ಗುಂಡ್ಲುಪೇಟೆ: ತಾಲೂಕಿನಲ್ಲಿ ಎಪಿಎಂಸಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಭ್ಯರ್ಥಿಗಳು ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿ ಗ್ರಾಮ, ಮನೆಗಳಿಗೆ ಅಭ್ಯರ್ಥಿಗಳು ಭೇಟಿ ನೀಡಿ ಬಿರುಸಿನ ಮತಯಾಚನೆಯಲ್ಲಿ ತೊಡಗಿರುವ ಕಾರಣ ಈ ಚುನಾವಣೆ ಮುಂಬರುವ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂಬಂತೆ ಬಿಂಬಿಸುತ್ತಿದ್ದಾರೆ.

ತಾಲೂಕಿನಲ್ಲಿ ಬಿಜೆಪಿ ಹಾಗು ಕಾಂಗ್ರೆಸ್ ಸಮಬಲದ ಪೈಪೋಟಿಯಿದ್ದು, ಇಬ್ಬರು ಸಹ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಕಾರ್ಯ ಪ್ರೌವೃತ್ತರಾಗಿದ್ದಾರೆ. ಕಳೆದ 20 ವರ್ಷದಿಂದಲೂ ಕಾಂಗ್ರೆಸ್ ವಶದಲ್ಲಿರುವ ಎಪಿಎಂಸಿ ಅಧಿಕಾರವನ್ನು ಮೊದಲ ಬಾರಿಗೆ ಶಾಸಕರಾಗಿರುವ ಸಿ.ಎಸ್.ನಿರಂಜನಕುಮಾರ್ ನೇತೃತ್ವದಲ್ಲಿ ಈ ಬಾರಿ ಬಿಜೆಪಿ ತನ್ನ ತೆಕ್ಕೆಗೆ ಪಡೆಯುವಲ್ಲಿ ಪ್ರಯತ್ನ ಮಾಡುತ್ತಿದೆ. ಎರಡು ರಾಷ್ಟ್ರೀಯ ಪಕ್ಷದಲ್ಲಿ ತಲಾ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಚುನಾವಣೆಗೆ ಇನ್ನು ನಾಲ್ಕೈದು ದಿನ ಬಾಕಿಯಿದೆ. ಈ ಮಧ್ಯೆ ಬಿಜೆಪಿ ಅಭ್ಯರ್ಥಿಗಳು, ಮುಖಂಡರು ಹಾಗ ಶಾಸಕ ಸಿ.ಎಸ್.ನಿರಂಜನಕುಮಾರ್ ನೇತೃತ್ವದಲ್ಲಿ ಎಲ್ಲಾ ಕ್ಷೇತ್ರದಲ್ಲು ಈಗಾಗಲೇ ಸಭೆ ನಡೆಸಿ ಮತಯಾಚನೆ ಮಾಡಿದ್ದಾರೆ. ಅಂತೆಯೇ ಕಾಂಗ್ರೆಸ್ ಅಭ್ಯರ್ಥಿಗಳು ಹಿರಿಯ ಮುಖಂಡರನ್ನು ಜೊತೆಗಿಟ್ಟುಕೊಂಡು ಕಾಂಗ್ರೆಸ್ ಯುವ ಮುಖಂಡ ಗಣೇಶಪ್ರಸಾದ್ ನೇತೃತ್ವದಲ್ಲಿ ಪ್ರತಿ ಗ್ರಾಮದಲ್ಲಿರುವ ಮತದಾರರನ್ನು ಭೇಟಿ ಮಾಡಿ ಮತಯಾಚಿಸಿದ್ದಾರೆ.

ಎರಡು ಪಕ್ಷಕ್ಕು ಗೆಲ್ಲುವ ವಿಶ್ವಾಸ: ಕಾಂಗ್ರೆಸ್ ಹಾಗೂ ಬಿಜೆಪಿಯ ಮುಖಂಡರುಗಳು ಹೆಚ್ಚು ಸ್ಥಾನ ಗೆದ್ದು ಅಧಿಕಾರ ಪಡೆಯುವ ವಿಶ್ವಾಸದಲಿದ್ದಾರೆ. ಈಗಾಗಲೇ ಇಂತಹ ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಕೆಲ ಕ್ಷೇತ್ರ ಪ್ರಬಲ ಪೈಪೋಟಿ ಇರುತ್ತದೆ. ಕೆಲವು ಹಿನ್ನಡೆಯಾಗಬಹುದು ಎಂಬ ಲೆಕ್ಕಾಚಾರದಲ್ಲಿದ್ದು, ಮತದಾರರನ್ನು ಸೆಳೆಯುತ್ತಿದ್ದಾರೆ.

