ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಪ್ರಾಥಮಿಕ ಕೃಷಿಪತ್ತಿನಸಹಕಾರ ಸಂಘಕ್ಕೆ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಆರ್.ವೆಂಕಟೇಶ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಬಂಗಾರಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.
ಬುಧವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆರ್.ವೆಂಕಟೇಶ್, ಉಪಾಧ್ಯಕ್ಷ ಸ್ಥಾನಕ್ಕೆ ಬಂಗಾರಶೆಟ್ಟಿ ಇಬ್ಬರೇ ನಾಮಪತ್ರ ಸಲ್ಲಿಸಿದ್ದರು.
ಇತರೇ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಸಹಕಾರಸಂಘಗಳ ಉಪನಿಭಂದಕರ ಕಚೇರಿ ಅಧೀಕ್ಷಕ ನಾಗೇಶ್ ಇಬ್ಬರ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.
ಇದೇ ಸಂದರ್ಭದಲ್ಲಿ ನಿರ್ದೇಶಕರಾದ ಎಚ್.ಎಂ.ಮಹದೇವಶೆಟ್ಟಿ, ಪಿ.ರವಿಕುಮಾರ್, ಎಂ.ರಾಜಣ್ಣ, ಬಂಗಾರನಾಯಕ, ಎಸ್.ಪುಟ್ಟರಾಜಶೆಟ್ಟಿ, ಎಂ.ರವಿಕುಮಾರ್, ಷಪೀಅಹಮದ್, ಗಿರಿಜಮ್ಮ, ಸಾವಿತ್ರಿ, ಸುಮಾರಾಮಚಂದ್ರನಾಯಕ, ಗ್ರಾಮಪಂಚಾಯಿತಿ ಅಧ್ಯಕ್ಷೆ ಯಶೋಧ ನಾರಾಯಣಸ್ವಾಮಿ, ಸದಸ್ಯರು. ಪಿಎಸಿಸಿ ಸಿಇಒ ಸಿದ್ದರಾಜು ಸೇರಿದಂತೆ ಸಿಬ್ಬಂದಿ ಹಾಜರಿದ್ದರು.
ಹರದನಹಳ್ಳಿ ಪಿಎಸಿಸಿ ವ್ಯಾಪ್ತಿಯ ಬಂಡಿಗೆರೆ, ಚಂದುಕಟ್ಟೆಮೋಳೆ ಗ್ರಾಮದ ಮುಖಂಡರು, ಎಲ್ಲ ಸಮುದಾಯದ ಮುಖಂಡರು ಹಾಜರಿದ್ದು, ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಗ್ರಾಮಸ್ಥರು ಅಭಿನಂದಿಸಿದರು.