ಗುಂಡ್ಲುಪೇಟೆ: ಚಿತ್ರನಟ ಪುನೀತರಾಜಕುಮಾರ್ ನಟನೆಯ ಕೊನೆಯ ಚಿತ್ರ ಜೇಮ್ಸ್ ಮಾ.17ರ ಗುರುವಾರ ತೆರೆಕಂಡ ಹಿನ್ನೆಲೆ ಬೆಳಗ್ಗೆ 8.30ರಿಂದಲೇ ಚಿತ್ರ ಪ್ರದರ್ಶನ ಪಟ್ಟಣ ವೆಂಕಟೇಶ್ವರ ಹಾಗೂ ಸೂರ್ಯ ಚಿತ್ರ ಮಂದಿರ ಎರಡರಲ್ಲು ಭರ್ಜರಿಯಾಗಿ ಆರಂಭಗೊಂಡಿತು.

ಗುಂಡ್ಲುಪೇಟೆ ಪಟ್ಟಣದ ವೆಂಕಟೇಶ್ವರ ಹಾಗು ಸೂರ್ಯ ಚಿತ್ರ ಮಂದಿರದಲ್ಲಿ ಅಭಿಮಾನಿಗಳು ಹಾಗೂ ತಮ್ಮ ನೆಚ್ಚಿನ ನಟ ಪೋಸ್ಟರ್‍ಗಳನ್ನು ಹಾಕಿದ ಕಾರಣ ಇಡೀ ಚಿತ್ರ ಮಂದಿರ ರಾರಾಜಿಸುತ್ತಿತ್ತು. ಜೇಮ್ಸ್ ಚಿತ್ರ ಶತದಿನೋತ್ಸವ ಆಚರಸಲಿ ಎಂಬ ವಾಕ್ಯದೊಂದರೆ ತಮ್ಮ ಭಾವಚಿತ್ರಗಳನ್ನು ಬ್ಯಾನರ್ ನಲ್ಲಿ ಹಾಕಿಸಿಕೊಂಡಿದ್ದರು. ಸಿನಿಮಾ ಆರಂಭಕ್ಕು ಮುನ್ನ ಚಿತ್ರ ಮಂದಿರದ ಮುಂದೆ ಪಟಾಕಿ ಸಿಡಿಸಿ, ಪುನೀತ್ ಭಾವಚಿತ್ರಕ್ಕೆ ಹಾಲಿನ ಅಭೀಷೇಕ ಮಾಡಿದರು.

ಗುಂಡ್ಲುಪೇಟೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಮಧ್ಯೆದಲ್ಲಿ ಪುನೀತ್ ರಾಜ್ ಕುಮಾರ್ ನಟನೆಯ ಎಲ್ಲಾ ಚಿತ್ರಗಳ ಪೋಸ್ಟರ್‍ಗಳನ್ನು ವಿದ್ಯುತ್ ಕಂಬದಲ್ಲಿ ಅಳವಡಿಕೆ ಮಾಡಿ ಪುನೀತ್ ರಾಜ್ ಕುಮಾರ್ ಗೆ ನಮನ ಸಲ್ಲಿಸಿದ್ಧಾರೆ. ಇನ್ನು ಈಗಾಗಲೇ ಮಾ.17ರ ಪೂರ್ತ ದಿನ ಟಿಕೆಟ್‍ಗಳನ್ನು ಸಿನಿಮಾ ಆರಂಭಕ್ಕು ಮೊದಲೆ ವಿತರಣೆ ಮಾಡಿದ ಕಾರಣ ಹಲವು ಮಂದಿ ಅಭಿಮಾನಿಗಳು ಟಿಕೆಟ್ ಸಿಗದೆ ನಿರಾಸೆಯಿಂದ ಹಿಂದಿರುಗಿದರು.

ಪುನೀತ್ ರಾಜಕುಮಾರ್ ಗುಂಡ್ಲುಪೇಟೆ ತಾಲೂಕು ಅಭಿಮಾನಿಗಳ ಬಳಗದಿಂದ ವೆಂಟೇಶ್ವರ ಚಿತ್ರ ಮಂದಿರಕ್ಕೆ ಆಗಮಿಸಿದ ಅಭಿಮಾನಿಗಳಿಗೆ ಬೆಳಗಿನ ತಿಂಡಿ, ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ಹಾಗೂ ಮಧ್ಯಾಹ್ನದ ವೇಳೆ ಬಿರಿಯಾನಿ ಮತ್ತು ಸಂಜೆ ಗೋಬಿ ಮಂಚೂರಿ, ಮಸಾಲೆ ಪುರಿ ವಿತರಣೆ ಮಾಡಲಾಯಿತು. ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿಯೂ ಪುನೀತ್ ಭಾವಚಿತ್ರಗಳನ್ನು ಕಟ್ಟಿ ಪೂಜೆ ಸಲ್ಲಿಸಲಾಯಿತು.

ವರದಿ: ಬಸವರಾಜು ಎಸ್.ಹಂಗಳ