ಸೋಮವಾರದಂದು ಬೆಳಿಗ್ಗೆ:9.30 ಗಂಟೆಯಿಂದ 10.00 ವರೆಗೆ ಚಾಮರಾಜ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆ ಎಸ್.ಸಿಪಿ ಅನುದಾನದ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಸಾಮಾನ್ಯ ಅನುದಾನದಲ್ಲಿ ಕೆಳಕಂಡ ಅಭಿವೃದ್ದಿ ಕಾಮಗಾರಿಗಳಿಗೆ ಚಾಮರಾಜ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀಎಲ್.ನಾಗೇಂದ್ರ ರವರು ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ಸಂ-20 ರ ಸದಸ್ಯರು ಹಾಗೂ ವಿರೋಧಪಕ್ಷದ ನಾಯಕರಾದ ಶ್ರೀ ಎಂ.ಯು.ಸುಬ್ಬಯ್ಯ ರವರ ಹಾಗೂ ವಾರ್ಡ್ ಸಂ-21 ರ ಸದಸ್ಯರಾದ ಶ್ರೀಮತಿ ವೇದಾವತಿ ರವರ ಸಮ್ಮುಖದಲ್ಲಿ ಭೂಮಿಪೂಜೆಯನ್ನು ನೆರವೇರಿಸಿದರು.
ಅಭಿವೃದ್ದಿ ಕಾಮಗಾರಿಗಳ ವಿವರ: ವಾರ್ಡ್ ನಂ-20 ರ ವ್ಯಾಪ್ತಿಯ ವಿಜಯನಗರ 1ನೇ ಹಂತದ 5ನೇ ಕ್ರಾಸ್ ನಲ್ಲಿ ಮಹಾನಗರಪಾಲಿಕೆಯ ಸಾಮಾನ್ಯ ಅನುದಾನದಲ್ಲಿ ಯುಜಿಡಿ ಕಾಮಗಾರಿ ರೂ.19.00 ಲಕ್ಷದಲ್ಲಿ ನಿರ್ವಹಿಸಲಿರುವ ಕಾಮಗಾರಿಗೆ ಭೂಮಿ ಪೂಜೆ, ಬೆಳಿಗ್ಗೆ 10.00 ಕ್ಕೆ ವಾರ್ಡ್ ನಂ-20 ರ ವ್ಯಾಪ್ತಿಯ ವಿಜಯನಗರ 2ನೇ ಹಂತದ ಹೊಯ್ಸಳ ಸರ್ಕಲ್ ಹತ್ತಿರದಲ್ಲಿ ಮಹಾನಗರಪಾಲಿಕೆಯ ಸಾಮಾನ್ಯ ಅನುದಾನದಲ್ಲಿ ಯುಜಿಡಿ ಕಾಮಗಾರಿ ರೂ.18.50 ಲಕ್ಷದಲ್ಲಿ ನಿರ್ವಹಿಸಲಿರುವ ಕಾಮಗಾರಿಗೆ ಭೂಮಿ ಪೂಜೆ, ಹಾಗೂ *ವಿಜಯನಗರ ಹಂಪಿ ಸರ್ಕಲ್ ಹತ್ತಿರ ಉದ್ಯಾನವನದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಸಾಮಾನ್ಯ ಅನುದಾನದಲ್ಲಿ ನಿರ್ವಹಿಸಿದ ರೂ.24.00 ಲಕ್ಷ ವೆಚ್ಚದ ಜಿಮ್ ಸಲಕರಣೆಗಳು & ಪಾರ್ಕ್ ಅಭಿವೃದ್ದಿಯ ಉಧ್ಘಾಟನೆ.
