2022 New Year sign on a glowing background. Happy New Year 2022 night defocused lights texture greeting card images

ಜನವರಿ,ಹೊಸವರ್ಷ ಆಚರಿಸಬೇಕಾದ್ದು ಯಾರು? ಏಕೆ? ಹೇಗೆ? ಎಂಬ ಜಿಜ್ಞಾಸೆಗೆ ಸತ್ಯಾನ್ವೇಷಣೆಯ ಮುಕ್ತಾವಲೋಕನ!

ಸಂಪಾದಕರು

ಯಾರಿಗೆ ಹೊಸವರ್ಷ?:-‘ಹೊಸವರ್ಷ’ಆಚರಿಸುವ ಎಲ್ಲರೂ ‘ಕ್ರಿಸ್ಮಸ್’ಆಚರಿಸುವರೆ? ಕ್ರಿಸ್ಮಸ್‌ಬೇಡ ಹೊಸವರ್ಷಬೇಕು ಎಂಬುದು ಯಾವ ನ್ಯಾಯ? ಪ್ರತಿವರ್ಷ ಜನವರಿ೧ರಂದು ಕ್ರಿಸ್ತಶಕದ ಹೊಸವರ್ಷವನ್ನು ಪ್ರಪಂಚದಾದ್ಯಂತ ಮೂಲಕ್ರೈಸ್ತರು/ಕನ್ವರ್ಟೆಡ್‌ಕ್ರಿಶ್ಚಿಯನ್ಸ್ ತಮ್ಮ ಪದ್ಧತಿ-ಸಂಸ್ಕೃತಿ ಪ್ರಕಾರ ಸಂಭ್ರಮದಿಂದ ಆಚರಿಸುವುದು ಸಹಜ-ಪ್ರಶ್ನಾತೀತ! ಆದರೆ ಅನ್ಯಧರ್ಮೀಯರು ತಮ್ಮ ಸಂಸ್ಕೃತಿ ಸಂಪ್ರದಾಯ ಪದ್ಧತಿ ಮರೆತು ಅವರಿಗಿಂತಲೂ ಗ್ರ್ಯಾಂಡಾಗಿ ಕ್ರೈಸ್ತ ಹೊಸವರ್ಷ ಆಚರಿಸುವುದು ಎಷ್ಟುಸರಿ?  ಹಿಂದೂಗಳಿಗೆ ಹೊಸವರ್ಷ ಏಕೆ? ಹೇಗೆ? ಪ್ರಶ್ನೆ ಉದ್ಭವಿಸುವುದು ಸಹಜ! ಸಂಕ್ರಾಂತಿ ಯುಗಾದಿ ದೀಪಾವಳಿ ಹೊಸವರ್ಷವೆಂದು ನಿಗಧಿಪಡಿಸಿರುವಾಗ ಜನವರಿ೧ ಯಾವರೀತಿ ಹೊಸ ವರ್ಷ? ಆಕರ್ಷಣೆಯ ವ್ಯಾಮೋಹದಿಂದಲೊ, ಕ್ರಿಶ್ಚಿಯನ್‌ಸ್ನೇಹಿತರ ದಾಕ್ಷಿಣ್ಯದಿಂದಲೊ ಇವರದ್ದಲ್ಲದ ಕ್ರಿಸ್ತಹೊಸವರ್ಷ ಆಚರಿಸುವುದರಲ್ಲಿ ಅರ್ಥವಿಲ್ಲ! ಆಯಾಯ ಧರ್ಮದ ಸಂಸ್ಕೃತಿ ಸಂಪ್ರದಾಯದ ಹಬ್ಬಾಚರಣೆ ಅವರವರಿಗೆ ಶ್ರೇಷ್ಠವೂ ಅಗತ್ಯವೂ ಅರ್ಥಪೂರ್ಣವೂ ಹೌದು! ಕ್ರಿಸ್ತಮಿತ್ರರ ಜತೆಸೇರಿ ಕ್ರೈಸ್ತಹೊಸವರ್ಷ ಸ್ವಾಗತಿಸುವುದರಲ್ಲಿ ಅಭ್ಯಂತರವಿಲ್ಲ? ಆದರೆ ದುಷ್ಟಚೀನಾ ಹರಡಿದ ಕೋವಿಡ್‌ರಕ್ಕಸ ಜಗತ್ತಿನಾದ್ಯಂತ ಮನುಕುಲವನ್ನೆ ಬಲಿತೆಗೆದು ಕೊಳ್ಳುತ್ತಿರುವಾಗ ಸಾಮೂಹಿಕ ಕ್ರಿಸ್ಮಸ್-ಹೊಸವರ್ಷ ಆಚರಿಸುವುದು ಯಾವ ಬುದ್ಧಿವಂತಿಕೆ? ೨೦೨೦-೨೧ರಲ್ಲಿ ಕೊರೋನದಿಂದಾಗಿ ಯಾವುದೇ ಜಯಂತಿ ಜಾತ್ರೆ ಉತ್ಸವ ಮದುವೆ ಮುಂಜಿ ನಾಮಕರಣ ಅಂತಿಮ ದರ್ಶನ ಶವಸಂಸ್ಕಾರ ಧಾರ್ಮಿಕ/ಸಾಂಸ್ಕೃತಿಕ ರಾಷ್ಟ್ರೀಯಹಬ್ಬ ಮುಂತಾದವುಗಳನ್ನು ಸಕ್ರಮಯಾಗಿ ಆಚರಿಸ(ಲಾಗ)ಲೇ ಇಲ್ಲ!  ದೇಶಕ್ಕೆ ಹೊರ[ಒಳ] ಶತ್ರುಗಳಕಾಟ ಯುದ್ಧಭೀತಿ ಕಾಡುತ್ತಿರುವಾಗ,

ಆರ್ಥಿಕ ಸಾಮಾಜಿಕ ಶೈಕ್ಷಣಿಕ ವೈಜ್ಞಾನಿಕ ವೈದ್ಯಕೀಯ ರಾಜಕೀಯ ನ[ಕ]ಷ್ಟದ ಕೆಟ್ಟಕಾಲ ವಕ್ಕರಿಸಿರುವಾಗ, ೨೦೨೨(ಅನ್)ಹ್ಯಾಪಿ ನ್ಯು ಇಯರ್‌ಗೇಕೆ (ಅ)ವಿವೇಕದ ಅನಗತ್ಯ ಖರ್ಚುವೆಚ್ಚ? ಬದಲಿಗೆ, ರೈತ ಯೋಧ ಶಿಕ್ಷಕ ವೈದ್ಯ ಪೊಲೀಸ್ ಸಾಮಾಜಿಕಕಾರ್ಯಕರ್ತ ಮುಂತಾದವರಿಗೆ ಸಾಥ್‌ನೀಡೋಣ. ಇವರ ತ್ಯಾಗ-ಬಲಿದಾನಕ್ಕೆ ಹ್ಯಾಟ್ಸಾಫ಼್ ಹೇಳೋಣ. ಕೋವಿಡ್‌ನಿಯಂತ್ರಣದಲ್ಲಿ ವ್ಯಾಕ್ಸಿನ್‌ಅಭಿಯಾನದಲ್ಲಿ ವಿಶ್ವದಲ್ಲೇ ನಂ.೧ಸ್ಥಾನಕ್ಕೇರಿದ ಭಾರತ ಸರ್ಕಾರವನ್ನು ಬೇರೆಲ್ಲ ರಾಷ್ಟ್ರಗಳು ಬೆರಗಾಗಿ ಹೊಗಳುತ್ತ ಬಹಳಷ್ಟು ಕಲಿಯುತ್ತಿರುವಾಗ ಭಾರತೀಯರು ಇತರರಿಗೆ ಮಾದರಿಯಾಗಬೇಡವೆ? ವಸ್ತುನಿಷ್ಟೆ ಅರಿತು ವರ್ತಮಾನದ ಸಂಕಷ್ಟವನ್ನು ಗೆಲ್ಲಲು ಯೋಜ[ಚ]ನೆ ರೂಪಿಸಬೇಕಲ್ಲವೆ? ೨೦೨೧ರಲ್ಲಿಹೊಸವರ್ಷಾಚರಣೆ ಆಚರಿಸುತ್ತಿದ್ದ ಯಂಗ್‌ಗ್ರೂಪ್‌ನ್ನು ವಿಚಾರಿಸಿದವರಿಗೆ ತಿಳಿದ ಸತ್ಯಾಂಶ:-ನ್ಯುಇಯರ್ ಮಾಡ್ತಿರೋದು ಜಾಲೀಗೆ ಯಾಕಂದ್ರೆ ನಾವು ಕ್ರಿಶ್ಚಿಯನ್ಸ್ ಅಲ್ಲ ಸಂಪ್ರದಾಯ-ಪದ್ಧತಿ ಗೊತ್ತಿಲ್ಲ, ಫ಼್ರೆಂಡ್ಸ್‌ಗೋಸ್ಕರ ಅವರ್‌ಜತೆ ನಾವೂ ಡ್ಯಾನ್ಸ್ ಆಡಿ ಕುಡಿದು ತಿಂದು ಮಜಾಮಾಡ್ತೀವಿ ಎಂದಾಗ ಶಾಕ್‌ಆಗಿ ಆಶ್ಚರ್ಯವಾಯ್ತು! ಇಂಥ ಢೋಂಗಿಗಳು ಕ್ರಿಸ್ಮಸ್-ಹೊಸವರ್ಷ ಆಚರಿಸುವುದು ಕೇವಲ ಎಂಜಾಯ್ ಮೆಂಟ್‌ಗೆ ಎಂಬ ಕಟುಸತ್ಯ ಕ್ರೈಸ್ತರಿಗೂ ತಿಳಿದಿದೆ? ಅನ್ಯ ಧರ್ಮೀಯರು ಅವರ ಕ್ಯಾಲೆಂಡರ್ ಪ್ರಕಾರ ನ್ಯುಇಯರ್ ಆಚರಿಸುವಂತೆ ಹಿಂದೂಗಳು ಪಂಚಾಂಗ ಪ್ರಕಾರ ಸಂಕ್ರಾಂತಿ ಯುಗಾದಿ ದೀಪಾವಳಿ ‘ಹೊಸವರ್ಷ’ ಆಚರಿಸಿಕೊಳ್ಳುವುದು ನ್ಯಾಯಸಮ್ಮತ? ಆಗಮಾತ್ರ ಎಲ್ಲಧರ್ಮದವರೂ ಸ್ವಾ[ಧರ್ಮಾ]ಭಿಮಾನಿಯಾಗಿ ಬದುಕಿ, ಶಾಂತಿನೆಮ್ಮದಿ ಮೂಡಿ, ಭಾರತದಲ್ಲಿ ವಿಭಿನ್ನತೆಯಲ್ಲೂ ಏಕತೆ ಇದೆ ಈಗಲೂ, ಎಂಬುದು ಮತ್ತೊಮ್ಮೆ ಸಾಬೀತಾಗುತ್ತದೆ!

2022 New Year sign on a glowing background. Happy New Year 2022 night defocused lights texture greeting card images

ಏಕೆ ಹೊಸವರ್ಷ?:- ‘ಟೆನ್‌ಕಮ್ಯಾಂಡ್‌ಮೆಂಟ್ಸ್’ ಪ್ರಚಾರಮಾಡಿದ ‘ಮೋಸೆಸ್’ ನಂತರ ೨೦೨೨ವರ್ಷದ ಹಿಂದೆ ಡಿಸೆಂಬರ್೨೪ ಮಧ್ಯರಾತ್ರಿ ಜೆರುಸೆಲಂ ಪಟ್ಟಣದಲ್ಲಿ ಜನಿಸಿದ ಯೇಸು ತನ್ನ ಪವಾಡಗಳಿಂದ ಮೌಢ್ಯರನ್ನು ಆಕರ್ಷಿಸಿದ. ಅಲ್ಲಿನ ಆಡಳಿತ ವರ್ಗದವರು ‘ಗುಡ್‌ಫ಼್ರೈಡೆ’ ತನ್ನನ್ನು ಶಿಲುಬೆಗೇರಿಸಿದಾಗ ‘ಓದೇವರೆಅವರನ್ನುಕ್ಷಮಿಸು’ಎಂದು ‘ಹೋಲಿಸ್ಯಾಟರ್ಡೆ’ ಸಂಸ್ಕಾರದ ನಂತರ ‘ಈಸ್ಟರ್‌ಸಂಡೆ’ ಎದ್ದುಬಂದು ‘ಕ್ರೈಸ್ತಧರ್ಮ’ ಸ್ಥಾಪಿಸಿ, ನಂತರ ಸೂಚಿಸಿದ್ದು:- ಪ್ರತಿಭಾನುವಾರ ಪ್ರಾರ್ಥನೆ ಮಾಡುವಂತೆಯೂ ಪ್ರತಿವರ್ಷ ಡಿಸೆಂಬರ್೨೫ರಿಂದ ಜನವರಿ೧ ವರೆಗೆ ‘ಕ್ರಿಸ್ಮಸ್’ ಆಚರಣೆ ಮಾಡುವಂತೆಯೂ ತನ್ನ ಲಾಸ್ಟ್‌ಸಪ್ಪರ್‌ಗೆ ನೀಡಿದ್ದ ವೈನ್-ಮೀಟ್‌ನ್ನು ಮುಖ್ಯ ಆಹಾರವಾಗಿಸಿಕೊಂಡು ಕ್ರಿಸ್ಮಸ್ ಅತಿಥಿಗಳಿಗೆ ಉಣಬಡಿಸಿ ಸತ್ಕರಿಸಲು ನೆರೆಹೊರೆಯನ್ನು ಪ್ರೀತಿಸಿಗೌರವಿಸಲು, ಬೋಧಿಸಿದ! ಯೇಸುವಿನಸುವಾರ್ತೆ:-ಎಲ್ಲವೂನಾನೆ, ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ, ನನ್ನಲ್ಲಿ ವಿಶ್ವಾಸವಿಟ್ಟವರು ಸತ್ತರೂ ಬದುಕುವರು [ಯೋವಾನ್ನ:೧೧:೨೫] ಯೇಸುವಿನ ಸುವಾರ್ತೆಗಳನ್ನು ಕ್ರಿಸ್ಮಸ್

ಅವಧಿಯಲ್ಲಿ ಅಳವಡಿಸಿಕೊಳ್ಳಲು ಪ್ರತಿಕ್ರಿಶ್ಚಿಯನ್ ಪ್ರಯತ್ನಪಡುತ್ತಾನೆ. ಕ್ರೈಸ್ತರ ಬೇಡಿಕೆಗಳನ್ನು ಯೇಸು ಈಡೇರಿಸುತ್ತಾನೆಂಬ ನಂಬಿಕೆಯಿಂದ ಜನವರಿ೧ ಕ್ರೈಸ್ತರು ಹೊಸವರ್ಷ ಬರಮಾಡಿಕೊಳ್ಳುವುದರಲ್ಲಿ ಅರ್ಥವಿದೆ! ಅಂದಿನಿಂದ ಕ್ರಿಸ್ಮಸ್-ಹೊಸವರ್ಷ ಚಾಲ್ತಿಗೆ ಬಂತು. ಬೈಬಲ್‌ನ ಹಳೆ-ಹೊಸ ಒಡಂಬಡಿಕೆ OldTestament & NewTestament ಗಳಲ್ಲೂ ಉಲ್ಲೇಖಿಸಿರುವಂತೆ ಜನವರಿ೧ ಹೊಸವರ್ಷ ಆಚರಿಸುವ ಪದ್ಧತಿ ಜಾರಿಯಲ್ಲಿದೆ. OLD TESTAMENTಕನ್ನಡ ಭಾವಾರ್ಥ:ನಾನು ಬಂದು ಸೂರ್ಯನಡಿಯ ಜಗತ್ತನ್ನು ಕಂಡಾಗ ತಿಳಿದಿದ್ದು; ಯಾವಾಗಲೂ ಓಟದಲ್ಲಿ ಗೆಲುವು ಸಾಧಿಸುವವರು ಕೇವಲ ವೇಗ ಪಡೆದವರಲ್ಲ; ಯುದ್ಧದಲ್ಲಿ ಗೆಲುವು ಸಾಧಿಸುವವರು ಕೇವಲ ಬಲಇದ್ದವರಲ್ಲ; ಪ್ರಪಂಚದಲ್ಲಿ ಅನ್ನದೊರಕುವುದು ಕೇವಲ ಪಾಂಡಿತ್ಯಉಳ್ಳವರಿಗಲ್ಲ; ಧನಕನಕವು ಅರಿತವರಿಗೆ ಮಾತ್ರವಲ್ಲ, ನಿಪುಣರಿಗೆ ಮಾತ್ರ ಸಂಭಾವನೆಯಲ್ಲ; ಬದಲಾಗಿ ಪ್ರತಿಯೊಬ್ಬರಿಗೂ ಸಮಯ ಮತ್ತು ಅವಕಾಶ ದೊರಕುತ್ತದೆ-ಹಳೆಒಡಂಬಡಿಕೆ. ೧೭ನೇ ಶತಮಾನದಲ್ಲಿ ಭಾರತಕ್ಕೆ ವ್ಯಾಪಾರಕ್ಕೆಂದು ಬಂದ ಡಚ್,ಪೋರ್ಚುಗೀಸ್,ಫ಼್ರೆಂಚ್,ಬ್ರಿಟಿಷರು ಇಲ್ಲೇನೆಲೆಸಿ ನೂರಾರುವರ್ಷ ನಮ್ಮನ್ನು ಒಡೆದುಆಳುವ [ಅ]ನೀತಿಯ [ದುರ್] ಆಡಳಿತನಡೆಸಿ ದೇಶಾದ್ಯಂತ ಕ್ರೈಸ್ತಧರ್ಮವನ್ನು ಬಲ[ವಂತ]ವಾಗಿ ಬೇರೂರಿಸಿದರು? ಬ್ರಿಟಿಷ್ ಸರ್ವಾಧಿಕಾರ ಅವಧಿಯಲ್ಲಿ ಮತ್ತು ಸ್ವಾತಂತ್ರಬಂದ ಪ್ರಾರಂಭದಲ್ಲಿ ಸೌರಾಷ್ಟ್ರದಿಂದ ಬಂಗಾಳವರೆಗೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅಲ್ಪಸಂಖ್ಯಾತರ ಹಿಂದುಳಿದವರ ಕಡುಬಡವರ ಶೋಷಿತರ ದೌರ್ಬಲ್ಯವನ್ನು ದುರುಪಯೋಗಿಸಿಕೊಂಡು ಆ[ಸೆ]ಮಿಷವೊಡ್ಡಿ ಮತಾಂತರ ಕಾರ್ಯವೆಸಗಲು ಕ್ರೈಸ್ತ ಮಿಶ ನರಿಗಳು ಪಾರ್ತೇನಿಯಂನಂತೆ ಹುಟ್ಟಿಕೊಂಡವು. ದ.ಭಾರತದಲ್ಲಿ ವಿಶೇಷವಾಗಿ ಕೇರಳದಲ್ಲಿ ಮತಾಂತರ ನಿರಂತರ ಜರುಗುತ್ತಿದೆ? ಇಂಡಿಯದಲ್ಲಿರುವ ಧರ್ಮಗಳಲ್ಲಿ ಕ್ರೈಸ್ತಧರ್ಮವೂ ಒಂದು, ಆಚರಿಸಲ್ಪಡುವ ಹಬ್ಬಗಳಲ್ಲಿ ಕ್ರಿಸ್ಮಸ್ ಕೂಡ ಒಂದು ಹೀಗೆಂದುಕೊಂಡೇ ಭಾರತವು ಸರ್ವಧರ್ಮ ಸಹಿಷ್ಣುತೆಯಿಂದ ಕೂಡಿ ಒಂದಾಗಿ ಬಾಳುವುದರಲ್ಲಿ ಪ್ರಪಂಚಕ್ಕೆ ರೋಲ್ ಮಾಡೆಲ್ ಅಂಡ್ ದಿಬೆಸ್ಟ್ ರಾಷ್ಟ್ರವಾಗಿದೆ!

