ನಮ್ಮ ಬದುಕಿನ ಜೀವನಾಡಿಯಾದ ‘ಅಮ್ಮ’ ನ ಬಗ್ಗೆ ವಿಶ್ಲೇಷಿಸಲು, ನಾನು ಪಂಡಿತನೂ ಅಲ್ಲ, ಪಾಮರನೂ ಅಲ್ಲ. ವಾತ್ಸಲ್ಯದ ಧಾರೆಯ ‘ಅಮ್ಮ’ ಎಂಬ ಎರಡಕ್ಷರದಲ್ಲಿ ಅದೇನೋ ವಿಸ್ಮಯ. ನೋವಿನಲ್ಲೂ, ನಲಿವಿನಲ್ಲೂ, ಮೊದಲು ನಾನು ಕೂಗುವುದೇ ‘ಅಮ್ಮ’. ‘ಅಮ್ಮ’ ಬದುಕನ್ನು ಅರಳಿಸುವ ಕಲೆಗಾರ್ತಿ. ಆಕೆ, ನನ್ನ ಬಾಳಪುಟದ ಮಧುರ ಗೀತೆ. ‘ಅಮ್ಮ’ ಒಂದು ಬ್ರಹ್ಮಾಂಡ. ಆಕೆಯ ಬಗ್ಗೆ ಬರೆಯುವುದಕ್ಕೆ ಹೋದರೆ ಭಾಷೆ ಬಡವಿ. ಯಾವುದೇ ಪದದ ವರ್ಣನೆಯಲ್ಲೂ ಆಕೆಯ ಪಾತ್ರದೆದುರು ಆ ಪದವೇ ಸೋತಂತೆ. ಯಾವುದೇ ಪದ, ವಾಕ್ಯ, ಕತೆ, ಲೇಖನ, ಸಿನಿಮಾ ಇನ್ನೂ ಮುಂತಾದವುಗಳಲ್ಲಿ ಹಿಡಿದಿಡಲು ಸಾಧ್ಯವಾಗದ ಮಹೋನ್ನತ ವ್ಯಕ್ತಿತ್ವ ಆಕೆಯದು.

ಬದುಕಿನಲ್ಲಿ ಅಮ್ಮನಂತಹ ವಿಶ್ವಸುಂದರಿ ಇರಲು ಸಾಧ್ಯವೇ? | Only mother can make the  sound of love in silence - Kannada Oneindia

‘ಅಮ್ಮ’ ಶಬ್ದದ ಔಚಿತ್ಯ ಅನಂತ. ಮಾತೃ, ತಾಯಿ, ಮಾ, ಅಮ್ಮಿ, ಅಮ್ಮ, ಅವ್ವ. ಯವ್ವ ಹಾಗೂ ತಾಯಿ ಈ ಎರಡಕ್ಷರಗಳಲ್ಲಿ ಅನಂತ ಶಕ್ತಿ. ವಾತ್ಸಲ್ಯ, ನಿಷ್ಕಲ್ಮಷ ಪ್ರೀತಿ, ಕರುಣೆ, ತ್ಯಾಗ, ಮಮತೆಯ ಸಾಗರದ ಒಡಲನ್ನೇ ತನ್ನೊಳಗೆ ಇಟ್ಟುಕೊಂಡ ಪದವೇ ‘ಅವ್ವ’. ನನ್ನ ಬದುಕು ಕಟ್ಟಿಕೊಳ್ಳಲು, ನನ್ನ ಭವಿ?ದ ಬದುಕಿನ ಬಂಡಿಗೊಂದು ಸೊಗಸಾದ ಬಣ್ಣ ಬಳಿದಾಕೆ. ನನ್ನ ಸಾಧನೆಯ ಹೆಜ್ಜೆ ಗುರುತಿಗೆ ದೀಪ ತೋರಿದಾಕೆ. ನನಗೊಂದು ಸುವರ್ಣಮಯ ಬದುಕು ಕಟ್ಟಿಕೊಡಲು ಆಕೆ ನಿದ್ದೆಗೆಟ್ಟ ದಿನಗಳೆಷ್ಟೋ, ಬೆನ್ನು ಬಿಡದ ಅಲೆದಾಟಗಳೆಷ್ಟೋ, ಹೇಳತೀರದು. ಅದೊಂದು ಜನ್ಮ ಜನ್ಮದ ಬಂಧನ. ಅದು ಬಿಡಿಸಲಾರದ ಕಗ್ಗಂಟು. ಆಕೆ ಈ ಧರೆಯ ದೇವತೆ. ಆಕೆಗೊಂದು ನುಡಿನಮನ.

