ಏಪ್ರಿಲ್ ಇಪ್ಪತ್ತು ರಂದು ರಂದು ಕೂಡಲಸಂಗಮದಲ್ಲಿ ನಡೆಯಲಿರುವ ಸತ್ಯಾಗ್ರಹ ಪಂಚಮಶಾಲಿ ಮತ್ತು ಲಿಂಗಾಯಿತ ಗೌಡ ಸಮುದಾಯಕ್ಕೆ ಮೀಸಲಾತಿಗೆ ಸಮಾಜವು ಕೊಟ್ಟ ಅಂತಿಮ ಗಡುವು ಮುಗಿದ ಕಾರಣ ಕೂಡಲ ಸಂಗಮ ಪಂಚಮಶಾಲಿ ಜಗದ್ಗುರು ಪೀಠದಿಂದ ಬಸವಣ್ಣನವರ ಐಕ್ಯಸ್ಥಳ ರವರೆಗೆ ಪಾದಯಾತ್ರೆ .

ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಐತಿಹಾಸಿಕ ಐದನೇ ಹಂತದ ಪಾದಯಾತ್ರೆಯನ್ನು ಕೂಡಲಸಂಗಮದಲ್ಲಿ ನಡೆಯಲಿದೆ . ಈ ಕಾರ್ಯಕ್ರಮದಲ್ಲಿ ಮೈಸೂರು ಪ್ರಾಂತ್ಯದ ಲಿಂಗಾಯತ ಗೌಡ ಸಮುದಾಯದ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ .ಎಲ್ಲಾ ಜಿಲ್ಲೆಗಳ ಘಟಕಗಳ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಕಾರ್ಯದರ್ಶಿಗಳು ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.