ಮೈಸೂರು: 7 ಮನುಷ್ಯ ಇಂದಿನ ಸ್ಥಿತಿಯಲ್ಲಿ ಸಾಕಷ್ಟು ಸವಾಲಿನ ನಡುವೆ ತನ್ನ ಜೀವನವನ್ನು ನಡೆಸುತ್ತಿದ್ದಾರೆ ಇದರೊಂದಿಗೆ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮಧುಮೇಹ ತಜ್ಞ ಡಾ.ರೇಣುಕಾಪ್ರಸಾದ್ ತಿಳಿಸಿದರು.


ನಗರದ ಸುಣ್ಣದಕೇರಿ ೮ನೇ ಕ್ರಾಸ್‌ನಲ್ಲಿರುವ ಗಂಗಾಮತಸ್ಥರ ಸಮುದಾಯ ಭವನದಲ್ಲಿ ಸುವರ್ಣ ಬೆಳಕು ಫೌಂಡೇಷನ್ ವತಿಯಿಂದ ಡಾಕ್ಟರ್ ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆ ಹಾಗೂ ನ್ಯೂ ಡಯಾ ಕೇರ್ ಸೆಂಟರ್ & ಪಾಲಿಕ್ಲಿನಿಕ್ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವ ಆರೋಗ್ಯ ದಿನವನ್ನು ಬಹಳ ಹಿಂದಿನಿಂದಲೂ ಜಾಗೃತಿ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಿಕೊಂಡು ಬಂದಿದ್ದೇವೆ. ಆರೋಗ್ಯ ಸುಧಾರಣೆ ನಮ್ಮ ಮೊದಲ ಆದ್ಯತೆಯಾಗಿರಬೇಕು. ಪ್ರಸ್ತುತದಲ್ಲಿ ಕಳೆದೆರೆಡು ವರ್ಷಗಳಲ್ಲಿ ಅನಾರೋಗ್ಯದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ.

ಹಾಗಾಗಿ ಎಲ್ಲರೂ ತಮ್ಮ ಕುಟುಂಬ ಮತ್ತು ತಮ್ಮ ಊರಿನ ಜನರಲ್ಲಿ ಆರೋಗ್ಯ ಜಾಗೃತಿಯನ್ನು ತಂದುಕೊಳ್ಳಬೇಕು. ನಾವು ಚೆನ್ನಾಗಿದ್ದರೆ ಕುಟುಂಬ ಚೆನ್ನ. ಕುಟುಂಬ ಚೆನ್ನಾಗಿದ್ದರೆ. ಊರು ಚೆನ್ನ ಹೀಗೆ ಎಲ್ಲರೂ ಒಗ್ಗೂಡಿ ಆರೋಗ್ಯಯುತವಾದ ಪರಿಸರವನ್ನು ನಮ್ಮ ಸುತ್ತಮುತ್ತ ನಿರ್ಮಿಸೋಣ. ಎಲ್ಲರೂ ಆರೋಗ್ಯದಿಂದ ಬದುಕೋಣ ಎಂದರು.


(Our planet, our health)ನಮ್ಮ ಗ್ರಹ ನಮ್ಮ ಆರೋಗ್ಯ ಎಂಬ ಧ್ಯೇಯವಾಕ್ಯದೊಂದಿಗೆ ಸುತ್ತಮುತ್ತಲಿನ ವಾತಾವರಣವನ್ನು ಸಹ ಚೆನ್ನಾಗಿ ಇಟ್ಟುಕೊಳ್ಳಬೇಕು. ಕಳೆದ ಎರಡು ಮೂರು ವರ್ಷಗಳಿಂದ ಉತ್ತಮ ಆರೋಗ್ಯ ಹಾಗೂ ಜೀವನಕ್ಕಾಗಿ ನಾವು ಸಾಕಷ್ಟು ಪ್ರಯತ್ನಿಸುತ್ತಿದ್ದೇವೆ. ನಮ್ಮ ಗ್ರಹ ನಮ್ಮ ಆರೋಗ್ಯ ಎಂಬ ಧ್ಯೇಯವಾಕ್ಯದೊಂದಿಗೆ ಸುತ್ತಮುತ್ತಲಿನ ವಾತಾವರಣವನ್ನು ಸಹ ಚೆನ್ನಾಗಿ ಇಟ್ಟುಕೊಳ್ಳಬೇಕು. ಕಳೆದ ಎರಡು ಮೂರು ವರ್ಷಗಳಿಂದ ಉತ್ತಮ ಆರೋಗ್ಯ ಹಾಗೂ ಜೀವನಕ್ಕಾಗಿ ನಾವು ಸಾಕಷ್ಟು ಪ್ರಯತ್ನಿಸುತ್ತಿದ್ದೇವೆ.

ರೋಗಗಳಲ್ಲಿ ಸಕ್ಕರೆ ಖಾಯಿಲೆಯೂ ಸಹ ಒಂದಾಗಿದೆ. ಇದರಿಂದ ಸಾಕಷ್ಟು ಅಂಗಾಂಗಗಳು ದುರ್ಬಲಗೊಂಡು ಜೀವವನ್ನೇ ಕಳೆದುಕೊಳ್ಳುವ ಸಂದರ್ಭಗಳೂ ಸಹ ಎದುರಾಗುತ್ತಿದೆ. ಆದ್ದರಿಂದ ತಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸುವರ್ಣ ಬೆಳಕು ಫೌಂಡೇಶನ್‌ನ ಅಧ್ಯಕ್ಷ ಮಹೇಶ್ ಮಾತನಾಡಿ, ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಸುಣ್ಣದ ಕೇರಿ ಬಡಾವಣೆಯ ನಿವಾಸಿಗಳಿಗಾಗಿ ಕಣ್ಣಿನ ತಪಾಸಣೆ ಹಾಗೂ ಮಧುಮೇಹ ತಪಾಸಣೆಯನ್ನು ಏರ್ಪಡಿಸಲಾಗಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಜನತೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಡಾಕ್ಟರ್ ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆಯ ಮಾರ್ಕೆಟಿಂಗ್ ಮ್ಯಾನೇಜರ್ ರವಿ. ಎನ್, ಸುವರ್ಣ ಬೆಳಕು ಫೌಂಡೇಶನ್‌ನ ಉಪಾಧ್ಯಕ್ಷ ರವಿ ಭಗೀರಥ್, ಗೋಪಣ್ಣ, ಅಶ್ವಥ್, ಡಾ|ಪ್ರಭುಶಂಕರ್,ಕಿಶೋರ್, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.