ಸಿ.ಎಸ್.ನಿರಂಜನಕುಮಾರ್ ಮೊದಲ ಬಾರಿಗೆ ಶಾಸಕರಾದ ನಂತರ ಎಪಿಎಂಸಿ ಚುನಾವಣೆ ಎದುರಾಗುತ್ತಿದೆ. ಆಡಳಿತ ಪಕ್ಷದ ಮೂರು ಮಂದಿ ನಾಮ ನಿರ್ದೇಶಿತರಿಗೆ ಮತದಾನದ ಅವಕಾಶ ಇರುವುದರಿಂದ ಬಿಜೆಪಿ ಗೆಲುವಿಗೆ ಹೆಚ್ಚಿನ ಅವಕಾಶವಿದೆ. ಆದರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಪ್ರಬಲ ಪೈಪೆÇೀಟಿ ನೀಡುವ ಅಭ್ಯರ್ಥಿಗಳು ಇರುವುದರಿಂದ ಹೆಚ್ಚಿನ ಪೈಪೆÇೀಟಿ ಎದುರಾಗಲಿದೆ. ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶಪ್ರಸಾದ್ ಅಧಿಕಾರ ಇಲ್ಲದಿದ್ದರೂ ಜನರಿಂದ ದೂರವಾಗಿಲ್ಲ. ತಂದೆಯಂತೆ ಜನರೊಂದಿಗೆ ಇದ್ದು, ಕಷ್ಟ ಸುಃಖಗಳಿಗೆ ಭಾಗಿಯಾಗುತ್ತಿದ್ದಾರೆ. ಪ್ರತಿ ಗ್ರಾಮದ ಜನರೊಂದಿಗೆ ಒಡನಾಟ ಹೊಂದಿದ್ದು, ಎಲ್ಲರನ್ನೂ ವಿಶ್ವಾಸದಿಂದ ಕಾಣುವ ಮೂಲಕ ಜನರನ್ನು ಹಿಡಿದಿಟ್ಟುಕೊಂಡಿರುವುದರಿಂದ ಬಿಜೆಪಿ ಗೆಲುವು ಸುಲಭವಲ್ಲ. ಅಲ್ಲದೇ ನಿತ್ಯ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಮತ್ತು ಮುಖಂಡರೊಂದಿಗೆ ಚರ್ಚೆ, ಭೇಟಿ ಮಾಡುತ್ತಿದ್ದಾರೆ. ಆದ್ದರಿಂದ ಹಿಂದಿನಿಂದಲೂ ಕಾಂಗ್ರೆಸ್ ವಶದಲ್ಲಿರುವ ಎಪಿಎಂಸಿ ಅಧಿಕಾರ ಯಾವುದೇ ಕಾರಣಕ್ಕೆ ಕೈ ಜಾರದಂತೆ ಎಚ್ಚರ ವಹಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ವೀರಶೈವ-ಲಿಂಗಾಯತ ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿ ಹಿಡುವಳಿ ಖಾತೆದದಾರರಿದ್ದಾರೆ. ಹೀಗಾಗಿ ಎರಡು ಪಕ್ಷದವರು ಅದೇ ಸಮುದಾಯಕ್ಕೆ ಸೇರಿದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕೆ ಇಳಿಸಿದ್ದಾರೆ.


ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು:
ಎಸ್.ಶಿವನಾಗಪ್ಪ(ಸೋಮಹಳ್ಳಿ ಕ್ಷೇತ್ರ), ಗಾಯತ್ರಿ(ಕಬ್ಬಹಳ್ಳಿ ಕ್ಷೇತ್ರ), ಜೋಗನಾಯಕ(ಕುಂದಕೆರೆ ಕ್ಷೇತ್ರ), ರಾಜು(ಹಂಗಳ ಕ್ಷೇತ್ರ), ಆರ್.ಎಸ್.ನಾಗರಾಜು(ಹೊರೆಯಾಲ ಕ್ಷೇತ್ರ), ಮಾದಶೆಟ್ಟಿ(ಕನ್ನೇಗಾಲ ಕ್ಷೇತ್ರ), ಪಿ.ಮಹದೇವಪ್ಪ(ತೆರಕಣಾಂಬಿ ಕ್ಷೇತ್ರ), ಬಸವರಾಜಪ್ಪ ಮೊಳ್ಳಯ್ಯನಹುಂಡಿ(ವಿಜಯಪುರ ಕ್ಷೇತ್ರ), ಮಹದೇವಮ್ಮ(ಬೊಮ್ನಲಾಪುರ ಕ್ಷೇತ್ರ), ವಿರೂಪಾಕ್ಷ(ಬೇಗೂರು ಕ್ಷೇತ್ರ), ನಾಗರಾಜು(ಬರಗಿ ಕ್ಷೇತ್ರ), ವರ್ತಕರ ಕ್ಷೇತ್ರದಿಂದ ಮಂಜುನಾಥ ಕಣದಲ್ಲಿ ಇದ್ದಾರೆ.


ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು:
ಕೆ.ಆರ್.ಲೋಕೇಶ್(ಹೊರೆಯಾಲ ಕ್ಷೇತ್ರ), ರವಿ ಕಮರಹಳ್ಳಿ(ಸೋಮಹಳ್ಳಿ ಕ್ಷೇತ್ರ), ಭಾಗ್ಯ(ಕಬ್ಬಹಳ್ಳಿ ಕ್ಷೇತ್ರ), ಎಚ್.ಆರ್.ಮಹದೇವಪ್ರಸಾದ್(ಬೇಗೂರು ಕ್ಷೇತ್ರ), ಮಾಡ್ರಹಳ್ಳಿ ನಾಗೇಂದ್ರ(ಬರಗಿ), ಅರಸಶೆಟ್ಟಿ(ಕನ್ನೇಗಾಲ ಕ್ಷೇತ್ರ), ಸೋಮಪ್ಪ ಮೊಳ್ಳಯ್ಯನಹುಂಡಿ(ವಿಜಯಪುರ ಕ್ಷೇತ್ರ), ಮಹೇಶ್(ತೆರಕಣಾಂಬಿ ಕ್ಷೇತ್ರ), ವೆಂಕಟನಾಯಕ(ಕುಂದಕೆರೆ ಕ್ಷೇತ್ರ), ನಾಗರತ್ನ(ಬೊಮ್ಮಲಪುರ ಕ್ಷೇತ್ರ), ಹೂವಯ್ಯ(ಹಂಗಳ ಕ್ಷೇತ್ರ), ಮಹದೇವಪ್ಪ ಮಾಡ್ರಹಳ್ಳಿ ವರ್ತಕರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ.

ರೈತರಿಗೆ ಕೇಂದ್ರ ಸರ್ಕಾರದಿಂದ 6 ಸಾವಿರ ಮತ್ತು ರಾಜ್ಯದಿಂದ 4 ಸಾವಿರ ಕೊಡುತ್ತಿರುವ ಹಿನ್ನೆಲೆ ಬಿಜೆಪಿ ಬಗ್ಗೆ ಜನರಿಗೆ ಹೆಚ್ಚಿನ ಒಲವಿದೆ. ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾವಿರಾರು ಕೋಟಿ ನೀಡಿದ ಕಾರಣದಿಂದ ಇಂದು ಬಹುತೇಕ ಕೆರೆಗಳು ತುಂಬಿದೆ. ಈ ಹಿನ್ನಲೆಯಲ್ಲಿ ಬಿಜೆಪಿಗೆ ಪೂರಕ ವಾತವರಣವಿದೆ.

  • ಸಿ.ಎಸ್.ನಿರಂಜನಕುಮಾರ್, ಶಾಸಕರು.


ಎಪಿಎಂಸಿಯನ್ನು ಖಾಸಗೀಕರಣ ಮಾಡಲು ಹೊರಟಿದ್ದ ಬಿಜೆಪಿ ಇದೀಗ ಎಪಿಎಂಸಿ ಚುನಾವಣೆ ಎದುರಿಸುತ್ತಿರುವುದು ಹಾಸ್ಯಸ್ಪದವಾಗಿದೆ. ಬಿಜೆಪಿರೈತ ವಿರೋಧಿ ಕಾಯ್ದೆಗಳ ಬಗ್ಗೆ ರೈತರು ಸಿಡಿದೆದ್ದು ಕಾಯ್ದೆ ಹಿಂಪಡೆಯುವಂತೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಕಳೆದ 20 ವರ್ಷದಿಂದಲೂ ಎಪಿಎಂಸಿ ಕಾಂಗ್ರೆಸ್ ತೆಕ್ಕೆಯಲ್ಲಿದೆ. ಈ ಬಾರಿಯೂ ಸಹ ಅಧಿಕಾರ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಪಕ್ಷದ ಹಿರಿಯರು, ಮುಖಂಡರ ವಿಶ್ವಾಸದಿಂದ ಚುನಾವಣೆ ಎದುರಿಸುತ್ತಿದ್ದು, ಮತದಾರರು ಕಾಂಗ್ರೆಸ್ ಬೆಂಬಿಸಿಸುತ್ತಾರೆ ಎಂಬ ಆತ್ಮವಿಶ್ವಾಸವಿದೆ.

  • ಹೆಚ್.ಎಂ.ಗಣೇಶಪ್ರಸಾದ್, ಕಾಂಗ್ರೆಸ್ ಮುಖಂಡ.

ವರದಿ: ಬಸವರಾಜು ಎಸ್.ಹಂಗಳ