ತಾಯಿ ಮತ್ತು ಮಗನ ಒಂದು ಸುಂದರವಾದ ಪ್ರಸಂಗ....

ಎಲ್ಲಾ ಕೌಟಂಬಿಕ ಸಂಬಂದsಗಳ ಸಂಗಮ, ಕೇಂದ್ರ ಬಿಂದುವೇ ತಂದೆ-ತಾಯಿ. ಅದರಲ್ಲೂ ವಿಶೇಷವಾಗಿ ತಾಯಿಯ ಪಾತ್ರ ಹಿರಿದು. ತಾಯಿ ಕೇವಲ ಭೌತಿಕ ಸ್ವರೂಪದ ವ್ಯಕ್ತಿ ಮಾತ್ರವಲ್ಲ, ಆಕೆ ಒಂದು ದೊಡ್ಡ ತತ್ವ. ಮಕ್ಕಳ ಪಾಲನೆ-ಪೋಷಣೆ-ಗಂಡನ ಶ್ರೇಯಸ್ಸು-ಮನೆತನದ ಏಳಿಗಾಗಿ ಆಕೆ ಪಡುವ ಕಷ್ಟ ಮಾಡುವ ತ್ಯಾಗದ ಅಳತೆಗೆ ಮತ್ತು ಅಭಿವ್ಯಕ್ತಿಗೆ ಮೀರಿರುತ್ತದೆ. ಶಿಷ್ಟ ಸಮಾಜವೇ ಇರಲಿ ಜನಪದ ಸಮಾಜವೇ ಆಗಲಿ ತಾಯಿಯನ್ನು ಪೂಜನೀಯ ಸ್ಥಾನದಲ್ಲಿರಿಸಿ ಗೌರವಿಸಿಕೊಂಡು ಬಂದಿವೆ. ಹಿಂದಿನ ಪ್ರಾಚೀನ ಕಾಲದ ವೇದ-ಶಾಸ್ತ್ರ-ಪುರಾಣ-ಕಾವ್ಯಗಳಿಂದ ಮೊದಲು ಮಾಡಿಕೊಂಡು ಇಂದಿನ ಕಾಲದ ಸಾಹಿತ್ಯದವರೆಗೆ ಅವು ತಮ್ಮ ಅನುಬವ-ಪ್ರತಿಭೆ-ದರ್ಶನಗಳಿಗೆ ಅನುಗುಣವಾಗಿ ಸಾಕಷ್ಟು ಪ್ರಮಾಣದಲ್ಲಿ ತಾಯಿಯನ್ನು ಬಣಸಿವೆ. 