ಹೇಗೆ ಆಚರಿಸಬೇಕು?:-ಹೊಸವರ್ಷಾಚರಣೆ ಹೆಸರಲ್ಲಿ ಡೌಲು ಢಂಬಾಚಾರ ಮೋಸ ವಂಚನೆ ದ್ರೋಹ ಸುಳ್ಳು ಕಳ್ಳತನ ಅಂತಸ್ತು ಅಧಿಕಾರ ಅನ್ನ ಬಟ್ಟೆ ವಸ್ತು ವಿದ್ಯೆ ಸೇವೆ ದಾನ ದುರುಪಯೋಗ ಮಾಡಬಾರದು. ದುಷ್ಟರ-ದುಶ್ಚಟದ ದಾಸರಾಗದೆ ಅಶ್ಲೀಲನೃತ್ಯ/ಕುಣಿತ ಅಸಹ್ಯ ಕರ್ಕಶ ಆರ್ಕೆಷ್ಟ್ರ/ಮನರಂಜನೆ ಅಸಭ್ಯವರ್ತನೆ ಡ್ರಗ್ಸ್/ಕಾಕ್‌ಟೇಲ್‌ಪಾರ್ಟಿ ವೀಲಿಂಗ್ ಪಟಾಕಿ ಕೋಮುಗಲಭೆ ಸೃಷ್ಟಿ ಇತ್ಯಾದಿ ಕುಕೃತ್ಯ ಇರಬಾರದು. ಅನ್ಯಧರ್ಮ[ದ]ವ[ರ]ನ್ನು ನಿಂದಿಸದಂತೆ, ಸರ್ಕಾರದ-ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗದಂತೆ, ಕಾನೂನು-ಸುವ್ಯವಸ್ಥೆ ಹಾಳಾಗದಂತೆ, ಪೊಲೀಸ್ ಸೂಚನೆ-ಆದೇಶ ಉಲ್ಲಂಘಿಸದೇ ಆಚರಿಸಬೇಕು? ಕೊರೊನದ ಗಂಭೀರಸ್ಥಿತಿ ಅರಿತು ಪ್ರಜ್ಞಾವಂತರಾಗಿ ಕೆರೋಲ್‌ಭಜನೆ ಕ್ರಿಸ್ಮಸ್‌ಟ್ರಿ ಡ್ಯಾನ್ಸ್ ಪ್ರವಚನ ಪ್ರಾರ್ಥನೆ ಪೂಜೆ ಭೋಜನಕೂಟ ಕೇಕ್‌ವೈನ್‌ಸತ್ಕಾರ ವಿವಿಧಸ್ಪರ್ಧೆ ಏರ್ಪಡಿಸದಂತೆ, ಸಾಂತಕ್ಲಾಸ್ ಪೀಪಿಟೋಪಿ ಸ್ವೀಟ್ಸ್‌ಗ್ರೀಟಿಂಗ್ಸ್ ಹಂಚಲು ದುಂದುವೆಚ್ಚ ಮಾಡದೆ, ಕಾನೂನುಕಾಯ್ದೆ ಅನುಗುಣವಾಗಿ ಮಹಿಳೆ-ಮಕ್ಕಳು- ವೃದ್ಧರನ್ನು ಗೌರವಿಸಿ ಪರಿಸರ ಆರೋಗ್ಯ ಪ್ರೀತಿ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಗುಂಪುಗೂಡದೇ ಆಚರಿಸಬೇಕು! ಆರ್ಥಿಕ-ಮಾನವ ಸಂಪನ್ಮೂಲ ವ್ಯರ್ಥಗೊಳಿಸದೆ ಪಾರಂಪರಿಕ-ರಾಷ್ಟ್ರೀಯ ಸಂಪತ್ತನ್ನು ಕಾಪಾಡಿ ‘ಕೋವಿಡ್-ಒಮಿಕ್ರಾನ್’ ಮುನ್ನೆಚ್ಚರಿಕೆ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತ ಇಂದಿನ ಕ್ಲಿಷ್ಟಪರಿಸ್ಥಿತಿ ಅರ್ಥಮಾಡಿಕೊಂಡು ಮಿತಿಯಾಗಿ ಖರ್ಚುಮಾಡಿ ಸಾಮಾಜಿಕ ಅಂತರವಿರಿಸಿ ಮಾಸ್ಕ್ ಧರಿಸಿ ಸಾರ್ಥಕ ರೀತಿಯಲ್ಲಿ ೨೦೨೧ರ ಕ್ರಿಸ್ಮಸ್, ೨೦೨೨ರ ಹೊಸವರ್ಷ ಆಚರಿಸೋಣ!

ಕುಮಾರಕವಿ ನಟರಾಜ್ (೯೦೩೬೯೭೬೪೭೧)
ಬೆಂಗಳೂರು-೫೬೦೦೭೨