ಗುಂಡ್ಲುಪೇಟೆ: ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ಕಾರ್ತಿಕಾ ಸೋಮವಾರದ ಪ್ರಯುಕ್ತ ಕಂಡಾಯ ಮತ್ತು ದಾಳ ಮೆರವಣಿಗೆಯನ್ನು ಸರಳವಾಗಿ ಮಾಡಲಾಯಿತು.

ಗ್ರಾಮದ ದೊಡ್ಡಕೆರೆ ಮೈದಾನದಲ್ಲಿ ಬೆಳಗ್ಗೆ ಸಿದ್ದಪ್ಪಾಜಿ ಕಂಡಾಯವನ್ನು ಬಾವಿ ನೀರಿನಲ್ಲಿ ಶುಚಿಗೊಳಿಸಲಾಯಿತು. ನಂತರ ವಿಭೂತಿ ಹಚ್ಚಿ ಮುಖ್ಯ ರಸ್ತೆ ಮೂಲಕ ದೇವಸ್ಥಾನಕ್ಕೆ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ದಾಳವನ್ನು ಪ್ರತಿಷ್ಟಾಪಿಸಲಾಯಿತು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿ ಮಾಡಿದರು. ಈ ವೇಳೆ ಮಹಿಳೆಯರು ದೇವರಿಗೆ ಪೂಜೆ ನೀಡಿದರು.

ಕಾರ್ತಿಕಾ ಮಾಸದ ಹಿನ್ನೆಲೆಯಲ್ಲಿ ಗ್ರಾಮದ ಮುಖ್ಯ ರಸ್ತೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮಹಿಳೆಯರು, ಯಜಮಾನರು ಹೊಸಬಟ್ಟೆ ತೊಟ್ಟು ಸಂಭ್ರಮಿಸಿದರು.

ಈ ವೇಳೆ ಸಿದ್ದನಾಯಕ, ಗೋವಿಂದನಾಯಕ, ಮಹದೇವನಾಯಕ, ಸಿದ್ದನಾಯಕ, ಮುದ್ದನಾಯಕ, ಪ್ರಕಾಶ್, ಕರಿಬಸವನಾಯಕ, ನಿಂಗರಾಜು, ಸಿದ್ದು, ಮಣಿ ಸೇರಿದಂತೆ ಇತರರು ಹಾಜರಿದ್ದರು.

ವರದಿ: ಬಸವರಾಜು ಎಸ್ ಹಂಗಳ

By admin