ಜನಪದ ಸಾಹಿತ್ಯ ಸಿಹಿನುಡಿಯಲ್ಲಿ ತಾಯಿಗೊಂದು ಮಹತ್ವದ ಪ್ರಾಧಾನ್ಯತೆಯಿದೆ. ಜಗಜ್ಜನನಿಯಾಗಿ ಮಾನವನ ಹುಟ್ಟು, ಬೆಳವಣಗೆಗೆ ಕಾರಣಕರ್ತಳಾದ ತಾಯಿ ಒಂಬsತ್ತು ತಿಂಗಳು ಹೆತ್ತು-ಹೊತ್ತು ತನ್ನ ಗಬsದಲ್ಲಿಟ್ಟು ಒಂದು ರೂಪವನ್ನು ಕೊಟ್ಟಂತೆ ಹೆತ್ತ ಮೇಲೂ ತನ್ನ ಮಕ್ಕಳಿಗೆ ಬದುಕನ್ನು ರೂಪಿಸುವವಳು ಆಕೆಯೇ. ಜನ್ಮ ಕೊಟ್ಟ ತಾಯಿಯನ್ನು ಕೋಟ್ಯಾನುಕೋಟಿ ಜನರನ್ನು ಹೊತ್ತು ನಿಂತ ಬsಮಿ ತಾಯಿಗೆ ಹೋಲಿಸಲಾಗುತ್ತೆ. ಒಳ್ಳೆಯವರಿರಲಿ ಕೆಟ್ಟವರಿರಲಿ ಎಲ್ಲರಿಗೂ ತನ್ನ ಮಡಿಲಿನಲ್ಲಿ ಸ್ಥಾನವನ್ನು ನೀಡಿದ ಬsಮಿಯಂತೆ, ತಾಯಿಯೂ ಕೂಡ ತನ್ನ ಮಕ್ಕಳು ಎಂತವರೇ ಇರಲಿ ತನ್ನ ಮಡಿಲಿಗಾಕಿಕೊಂಡು ಪ್ರೀತಿ-ವಾತ್ಸಲ್ಯದ ಧಾರೆಯನ್ನೇ ಎರೆಯುತ್ತಾಳೆ. ನೋವಿನಲ್ಲೂ ನಲಿವಿನಲ್ಲೂ ಮೊದಲು ಅಪ್ರಯತ್ನಪೂರ್ವಕವಾಗಿ ಹೊರಹಮ್ಮುವ ಶಬ್ಧ ‘ಅವ್ವ’ ಅಥವಾ ‘ಅಮ್ಮ’ ಎಂಬ ಪದಕ್ಕೆ ಸರಿಸಾಟಿ ಮತ್ತೊಂದಿಲ್ಲ. ‘ಅಮ್ಮ’ ಅಮೃತದ ಸಿಂಚನ, ‘ಅಮ್ಮ’ ಕ್ಷಮಯಾದsರಿತ್ರಿ, ‘ಅಮ್ಮ’ ನೋವಿಗೆ ಸಾಂತ್ವನ, ‘ಅಮ್ಮ’ ಸಂತೋಷಕ್ಕೆ ಕೇಂದ್ರ ಬಿಂದು. ಇದನ್ನು ಮನುಷ್ಯರ ಬಾಳಿನಲ್ಲಷ್ಟೆ ಅಲ್ಲ ಪ್ರಾಣ-ಪಕ್ಷಿಗಳಲ್ಲೂ ಕಾಣುತ್ತೇವೆ.

20,842 Sunset Live Wall Murals - Canvas Prints - Stickers | Wallsheaven

ತಾಯಿದೇವಿಯ ಪಾಲನೆ-ವಾತ್ಸಲ್ಯ-ತ್ಯಾಗದ ಮಹಿಮೆಗಳನ್ನು ಕೊಂಡಾಡುವಲ್ಲಿ ಜನಪದ ಪರಂಪರೆಯು ಹಿಂದಾಗಿಲ್ಲ. ಅಷ್ಟು ಮಾತ್ರವಲ್ಲ ತಾಯಿಯ ಬಗೆಗಿನ ಮಮತೆ ಗೌರವ ಪೂಜ್ಯ ಭಾವವನ್ನು ಅಭಿವ್ಯಕ್ತಿಸುವಲ್ಲಿಯೂ ಅದು ಶಿಷ್ಟ ಪರಂಪರೆಗಿಂತ ಭಿನ್ನವಾಗಿದೆ ಮತ್ತು ವಿಶಿಷ್ಟವಾಗಿದೆ.

