ಮೈಸೂರು . ಮೈಸೂರಿನ ಸುಣ್ಣದಕೇರಿ ಗಂಗಾಮತಸ್ಥರ ಸಮುದಾಯ ಭವನದ ಸಭಾಂಗಣದಲ್ಲಿ ಇಂದು ಬಿಪಿಎಲ್ ಮತ್ತು ಎಪಿಎಲ್ ಕಾರ್ಡುದಾರರಿಗೆ ಹೆಲ್ತ್ ಕಾರ್ಡ್ ನೋಂದಣಿ ಮಾಡಲಾಯಿತು.ಆರೋಗ್ಯ ಮತ್ತು ಕ್ಷೇಮ ಕೇಂದ್ರ ಮತ್ತು ಗಂಗಾಮತಸ್ಥತ ಸಂಘ ಸುಣ್ಣದಕೇರಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಹೆಲ್ತ್ ಕಾರ್ಡ್ ನೊಂದಣಿಯಲ್ಲಿ ಸ್ಥಳೀಯ ನಿವಾಸಿಗಳು ಹಿರಿಯ ನಾಗರೀಕರು ಯುವಕ ಯುವತಿಯರು ನೊಂದಣಿ ಸೌಲಭ್ಯ ಪಡೆದುಕೊಂಡುರು.

ಈ ಸಂದರ್ಭ ಮಾತನಾಡಿದ ಗಂಗಮತಸ್ಥರ ಸಂಘದ ಮುಖ್ಯಸ್ಥರಾದ ಗೋಪಣ್ಣ ಅವರು, ಬಡತನವು ಆರೋಗ್ಯಕ್ಕೆ ಅಡ್ಡಿಯಾಗಬಾರದು. ಪ್ರತಿಯೊಬ್ಬರಿಗೂ ಉಚಿತವಾಗಿ ಚಿಕಿತ್ಸೆ ನೀಡುವ ಸಲುವಾಗಿ ಆರೋಗ್ಯ ಮತ್ತು ಕ್ಷೇಮ ಕೇಂದ್ರ ದಿಂದ್ದ ಎಲ್ಲಾರಿಗೂ ಈ ಯೋಜನೆ ಸಿಗುವಂತೆ ಆಗಬೇಕು ತಿಳಿಸಿದರು.

ನಂತರ ಮಾತನಾಡಿದಸುವರ್ಣ ಬೆಳಕು ಫೌಂಡೇಷನ್ ಅಧ್ಯಕ್ಷರಾದ ಮಹೇಶ್ ರವರು ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಕಾಪಾಡಿಕೊಳ್ಳವುದೇ ಒಂದು ದೊಡ್ಡ ಜವಾಬ್ದಾರಿಯಾಗಿದೆ.ಅದರಲ್ಲು ಆಸ್ಪತ್ರೆಗೆ ಒಮ್ಮೆ ದಾಖಲಾದರೆ ಖರ್ಚು ಭರಿಸುವ ಶಕ್ತಿ ಇಲ್ಲದಂತಾಗುವುದು.ಬಡವುರು,ಮಧ್ಯಮವರ್ಗದವರಿಗೆ ಇಲ್ಲಿ ನೆಡಯುತ್ತಿರುವ ಹೆಲ್ತ್ ಕಾರ್ಡ್ ನೊಂದಣಿ ಉಪಯುಕ್ತವಾಗಲಿದೆ ಎಂದರು.ನೊಂದಣಿ ಕಾರ್ಯಕ್ರಮದಲ್ಲಿ ಗಂಗಮತಸ್ಥರ ಸಮುದಾಯ ಭವನದ ಮುಖ್ಯಸ್ಥರಾದ ಗೋಪಣ್ಣ,ಅಶ್ವಥ್, ದಾಸಪ್ಪ,ಮಹೇಶ್,ಸುವರ್ಣ ಬೆಳಕು ಫೌಂಡೇಷನ್ ಅಧ್ಯಕ್ಷರು, ಹಾಜರಿದ್ದರು.