ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಾಲಗಾರರ ಕ್ಷೇತ್ರದ ನಿರ್ದೇಶಕರ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದಿಂದ ೧೧, ಸಾಲಗಾರರಲ್ಲದ ಕ್ಷೇತ್ರದಿಂದ ಒಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮದ ಉನ್ನತ್ತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರ, ಸಾಲಗಾರರಲ್ಲದ ಕ್ಷೇತ್ರದಿಂದ ಒಟ್ಟು ೨೨ ಮಂದಿಸ್ಪರ್ಧೆ ಮಾಡಿದ್ದರು.
ಸಾಲಗಾರರ ಕ್ಷೇತ್ರದಿಂದ ಎಚ್.ಎಂ.ಮಹದೇವಶೆಟ್ಟಿ, ಪಿ.ರವಿಕುಮಾರ್, ಎಂ.ರಾಜಣ್ಣ, ಬಂಗಾರಶೆಟ್ಟಿ, ಬಂಗಾರನಾಯಕ, ಎಸ್.ಪುಟ್ಟರಾಜಶೆಟ್ಟಿ, ಎಂ.ರವಿಕುಮಾರ್, ಆರ್.ವೆಂಕಟೇಶ್, ಷಪೀಅಹಮದ್, ಗಿರಿಜಮ್ಮ, ಸಾವಿತ್ರಿ ಆಯ್ಕೆಯಾದರು.
ಸಾಲಗಾರರಲ್ಲದ ಕ್ಷೇತ್ರದಿಂದ ಸುಮಾರಾಮಚಂದ್ರನಾಯಕ ಅವಿರೋಧವಾಗಿ ಆಯ್ಕೆಯಾದರು.
ಸಂಘದ ನೂತನ ನಿರ್ದೇಶಕರಿಗೆ ಸಹಕಾರಸಂಘಗಳ ಉಪನಿಭಂದಕರ ಕಚೇರಿ ಅಧೀಕ್ಷಕ ನಾಗೇಶ್ ಪ್ರಮಾಣಪತ್ರ ವಿತರಿಸಿದರು. ಹರದನಹಳ್ಳಿ, ಬಂಡಿಗೆರೆ, ಚಂದುಕಟ್ಟೆಮೋಳೆ ಗ್ರಾಮದ ಮುಖಂಡರು ನೂತನ ನಿರ್ದೇಶಕರನ್ನು ಅಭಿನಂದಿಸಿದರು. ಪಿಎಸಿಸಿ ಸಿಇಒ ಸಿದ್ದರಾಜು ಸೇರಿದಂತೆ ಸಿಬ್ಬಂದಿ ಹಾಜರಿದ್ದರು.