ಭಾರತೀಯರಿಗೆ ಕಾಶಿಯಷ್ಟು ಪವಿತ್ರವಾದ ಪುಣ್ಯಕ್ಷೇತ್ರ ಮತ್ತೊಂದಿಲ್ಲ. ಆ ಕ್ಷೇತ್ರದ ದರ್ಶನದಿಂದ ಜನ್ಮಜನ್ಮಾಂತರದ ಪಾಪ ಕಳೆದು, ಪುಣ್ಯ ದೊರೆಯುತ್ತದೆ ಎಂಬುದೇ ಭಾರತೀಯ ಜನಪದರಗಿರುವ ನಂಬಿಕೆ. ಅಂದರೆ, ಆಕೆಯ ದೃಷ್ಟಿಯಲ್ಲಿ ಪುಣ್ಯಸಂಪಾದನೆಗಾಗಿ ತೀರ್ಥಯಾತ್ರೆ ಮಾಡುವುದಾಗಲಿ, ಯಜ್ಞಯಾಗಾದಿಗಳು, ವೈಬsವದ ಪೂಜೆ ಪುನಸ್ಕಾರಗಳು, ವ್ರತಗಳನ್ನು ಮಾಡುವುದಾಗಲಿ ಬೇಕಾಗಿಲ್ಲ. ಆದರೆ ಒಂದು ತಾಸಿನ ಹಾದಿಯಾದ ತೌರೂರಿನಲ್ಲಿ ಕಾಶಿಯ ವಿಶ್ವನಾಥನಷ್ಟೇ ಭಾಗ್ಯವನ್ನು ಕೊಡುವ ತಾಯಿ ಇದ್ದಾಳೆ. ಆಕೆಯಲ್ಲಿಗೆ ಹೋಗಿ ತನಗಾದ ಕಷ್ಟ-ಸುಖಗಳನ್ನು ಹೇಳಿಕೊಂಡರೆ ಸ್ಪಂಧಿಸುವಳು, ಮಾರ್ಗದರ್ಶನ ನೀಡುವಳು, ಗಂದಲ, ದುಃಖಮಯ ವಾತಾವರಣದ ಮನಸ್ಸಿಗೆ ಸರಿಯಾದ ಮಾರ್ಗ ನೀಡಿ ಸಾಂತ್ವನ-ಶಾಂತಿ-ನೆಮ್ಮದಿ ನೀಡುವಳು. ಮಗಳ ಸುಖ-ದುಃಖದಲ್ಲಿ ಸಹಭಾಗಿಯಾಗುವಳು. ಕಾಶಿಗೆ ಹೋಗುವುದಕ್ಕಿಂತ ಇಂತಹ ಎಲ್ಲಾ ಭಾಗ್ಯವನ್ನು ಕೊಟ್ಟು ಆಶೀರ್ವದಿಸುವ ತಾಯಿದೇವರತ್ತಿರ ಹಗುವುದೇ ಆರೋಗ್ಯ ಪೂರ್ಣವೆಂದು ಭಾವಿಸುತ್ತಾಳೆ. ಅದೇ ಕಾಶಿ ವಿಶ್ವನಾಥ ಕಲ್ಲು ದೇವರು. ಅವನನ್ನು ಬೇಡಿದರೆ ಆಕೆಗೇನೂ ಕೊಟ್ಟಾನು. ಹೀಗಾಗಿ ಹೊತ್ತು, ಹೆತ್ತು, ಎದೆಯ ಹಾಲುಣಸಿ ಸಾಕಿ, ಸಲುಹಿ ಪೋಷಿಸಿದ ತಾಯಿಯೇ ಆಕೆಗ ಸರ್ವಸ್ವ, ಕಾಶಿ ವಿಶ್ವನಾಥನಷ್ಟೇ ಪವಿತ್ರಳು.

