ಸ್ಪಂದನ ವತಿಯಿಂದ ಕಾರ್ಗಿಲ್ ವಿಜಯೋತ್ಸವ ದಿವಸದ 22ನೇ ವರ್ಷದ ಆಚರಣೆಯನ್ನು ಕುವೆಂಪುನಗರದ ಗಂಡ-ಭೇರುಂಡ ಉದ್ಯಾನವನದಲ್ಲಿ ಜುಲೈ 26 ರಂದು ನೆರವೇರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಎಂ. ಜಯಶಂಕರ್ ಕಾರ್ಗಿಲ್ ಯುದ್ದದಲ್ಲಿ ಹುತಾತ್ಮರಾದವರಿಗೆ ನುಡಿನಮನದ ಮೂಲಕ ಗೌರವ ಸಲ್ಲಿಸುತ್ತಾ “ನಮ್ಮ ದೇಶ ನಮ್ಮ ಹೆಮ್ಮೆ, , ” ನಮ್ಮ ಹೆಮ್ಮೆ, ನಮ್ಮ ವೀರಯೋಧರು ಎಂಬಂತೆ ಯೋಧರ ತ್ಯಾಗ ಶೌರ್ಯವನ್ನು ನಮ್ಮ ದೇಶ ಸದಾಕಾಲ ಸ್ಮರಿಸುತ್ತದೆ ಎಂದರು.
1999 ಮೇ ನಲ್ಲಿ ಪಾಕಿಸ್ತಾನದ ಕುತಂತ್ರದಿಂದ ವಶಪಡಿಸಿಕೊಂಡಿದ್ದ ಪ್ರದೇಶಗಳನ್ನು ಮರಳಿಪಡೆಯಲು “ಆಪರೇಷನ್ ವಿಜಯ್ ” ಎಂಬ ಹೆಸರಿನಲ್ಲಿ ಕಾರ್ಯಾಚರಣೆ ಪ್ರಾರಂಭವಾಗಿ, ಸತತ 60 ದಿವಸಗಳು ಯುದ್ಧ ನಡೆದು ಜುಲೈ 26ರಂದು ವೀರಯೋಧರ ಕೆಚ್ಚೆದೆ -ಸಾಹಸ, ಬಲಿದಾನ, ಜೀವವನ್ನೇ ಮುಡುಪಾಗಿಟ್ಟು ಹೋರಾಡಿದಿದುರ ಫಲವಾಗಿ ವಿಜಯಿಗಳಾಗಿ ವಿಜೃಂಭಿಸಿದರು. ಈ ಯುದ್ಧದಲ್ಲಿ 527 ಯೋಧರ ಬಲಿದಾನವಾಯಿತು.
ಚಳಿ,ಮಳೆ, ಗಾಳಿ, ಬಿಸಿಲು ಎನ್ನದೆದೇಶಕಾಯುವ ಸೈನಿಕರನ್ನು ಪ್ರತಿ ದಿನವೂ ನೆನೆದು ಕರ್ತವ್ಯ ಪ್ರಾರಂಭ ಮಾಡೋಣ.
“ನಮ್ಮ ಸೈನಿಕರಿಗೊಂದು ಬಿಗ್ ಸಲ್ಯೂಟ್” ಎಂದು ಹೇಳಿ, ಆಹ್ವಾನಿತರೆಲ್ಲರಿಗೂ ಸ್ವಾಗತ ಕೋರಿದರು.
ಇದೇ ಸಂದರ್ಭದಲ್ಲಿ ಸಾಧ್ವಿ ಪತ್ರಿಕೆಯ ಶ್ರೀ ಜಯಶಂಕರ್ ಬದನಗುಪ್ಪೆ ಮಾತನಾಡಿ , ಗಡಿಯಲ್ಲಿ ಕಾಯುವ ಯೋಧರ ಕಷ್ಟ ಹಾಗೂ ಯೋಧ ಹುತಾತ್ಮ ಯೋಧರ ಕುಟಂಬಗಳ ಜೀವನದ ಪರಿಸ್ಥಿತಿ ಬಗ್ಗೆ ಎಳೆ ಎಳೆಯಾಗಿ ವಿವರಿಸಿದರು. ಇದಲ್ಲದೆವಿಶೇಷ ಆಹ್ವಾನಿತರಾದ ಡಾ.ಎಂ.ಎಸ್ ಪ್ರಭುಲಿಂಗಸ್ವಾಮಿ, ಶ್ರೀ ನರಸಿಂಹಮೂರ್ತಿ, ಶ್ರೀಧರ್, ಶ್ರೀ ಮಹದೇವ ಯೋಧರ ದೇಶ ಸೇವೆಯನ್ನು ಶ್ಲಾಘಿಸಿದರು.
ಕುವೆಂಪುನಗರದ ವಾಯು ವಿಹಾರಿಗಳು ಸಮಾರಂಭದಲ್ಲಿ ಭಾಗಿಯಾಗಿ ದೇಶ ಪ್ರೇಮವನ್ನುಮೆರೆದರು. ಕಾರ್ಗಿಲ್ ವಿಜಯೋತ್ಸವದ ಸಂಕೇತವಾಗಿ ಶ್ರೀ ಎಂ.ಜಯಶಂಕರ್ ರವರು ಎಲ್ಲರಿಗೂ ಜಿಲೇಬಿ ಹಂಚಿ ಧನ್ಯವಾದಗಳನ್ನು ತಿಳಿಸಿದರು.