , ಅನಿತಮ್ಮ ದಿಲೀಪ್ , ಸಾರ್ವಜನಿಕರು ಹಾಜರಿದ್ದರು .