ತಂದೆ - Twitter Search / Twitter

ಕಾಶಿಗೆ ಹೋಗಲಿಕ್ಕೆ ಏಸೊಂದು ದಿನ ಬೇಕು

ತಾಸ್ೞೊತ್ತಿನ ಹಾದಿ ತೌರೂರು ಮನೆಯಲ್ಲಿ

ಕಾಶಿ ಕುಂತವಳೆ ಹಡೆದವ್ವ

ತಾಯಿದರ್ಶನ ಕಾಶಿಯಲ್ಲಿರುವ ವಿಶ್ವನಾಥನಿಗಿಂತ ಪವಿತ್ರವಾದದ್ದು. ವಿಶ್ವನಾಥನನ್ನು ಪೂಜಿಸಿದರೆ ನಮಗೆ ಏನು ದೊರೆಯುತ್ತದೋ ಅದಕ್ಕಿಂತ ಹೆಚ್ಚು ತನ್ನ ತಾಯಿಯನ್ನು ಪೂಜಿಸಿದರೆ ಸಿಗುತ್ತದೆ. ಪಾಪ ಪರಿಹಾರಕ್ಕಾಗಿ, ಪುಣ್ಯಸಂಪಾದನೆಗಾಗಿ, ಆಕೆಯ ಸೇವೆ ಮಾಡುವ ಭಾಗ್ಯದಿಂದ ಏನೆಲ್ಲಾ ಪಡೆಯಬಹುದು ಎನ್ನುತ್ತಾಳೆ ಜನಪದ ಸಾಹಿತ್ಯದ ಮಹಿಳೆ.

 ಶಿಷ್ಟ ಸಾಹಿತ್ಯದಲ್ಲಿನ ‘ಮಾತೃದೇವೋಬವ’ ಎಂಬ ಸೂಕ್ತಿಯು ತಾಯಿಯೇ ದೈವ ಎಂಬ ಅರ್ಥವನ್ನೇ ಹೊಂದಿದೆ. ಆದರೆ, ಈ ಸೂಕ್ತಿಗಿಂತ ಈ ಜನಪದ ಸಾಹಿತ್ಯದ ತ್ರಿಪದಿ ಹೆಚ್ಚಿನ ಅರ್ಥ ಹಾಗೂ ದ್ವನಿ ಸಾಂದ್ರತೆಯನ್ನು ಹೊಂದಿದೆಯೆಂದ ಹೇಳಬಹುದು.  

ತಾಯವ್ವ ಎಂಬೊಳು ದೇವಲೋಕದ ಮನುಸಾಳು

ಕಾಲು ಸೋಕಿದರೆ ಕರ್ಮವು  ತಾಯವ್ವ

ಕಾಶಿಗ್ೞೋದರು ಕಳೆಯಾದು

ದೇವಲೋಕದಲ್ಲಿರುವ ದೇವತೆಯಂತಿರುವ ತನ್ನ ತಾಯಿಯ ಪಾದ ಸ್ಪರ್ಶವಾದರೆ ಸಾಕು ತನ್ನ ಪಾಪ ಪರಿಹಾರ ಎಂಬುದಾಗಿ ಭಾವಿಸುತ್ತಾಳೆ.

‘ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂದವಿಲ್ಲ’ ಎಂಬ ಗಾದೆ ಕೂಡ ಅಷ್ಟೆ. ಮಾತೃತ್ವದ ಆಳ ಮತ್ತು ಸತ್ವಗಳು ಇದರಲ್ಲಿ ಅರ್ಥಪೂರ್ಣವಾಗಿ ಅಡಗಿಕೊಂಡಿವೆ. ಇಂಥ ಅಭಿವ್ಯಕ್ತಿಗಳು ಜನಪದ ಪರಂಪರೆಯಲ್ಲಿ ವ್ಯಾಪಕವಾಗಿ ದೊರೆಯುತ್ತವೆ. ಅಷ್ಟು ಮಾತ್ರವಲ್ಲ ತಾಯಿಯ ವ್ಯಕ್ತಿತ್ವದ ವಿವಿದs ಮಗ್ಗಲುಗಳನ್ನು ಶಿಷ್ಟ ಪರಂಪರೆಗಿಂತ ಜನಪದ ಪರಂಪರೆ ಹೆಚ್ಚು ವಾಸ್ತವದ ನೆಲೆಯಲ್ಲಿ ತೆರದಿಡುತ್ತವೆ. ಇದು ಜನಪದ ಪರಂಪರೆಯ ವೈಶಿಷ್ಟ್ಯ. ಈ ಮಾತಿಗೆ ಸಂಬಂಧಿಸಿದ ಸಂಕ್ಷಿಪ್ತವಾದ ಚರ್ಚೆ ಇಲ್ಲಿ ಪ್ರಸ್ತಾಪಿತವಾಗಿದೆ. 

