ಚಾಮರಾಜನಗರ: ತಾಲೂಕಿನ ಹರದನಹಳ್ಳಿ ಗ್ರಾಮ ಪಂಚಾಯಿತಿ ನಾಡ ಕಚೇರಿಯಲ್ಲಿ ಕಂದಾಯ ಇಲಾಖೆ ವತಿಯಿಂದ ಕಂದಾಯ ದಾಖಲೆಗಳು ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.
ಇದೇ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉಪತಹಸೀಲ್ದಾರ್ ಮಹದೇವಪ್ಪ, ಕಂದಾಯ ದಾಖಲೆ ಜನರ ಮನೆ ಬಾಗಿಲಿಗೆ ಕಾರ್ಯಕ್ರಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಜನಸಾಮಾನ್ಯರು ತಮಗೆ ಅವಶ್ಯವಾಗಿರುವ ದಾಖಲೆಗಳನ್ನು ಪಡೆಯಲು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವುದೇ ಯೋಜನೆಯ ಉದ್ದೇಶವಾಗಿದೆ ಎಂದರು.
ಸಾರ್ವಜನಿಕರು, ರೈತರಿಗೆ ದಾಖಲೆಗಳನ್ನು ನೀಡಲು ಕಾನೂನಿನಡಿ ಅವಕಾಶವಿದೆ. ಜನರಿಗೆ ಒಂದೇ ಸೂರಿನಡಿ ಆರ್.ಟಿ.ಸಿ, ಜಾತಿ ಪ್ರಮಾಣಪತ್ರ, ಆದಾಯ, ಪಿಂಚಣಿ, ಅಟ್ಲಾಸ್(ನಕ್ಷೆ), ಐ.ಎಲ್.ಆರ್ ಇನ್ನಿತರೆ ದಾಖಲೆಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಸರ್ಕಾರವು ಕಂದಾಯ ದಾಖಲೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದರಿಂದ ಸಾರ್ವಜನಿಕರಿಗೆ ಸಮಯ, ಶ್ರಮ ಉಳಿತಾಯವಾಗಲಿದೆ. ಜನತೆ ಯೋಜನೆಯ ಸಧ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ವಿತರಣೆಯಾಗಿರುವ ದಾಖಲೆಗಳಲ್ಲಿ ಯಾವುದೇ ಲೋಪ ಕಂಡುಬಂದರೆ ಸಂಬಂಧಪಟ್ಟ ನಾಡಕಚೇರಿ, ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಸರಿಪಡಿಸಿಕೊಳ್ಳಬಹುದು. ಯೋಜನೆಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಶೇಖಾದಾರಾರದ ಗುರುಸಿದ್ದಪ್ಪಚಾರ್ ಗ್ರಾಮಲೆಕ್ಕಿರಾದ ನಾಗರಾಜು, ವೆಂಕಟೇಶ್, ಕೀರ್ತಿರಾಜ್, ಗ್ರಾಮಸಹಾಯಕರಾದ ನಾರಾಯಣಸ್ವಾಮಿ, ಮಹದೇವಸ್ವಾಮಿ, ಬಂಗಾರು, ಶಿವರಾಜು, ನೀಲಯ್ಯ, ಸಿದ್ದರಾಜು ಮತ್ತಿತರರು.ಇದ್ದಾರೆ