ಚಾಮರಾಜನಗರ: ತಾಲೂಕಿನ ಹಂಡರಕಳ್ಳಿಮೋಳೆ, ಬೂದಿತಿಟ್ಟು ಗ್ರಾಮದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ ೨.೭೦ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ ಗ್ರಾಮ ಪರಿಮಿತಿಸಂಪರ್ಕ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ಕೂಡ್ಲೂರು ಗ್ರಾಮದಿಂದ ಬೂದಿತಿಟ್ಟು ಮಾರ್ಗವಾಗಿ ಬಿಳಿಗಿರಿರಂಗನಬೆಟ್ಟಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಗೆ ೧.೫೫ ಲಕ್ಷ ಹಾಗೂ ಹಂಡರಕಳ್ಳಿಯಿಂದ ಆಲೂರು ದೂಡ್ಡರಾಯಪೇಟೆ ಮುಖ್ಯರಸ್ತೆ ವರಗೆ ೧.೧೫ ಲಕ್ಷ ರೂ. ಸೇರಿದಂgತೆ ಈಗಾಗಲೇ ೨.೭೦ ಕೋಟಿ.ರೂಗಳು ಬಿಡುಗಡೆಯಾಗಿದೆ.
ಸರಕಾರ ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ ಹೆಚ್ಚು ಕಾಳಜಿ ವಹಿಸಿ ಹೆಚ್ಚು ಅನುದಾನ ಕಲ್ಪಿಸಿದ್ದು, ತಮ್ಮ ಕ್ಷೇತ್ರವ್ಯಾಪ್ತಿಯ ಅನೇಕ ಗ್ರಾಮಗಳಿಗೆ ಗ್ರಾಮಸಂಪರ್ಕ ರಸ್ತೆ ನಿರ್ಮಿಸಲಾಗಿದೆ, ಈ ಭಾಗದಲ್ಲಿ ಜನರಿಗೆ ಅಗತ್ಯವಾದ ರಸ್ತೆ, ಚರಂಡಿ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಮುಂಬರುವ ದಿನಗಳಲ್ಲೂ ಕ್ಷೇತ್ರವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಕ್ರಮವಹಿಸಲಾಗುವುದು.
ದೀರ್ಘಾವಧಿ ಉಪಯೋಗಕ್ಕೆ ಬರುವಂತೆ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಿರ್ವಹಣೆಗೆ ಒತ್ತು ನೀಡಬೇಕು ಎಂದು ಶಾಸಕರು ಸೂಚಿಸಿದರು.
ಗ್ರಾಪಂ ಅಧ್ಯಕ್ಷೆ ಸುಸನಕುಮಾರಿ, ಸದಸ್ಯರಾದ ಭುವನೇಶ್ವರಿ, ಮಂಜುಳಾ. ಸಿದ್ದರಾಜು, ಸಿದ್ದರಾಜು ಗ್ರಾಮದ ಮುಖಂಡರಾದ ಪಿ.ಲಿಂಗರಾಜು,
ಬಸಪ್ಪ, ಮಹದೇವಶೆಟ್ಟಿ ಶಿವರಾಜು ಗ್ರಾಮಸ್ಥರು, ಮುಖಂಡರು ಹಾಜರಿದ್ದರು.