೨೦೨೧-೨೦೨೨ ನೆ ಸಾಲಿನ ಪರಿಷೃತ ಅಂದಾಜಿಗೆ ಹೊಲಿಸಿದರೆ ದೇಶದ ಮಹತ್ವಕಾಂಶೆಯು ಉದ್ಯೋಗ ಖಾತ್ರಿ MNREGA ಯೋಜನೆಯ ಶೇ. ೨೫ ರಷ್ಟು ಕಡಿತವಾಗಿದೆ. ಗ್ರಾಮೀಣದ ಆರ್ಥಿಕತೆಯು ಕೋವಿಡ್ ಸೋಂಕಿನ ಸಂದರ್ಭದಲ್ಲಿ ನಗರ ಪ್ರದೇಶದಿಂದ ಗ್ರಾಮೀಣ ಭಾಗಕ್ಕೆ ವಲಸೆ ಹೋದವರ ಸಂಖ್ಯೆಯೆ ಹೆಚ್ಚು. ಅಂತಹ ಸಂದರ್ಭದಲ್ಲಿ ಆರ್ಥಿಕತೆಯ ಬಿಕ್ಕಟ್ಟನ್ನು ಎದುರಿಸುತ್ತಿರುವ ನಗರ ಹಾಗು ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮಕ್ಕೆ ಅನುಧಾನ ಕಡಿತ ಮಾಡಿರುವುದು ಗ್ರಾಮೀಣ ಅಭಿವೃದ್ಧಿ ಕುಂಟಿತ ಗೊಳ್ಳುವುದಕ್ಕೆ ಕಾರಣ ವಾಗಬಹುದಾಗಿದೆ. ಬೇಡಿಕೆಯನ್ನಷ್ಟೆ ನೋಡಿಕೊಂಡರೆ ಸಾಲದು ಪೂರೈಕೆಯನ್ನು ಕೂಡ ಗಮನದಲ್ಲಿಟ್ಟು ಕೊಳ್ಳಬೇಕಾಗುತ್ತದೆ. ಉದ್ಯೋಗಾಕಾಂಶಿಗಳನ್ನು ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ನವ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕಿತ್ತು. ಆದ್ದರಿಂದ ಈ ಬಜೆಟ್‌ನಲ್ಲಿ ಕೌಶಲ್ಯಾಭಿವೃದ್ದಿಗೆ ಹೆಚ್ಚು ಮಹತ್ವವನ್ನು ನೀಡಬೇಕಾಗಿತ್ತು. ೨೦೨೧-೨೨ ಸಾಲಿನ ಪರಿಷೃತ ಅಂದಾಜಿಗೆ ಹೋಲಿಸಿದರೆ ಕೌಶಲ್ಯಾಭಿವೃದ್ದಿಗೆ ಅನುಧಾನ ಹಂಚಿಕೆಯಾಗಲಿ

ಕಾರ್ಯವಿಧಾನದಲ್ಲಾಗಲಿ ಯಾವುದೇ ಬದಲಾವಣೆಗಳು ಕಾಣಿಸುತ್ತಿಲ್ಲ. ಹಾಗೆಯೇ Economic Survey Report ನಲ್ಲಿ ಅರ್ಥಶಾಸ್ತ್ರದ ಸರ್ವೆಯಲ್ಲಿ ಪುರುಷ ಕಾರ್ಮಿಕರ ಪಾಲ್ಗೊಳ್ಳುವಿಕೆಯ ದರ (ಶೇ. ೫೫.೬) ಹೋಲಿಸಿದರೆ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆಯ ದರ ತೀರ ಕಡಿಮೆ ಇದೆ (ಶೇ. ೧೮.೬ಕ್ಕೆ ಕುಸಿದಿದೆ). ಮಹಿಳೆಯರು ಕಾರ್ಮಿಕ ಬಲದಲ್ಲಿ ಹೆಚ್ಚಿನ ಪಾಲು ಪಡೆಯುವುದನ್ನು ಪ್ರೋತ್ಸಾಹಿಸಲು ಕೇಂದ್ರ ಬಜೆಟ್‌ನಲ್ಲಿ ಯಾವುದಾದರು ಯೋಜನೆ ಹಮ್ಮಿಕೊಂಡಿದ್ದರೆ ಮತ್ತಷ್ಟು ಅನುಕೂಲಕರ ವಾಗುತ್ತಿತ್ತು.

