ಬೆಟ್ಟದಪುರ: ಪಿರಿಯಾಪಟ್ಟಣ ತಾಲ್ಲೂಕಿನ ಭುವನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಸಂಘದ ನಿರ್ದೇಶಕ ಹರೀಶ್ ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಪ್ರತಿಸ್ಪರ್ಧಿಯಾಗಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಶ್ರೀಮತಿ ಪ್ರೇಮಾರವರು ಹರೀಶ್ ರವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದರು.ನೂತನ ಅಧ್ಯಕ್ಷ ಹರೀಶ್ ಮಾತನಾಡಿ ನನ್ನನ್ನ ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಈ ಬಾರಿ ರೈತರ ಕೃಷಿ ಚಟುವಟಿಕೆಗಳಿಗೆ ಶುನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು ಸಹಕಾರ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದರು. ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವೆಂಕಟರಮಣಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ , ನಿರ್ದೇಶಕರುಗಳಾದ ಲೋಹಿತ, ಮಹಾದೇವ, ಗೌರಮ್ಮ,ಬೋರಪ್ಪ, ಬೇಲೂರಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಿತಾಶಂಕರ್, ಸದಸ್ಯರಾದ ಜೋಗನಹಳ್ಳಿ .ಪಿ. ದೇವರಾಜ ತೋಪೆಗೌಡ, ಬಸವರಾಜು, ರವಿ, ಮುಖಂಡರಾದ ಬಿ.ಟಿ. ರಾಜೇಂದ್ರ, ಕೆ.ಬಿ ಮೂರ್ತಿ. ತವ್ಮ್ಮಯ್ಯನಾಯ್ಕ. ಬಿ.ಕೆ ಲೋಕೇಶ್. ವೆಂಕಟೇಶ್ ಜೋಗನಹಳ್ಳಿ, ಪ್ರಭು ರಾಮಶೆಟ್ಟರು. ಲೆಕ್ಕ ಸಹಾಯಕ ರಾಜಶೇಖರ್ ಗ್ರಾಮಸ್ಥರು ಹಾಜರಿದ್ದರು.