ಚಾಮರಾಜನಗರ ಜ.೭ ತಾಲೂಕಿನ ಹರದನಹಳ್ಳಿ ಪ್ರಾಥಮಿಕ ಕೃಷಿಪತ್ತಿನಸಹಕಾರ ಸಂಘಕ್ಕೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಆಯ್ಕೆಯಾದ


೧೨ ಮಂದಿ ನೂತನ ನಿರ್ದೇಶಕರಾದ ಎಚ್.ಎಂ.ಮಹದೇವಶೆಟ್ಟಿ, ಪಿ.ರವಿಕುಮಾರ್, ಎಂ.ರಾಜಣ್ಣ, ಬಂಗಾರಶೆಟ್ಟಿ, ಬಂಗಾರನಾಯಕ, ಎಸ್.ಪುಟ್ಟರಾಜಶೆಟ್ಟಿ, ಎಂ.ರವಿಕುಮಾರ್, ಆರ್.ವೆಂಕಟೇಶ್, ಷಪೀಅಹಮದ್, ಗಿರಿಜಮ್ಮ, ಸಾವಿತ್ರಿ ಸುಮಾರಾಮಚಂದ್ರನಾಯಕ ಅವರುಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಸ್ವಗ್ರಾಮ ಉಪ್ಪಿನಮೋಳೆಯ ನಿವಾಸದಲ್ಲಿ ಅವರನ್ನು ಭೇಟಿಮಾಡಿ ಅಭಿನಂದಿಸಿದರು.


ಇದೇವೇಳೆ ಮಾತನಾಡಿದ ಶಾಸಕರು’ ಸಂಘದ ನೂತನ ನಿರ್ದೇಶಕರು ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯಬೇಕು, ಷೇರುದಾರರ ಸಂಖ್ಯೆಯನ್ನು ಹೆಚ್ಚಳ ಮಾಡುವ ಮೂಲಕ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ರೈತರಿಗೆ ತಲುಪಿಸಬೇಕು ಎಂದು ಕಿವಿಮಾತು ಹೇಳಿದರು.


ಹರದನಹಳ್ಳಿ ಎಂಪಿಎಸ್ ಅಧ್ಯಕ್ಷ ರಂಗಸ್ವಾಮಿನಾಯಕ, ಗ್ರಾಪಂ ಸದಸ್ಯ ಮಂಜುನಾಥ್, ಕಲೀಂಉಲ್ಲಾ, ಆರ್.ರಮೇಶ್, ಮುಖಂಡರಾದ ಜಯಕುಮಾರ್, ರಾಜೇಶ್, ವೆಂಕಟರಾಮನಾಯಕ, ನಾರಾಯಣಸ್ವಾಮಿ, ಚನ್ನಬಸವಶೆಟ್ಟಿ. ನವೀನ್ ಕುಮಾರ್, ಗ್ರಾಪಂ ಮಾಜಿಅಧ್ಯಕ್ಷ ಕೃಷ್ಣ, ಕೃಷ್ಮರಾಜು, ರವಿ, ರಾಮಚಂದ್ರನಾಯಕ, ತಾಪಂ ಮಾಜಿ ಸದಸ್ಯ ರಾಜೇಶ್ ಹಾಜರಿದ್ದರು.