ಪೋಸ್ಟ್ ಆಫಿಸ್‌ಗಳ ಆಧುನೀಕರಣ: ಗ್ರಾಮೀಣ ಪೋಸ್ಟ್ ಆಫಿಸ್‌ಗಳನ್ನ ಬ್ಯಾಂಕಿಂಗ್ ವಲಯದ ರೀತಿಯಲ್ಲಿ ಸದೃಡಗೊಳಿಸಬೇಕು ಹಾಗೂ ಆಧುನೀಕರಣ ಗೊಳಿಸಬೇಕು ಎಂಬುದು ಸ್ವಾಗತಾರ್ಹ. ಇದರಿಂದ ಹಲವಾರು ಸರ್ಕಾರಿ ಕಾರ್ಯಕ್ರಮಗಳನ್ನ ಪೋಸ್ಟ್ ಆಫಿಸ್‌ಗಳ ಮೂಲಕ ಚಾಲ್ತಿಗೆ ತರುವುದಾದರೆ, ಜನರ ಒಳಗೊಳ್ಳುವಿಕೆ ಹಾಗೂ ಹಣಕಾಸು ಒಳಗೊಳ್ಳುವಿಕೆಗೆ ಬಹಳ ಅನುಕೂಲಕರ ವಾದದ್ದು. ಏಕೆಂದರೆ ಹೆಚ್ಚಿನ ಪ್ರಮಾಣದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಬಹಳ ಸುಲಭವಾಗಿ ಅತಿ ಕಡಿಮೆ ಸಮಯದಲ್ಲಿ ಜನರಿಗೆ ತಲುಪಿಸಬಹುದಾಗಿದೆ. ಆದ್ದರಿಂದ ೧.೪ ಲಕ್ಷ ಪೋಸ್ಟ್ ಆಫಿಸ್‌ಗಳನ್ನು ಆಧುನೀಕರಣ ಮಾಡುವ ವಿಷಯ ಶ್ಲಾಗಣಿಯವಾದದ್ದು. ಆದಾಯ ತೆರಿಗೆ: ಆದಾಯ ತೆರಿಗೆಯಲ್ಲಿ ಶೇ. ೬.೩ ರಷ್ಟು ಜನರು ಸಂಘಟಿತ ವಲಯದಲ್ಲಿ ಬರುತ್ತಾರೊ ಅವರು ತೆರಿಗೆಯನ್ನು ಪಾವತಿ ಮಾಡುವ ವರ್ಗದವರಾಗಿದ್ದಾರೆ.

ಆದರೆ ಕೇವಲ ಆದಾಯ ತೆರಿಗೆಯಿಂದ ಮಾತ್ರ ಸಾರ್ವಜನಿಕ ಬೊಕ್ಕಸವನ್ನು ತುಂಬಿಸಲು ಸಾಧ್ಯವಿಲ್ಲ. ಆದಾಯ ತೆರಿಗೆಯ ಸೆಕ್ಷನ್ ೮೦(ಅ) ಅಡಿ ಮಿತಿ ಹೆಚ್ಚಳ ಅಥವಾ ಯಾವುದೇ ತೆರಿಗೆ ವಿನಾಯ್ತಿ ಅಧಿಕ ಗೊಳಿಸಿಲ್ಲ ಎನ್ನುವುದು ಕಂಡುಬರುತ್ತದೆ. ಅಷ್ಟೆಯಲ್ಲದೆ, ಗೃಹ ಸಾಲಗಳ ಮೇಲೆ ನೀಡಲಾಗುವ ೨ ಲಕ್ಷ ರೂ. ಬಡ್ಡಿ ರಿಯಾಯಿತಿಯನ್ನು ಹೆಚ್ಚಿಸಲಾಗಿಲ್ಲ. ೮೦(ಅ) ಅಡಿ ಮಿತಿಯನ್ನು ಹೆಚ್ಚಿಸಿದ್ದಿದ್ದಲ್ಲಿ ಅದು ಸಾರ್ವಜನಿಕ  ಹೋಡಿಕೆಯಾಗಿ ಪರಿವರ್ತನೆಯಾಗಿ ಮತ್ತಷ್ಟು ಉದ್ಯಮ ಗಳಿಗೆ ಉತ್ತೇಜನ ನೀಡಿ ಉದ್ಯೋಗ ಅವಕಾಶ ಮತ್ತು ಕೌಶಲ್ಯ ಅಭಿವೃದ್ಧಿಗೆ ಅನುಕೂಲಕರವಾಗುತ್ತಿತ್ತು.ಒಟ್ಟಾರೆ ೨೦೨೨ನೆ ಸಾಲಿನ ಬಜೆಟ್ ಕೋವಿಡ್ ಸಾಂಕ್ರಮಿಕದ ನಂತರ ಧೀರ್ಘಾಭಿವೃದ್ಧಿಯ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ.

ಡಾ. ಪವಿತ್ರ. ಆರ್. ಹೆಚ್
ಅಧ್ಯಾಪಕರು
ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗ
ಕ.ರಾ.ಮು.ವಿ.
ಮೈಸೂರು