ವಿದ್ವಾನ್ ಶ್ರೀ ಟಿ ಎಂ ಕೃಷ್ಣ ಕೇವಲ ಶ್ರೇಷ್ಠಮಟ್ಟದ ಸಂಗೀತಗಾರರಷ್ಟೇ ಅಲ್ಲ, ಸಂಗೀತವನ್ನು ಕುರಿತು
ಆಳವಾಗಿ ಅಭ್ಯಾಸ ಮಾಡಿ ಅತ್ಯಂತ ಮೌಲಿಕವಾದ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಕೃಷ್ಣ ಅವರು
ವಿದ್ವಾನ್ ಶ್ರೀ ಬಿ ಸೀತಾರಾಮ ಶರ್ಮ ಅವರಲ್ಲಿ ಸಂಗೀತ ಶಿಕ್ಷಣ ಪ್ರಾರಂಭಿಸಿ, ನಂತರ ರಾಗ-ತಾನ-ಪಲ್ಲವಿ
ಕುರಿತಂತೆ ಶ್ರೀ ಚೆಂಗಲ್‌ಪೇಟ್ ರಂಗನಾಥನ್ ಅವರಲ್ಲಿ ತರಬೇತಿ ಪಡೆದರು. ಸೆಮ್ಮಂಗುಡಿ ಶ್ರೀ ಶ್ರೀನಿವಾಸ
ಅಯ್ಯರ್ ಅವರಲ್ಲಿ ಉನ್ನತ ಶಿಕ್ಷಣ ಪಡೆದರು. ಸಂಗೀತದಲ್ಲಿ ನಿರಂತರವಾದ ಹುಡುಕಾಟದಲ್ಲಿ ತೊಡಗಿರುವ
ಕೃಷ್ಣ, ಸಂಗೀತ ಪ್ರಸ್ತುತಿಯಲ್ಲಿ ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡಿದ್ದಾರೆ.

ಅವರ ಸದರನ್ಮ್ಯೂಸಿಕ್, ಸೆಬೆಸ್ಟಿಯನ್ ಅಂಡ್ ಸನ್ಸ್ ಇತ್ಯಾದಿ ಕೃತಿಗಳು ಸಂಗೀತ ಕ್ಷೇತ್ರದಲ್ಲಿ ಒಂದು ಅಲೆಯನ್ನೇ ಸೃಷ್ಟಿಸಿದೆ.ಅವರಿಗೆ ರಾಮೋನ್ ಮ್ಯಾಗ್ಸೆಸೇ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ.


ವಿದ್ವಾನ್ ಶೇಕ್ ಮಹಬೂಬ್ ಸುಭಾನಿ ಮತ್ತು ವಿದುಷಿ ಕಾಲಿಶಾಬೀ

ಪದ್ಮಶೀ ಪುರಸ್ಕೃತ ವಿದ್ವಾನ್ ಶೇಕ್ ಮಹಬೂಬ್ ಸುಭಾನಿ ಮತ್ತು ವಿದುಷಿ ಕಾಲಿಶಾಬೀ ದಂಪತಿಗಳುಅತ್ಯಂತ ಪ್ರತಿಭಾವಂತ ನಾಗಸ್ವರವಾದಕರು. ಸಂಗೀತ ಕುಟುಂಬಕ್ಕೆ ಸೇರಿದ ದಂಪತಿಗಳು ಸಂಗೀತದಲ್ಲಿ ಹೆಚ್ಚಿನತರಬೇತಿಯನ್ನು ವಿದ್ವಾನ್ ಶೇಕ್ ಚಿನ್ನಾ ಮೌಲಾನ್ ಸಾಬ್ ಅವರಿಂದ ಪಡೆದರು. ಇವರು ಶೃಂಗೇರಿ ಶಾರದಾಪೀಠದ ಆಸ್ಥಾನ ವಿದ್ವಾಂಸರು. ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.