ಬೆಳಿಗ್ಗೆ 10.30 ಕ್ಕೆ ವಾರ್ಡ್ ನಂ-21 ರ ವ್ಯಾಪ್ತಿಯ ಗಂಗೋತ್ರಿ ಬಡಾವಣೆ ಕುದುರೆಮಾಳದಲ್ಲಿ ಲೋಕೋಪಯೋಗಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿ ಅಭಿವೃದ್ದಿ ಕಾಮಗಾರಿ ರೂ.35.00 ಲಕ್ಷದಲ್ಲಿ ನಿರ್ವಹಿಸಲಿರುವ ಕಾಮಗಾರಿಗೆ ಭೂಮಿ ಪೂಜೆ, *ಈ ಸಮಯದಲ್ಲಿ ವಿಜಯನಗರದ ಕಾರ್ಯಕ್ರಮದಲ್ಲಿ ಭಾ.ಜ.ಪ. ಅಧ್ಯಕ್ಷರಾದ ಶ್ರೀ ಸೋಮಶೇಖರರಾಜು, ಉಪಾಧ್ಯಕ್ಷರಾದ ಶ್ರೀ ಸತೀಶ್ ಎಸ್, ಪ್ರಧಾನ ಕಾರ್ಯದರ್ಶಿ ಶ್ರೀ ಪುನೀತ್, ರಾಜ್ಯ ಹಿಂದುಳಿದ ವರ್ಗಗಳ ಸಮಿತಿಯ ಶ್ರೀ ನಂಜಪ್ಪ, ಮಹಿಳಾಮೋರ್ಚಾ ಅಧ್ಯಕ್ಷೆ ಶ್ರೀಮತಿ ತನುಜಾ ಮಹೇಶ್, ಶ್ರೀಮತಿ ಅನು, ಶ್ರೀಮತಿ ಶುಭಾಮಣಿ, ಶ್ರೀಮತಿ ಮಂಜುಳ, ಶ್ರೀಅವಿನಾಶ್, ಶ್ರೀದಶರತ್, ಶ್ರೀವಸಂತ, ಶ್ರೀಸಂದೀಪ್, ಶ್ರೀಅಭಿಶೇಖ್, ವಿಜಯನಗರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಶ್ರೀನಾರಾಯಣಗೌಡ, ಕಾರ್ಯದರ್ಶಿ ಶ್ರೀಸುಧಾಕರಶೆಟ್ಟಿ, ಶ್ರೀ ನರಸೇಗೌಡ, ಶ್ರೀ ಮೂರ್ತಿ ಮಹಾನಗರಪಾಲಿಕೆ, ವಲಯ ಕಚೇರಿ ಸಹಾಯಕ ಆಯುಕ್ತರಾದ ಶ್ರೀ ಕೃಷ್ಣ, ಡಿ.ಓ ಶ್ರೀಮನುಗೌಡ, ಸಹಾಯಕ ಅಭಿಯಂತರರಾದ ಶ್ರೀ ವಿನೋದ್ ಮುಂತಾದವರು ಹಾಜರಿದ್ದರು,
*ಗಂಗೋತ್ರಿ ಕುದುರೆಮಾಳ ಕಾರ್ಯಕ್ರಮದಲ್ಲಿ ಭಾ.ಜ.ಪ ಪ್ರಧಾನ ಕಾರ್ಯದರ್ಶಿ ಶ್ರೀರಮೇಶ್, ಶ್ರೀಶಿವಶಂಕರ್, ಕುದುರೆ ಮಾಳ ಗ್ರಾಮದ ಮುಖಂಡರಾದ ಶ್ರೀಸುಬ್ರಮಣ್ಯ, ಶ್ರಿದೇವರಾಜು, ಶ್ರೀಅಯ್ಯಾವು, ಶ್ರೀರಂಗಸ್ವಾಮಿ, ಶ್ರೀನಟರಾಜು, ಶ್ರೀಸೋಮಶೇಖರ್ ರಾಜೆ ಅರಸ್, ಶ್ರೀಶ್ರೀನಿವಾಸು, ಶ್ರೀಆದರ್ಶ್, ಶ್ರೀಮತಿ ಮೀನಾಕ್ಷಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀರಾಜು, ಶ್ರೀಹೊನ್ನೇಗೌಡ, ಗುತ್ತಿಗೆ ದಾರರಾದ ಶ್ರೀಭಾಸ್ಕರ ಮುಂತಾದವರುಗಳು ಹಾಜರಿದ್ದರು.