ಚಾಮರಾಜನಗರ: ತಾಲ್ಲೂಕಿನ ಹರವೆ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮದ ಹಳೇ ವಿದ್ಯಾರ್ಥಿಗಳಿಂದ ಹಿರಿಯ ನಿವೃತ್ತ ಶಿಕ್ಷಕ ಪುಟ್ಟಸ್ವಾಮಿ ಅವರಿಗೆ ಗುರುವಂದನೆ ಹಾಗೂ ಶಾಲೆಗೆ ವಿವಿಧ ಪರಿಕರಗಳ ಕೊಡುಗೆ ನೀಡಿದ ದಾನಿಗಳಿಗೆ ಸನ್ಮಾನಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಹರವೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ. ಮಹೇಶ್ ಹರವೆ ಮಾತನಾಡಿ, ನಮ್ಮ ಭಾರತದ ಸಂಸ್ಕೃತಿಯಲ್ಲಿ ಗುರು ಪರಂಪರೆ ಜತೆಗೆ ಗುರುವನ್ನು ಗೌರವಿಸುವುದು ಅನಾದಿಕಾಲದಿಂದಲೂ ನಡೆದುಬಂದಿದೆ. ಸಂತಕವಿ ಕಬೀರರ ವಾಣಿಯಂತೆ ‘ಗುರು ಮತ್ತು ದೇವರು ಏಕಕಾಲಕ್ಕೆ ಪ್ರತ್ಯಕ್ಷನಾದರೆ ಗುರುವಿಗೆ ನನ್ನ ಮೊದಲ ನಮನ ಎಂದು ತಿಳಿಸಿರುವಂತೆ ಪ್ರಸ್ತುತದಲ್ಲಿಯೂ ಪಾಠಕಲಿಸಿಕೊಟ್ಟ ಗುರುವರ್ಯರನ್ನು ಗೌರವಿಸಿ, ಸತ್ಕರಿಸುವ ಕಾರ್ಯಕ್ರಮ ರೂಡಿಯಲ್ಲಿವೆ. ಗುರು ವಿದ್ಯಾರ್ಥಿಗಳಿಗೆ ಭೋದನೆ ಮಾಡುವ ಮೂಲಕ ಭವಿಷ್ಯದ ರೂವಾರಿಗಳು ಆಗಿದ್ದಾರೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ ಮಾತನಾಡಿ, ಸರಕಾರಿಶಾಲೆಗಳ ಅಭಿವೃದ್ಧಿಗೆ ದಾನಿಗಳು ಹಲಪರಿಕರ ಒದಗಿಸಿ ಶಾಲಾಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದಾರೆ, ಇಂದಿನ ಸನ್ನಿವೇಶದಲ್ಲಿ ಸರಕಾರಿ ಶಾಲಾ ಶಿಕ್ಷಕರು ಖಾಸಗಿ ಶಾಲೆಗಳ ಜತೆ ಪೈಪೋಟಿ ನಡೆಸಿ ಶಾಲೆಯ ಸವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಶಾಲೆಯಲ್ಲಿ ಸೇವೆಸಲ್ಲಿಸಿ ನಿವೃತ ಶಿಕ್ಷಕ ಹೊಸಹಳ್ಳಿ ಪುಟ್ಟಸ್ವಾಮಿ ಅವರನ್ನು ಗ್ರಾಮದ ಹಳೇ ವಿದ್ಯಾರ್ಥಿಗಳು ಸನ್ಮಾನಿಸಿದರು.
ಶಾಲೆಗೆ ಮಿಕ್ಸರ್, ಕುಕ್ಕರ್, ನಲಿಕಲಿ ಟೇಬಲ್, ಕುರ್ಚಿ, ಶಾಲೆಗೆ ಕುಡಿಯುವ ನೀರು ಪೈಪ್‌ಲೈನ್ ವ್ಯವಸ್ಥೆ ಮಾಡಿದ ಗ್ರಾಪಂ ಅಧ್ಯಕ್ಷೆ ದೇವಮ್ಮಣಿ,, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಗ್ರಾಮದ ಮುಖಂಡರಾದ ಬಿ. ಉದಯಕುಮಾರ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಡಿ,ಕೆ,ಮಲ್ಲಿಕಾರ್ಜುನ್, ಕೃ? ಶೆಟ್ಟಿ ನಿವೃತ್ತ ಮುಖ್ಯ ಶಿಕ್ಷಕ ಬಸವರಾಜು ಅವರನ್ನು ಸನ್ಮಾನಿಸಲಾಯಿತು.
ಅಕ್ಷರ ದಾಸೋಹ ಅಧಿಕಾರಿ ವೆಂಕಟೇಶ್, ಬಿಆರ್‌ಪಿ ಮಹದೇವಪ್ಪ, ನಿವೃತ ಶಿಕ್ಷಕ ಹೆಚ್.ಸಿ ಮಾದಪ್ಪ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲಾಲಿಂಗಸ್ವಾಮಿ ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಎಂ.ಡಿ. ಮಹದೇವಯ್ಯ, ಸಿ.ಎಂ. ಮುರುಗೇಶ್ ಕುಮಾರ್ ಶಾಲಾ ಮುಖ್ಯ ಶಿಕ್ಷಕ ಮಹದೇವಸ್ವಾಮಿ ಅನಿಲ್‌ಕುಮಾರ್, ಕೆ.ಎಂ. ಮಂಜುಳಾ, ಮಹೇಶ್ ಹಾಜರಿದ್ದರು.