ಒಂದೇ ಸೂರಿನಡಿ ಹಲವು ಉತ್ಪನ್ನಗಳು
ಮೈಸೂರು: ಕೊರೋನಾದಿಂದಾಗಿ ವ್ಯಾಪಾರ ಕ್ಷೇತ್ರದಲ್ಲಿ ಗಣನೀಯ ಕುಸಿತ ಕಂಡಿದೆ. ಸಂಪಾದನೆಯಿಲ್ಲದೆ ಜನ ಅಗತ್ಯ ವಸ್ತುಗಳ ಖರೀದಿಗೆ ಹಿಂದೇಟು ಹಾಕುವಂತಾಗಿದೆ. ಹೀಗಿರುವಾಗ ಕರಕುಶಲ ಮತ್ತು ಕೈಮಗ್ಗ ಉತ್ಪನ್ನಗಳ ಕ್ಷೇತ್ರಕ್ಕೂ ಅದರ ಬಿಸಿ ತಟ್ಟಿದ್ದು, ಈ ವೃತ್ತಿಯನ್ನು ನಂಬಿ ಬದುಕುವವರ ಬದುಕು ಮೂರಾಬಟ್ಟೆಯಾಗಿದೆ. ಇದೀಗ ಇಂತಹ ನೇಕಾರರು ಮತ್ತು ಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿಯೇ ಮೈಸೂರಿನ ಜೆಎಸ್‌ಎಸ್ ಮೈಸೂರು ಅರ್ಬನ್ ಹಾತ್‌ನಲ್ಲಿ ಗುಜರಾತ್ ಕರಕುಶಲ ಉತ್ಸವವನ್ನು ನಡೆಸಲಾಗುತ್ತಿದೆ.

ನವದೆಹಲಿಯ ಜವಳಿ ಅಭಿವೃದ್ಧಿ ಆಯುಕ್ತರು (ಕೈಮಗ್ಗ) ಜವಳಿ ಮಂತ್ರಾಲಯ, ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿದೇರ್ಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಬೆಂಗಳೂರು, ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿಯ ಸಹಯೋಗದೊಂದಿಗೆ ಗುಜರಾತ್ ಕರಕುಶಲ ಉತ್ಸವವು ಡಿಸೆಂಬರ್ ೩೦ ರಿಂದ ಜನವರಿ ೧೨ರವರೆಗೆ ನಡೆಸಲಾಗುತ್ತಿದೆ.

By admin