ಜನಪದರು ನಿರಕ್ಷರಕುಕ್ಷಿಗಳಾದರೂ ಸಂಕುಚಿತ ದೃಷ್ಟಿಯವರಲ್ಲ. ಸಿದ್ಧಮಾದರಿಯನ್ನು ಅವರು ಅನುಸರಿಸುವವರು ಅಲ್ಲ. ಅವರದು ಮುಕ್ತ ಮನಸ್ಸು ಸಮಗ್ರದೃಷ್ಟಿ. ವಸ್ತುವನ್ನು ಅದರ ಎಲ್ಲಾ ಮಗ್ಗಲುಗಳೊಂದಿಗೆ ನೋಡುವ ವಿಶಿಷ್ಟ ದೃಷ್ಟಿಕೋನ ಅವರದು. ಅಲ್ಲಿ ವಾಸ್ತವತೆ  ಮುಖ್ಯವಾಗಿರುತ್ತದೆಯೇ ಹೊರತು, ಇದನ್ನು  ಹೇಳಬೇಕು ಮತ್ತು ಇದನ್ನು ಹೆಳಬಾರದು ಎಂಬ ಶಿಷ್ಟ ಪ್ರಜ್ಞೆ ಮುಖ್ಯವಾಗಿರುವುದಿಲ್ಲ.

ಕುಟುಂಬದ ನಿರ್ವಹಣೆಯಲ್ಲಿ ತಂದೆ ತಾಯಿ ಇಬ್ಬರೂ ಜವಾಬ್ದಾರರಾಗಿರುತ್ತಾರಾದರೂ, ಪ್ರಕೃತಿ ಸಹಜವಾಗಿ ಗೃಹಿಣಯ ಜವಾಬ್ದಾರಿ ಅಧಿಕವಾಗಿರುತ್ತದೆ. ಮಕ್ಕಳ-ಪಾಲನೆ-ಪೋಷಣೆ-ಬೆಳವಣಯಲ್ಲಿ ತಾಯಿಯ ಪಾತ್ರ ಪ್ರಮುಖವಾಗಿರುತ್ತದೆ. ಈ ಹಂತದಲ್ಲಿ ಆಕೆಯ ಸಾಮಾನ್ಯ ಜವಾಬ್ದಾರಿಗಳಿಂದ ಮೊದಲು ಮಾಡಿ, ಹೆಚ್ಚುವರಿ ಪರಿಶ್ರಮ-ತ್ಯಾಗ-ಬಲಿದಾನಗಳಂತಹ ವಿಶೇಷ ಜವಾಬ್ದಾರಿಗಳನ್ನು ನಿರ್ವಹಿಸುತ್ತಾಳೆ. ಈ ಹಿನ್ನೆಲೆಯಲ್ಲಿ ತಾಯಂದಿರ ಮಾದರಿಗಳನ್ನು ಸಾಮಾನ್ಯ ತಾಯಂದಿರು, ತ್ಯಾಗಮಯ ತಾಯಂದಿರು, ಸಂಕೀರ್ಣ ತಾಯಂದಿರು ಎಂದು ವರ್ಗೀಕರಿಸಬಹುದಾಗಿದೆ. 

೧)    ಸಾಮಾನ್ಯ ತಾಯಂದಿರು: ಸಮಾಜದ ನಿತ್ಯ ಜೀವನದಲ್ಲಿ ಅಧಿಕ ಪ್ರಮಾಣದಲ್ಲಿ ಇಂತಹ ತಾಯಂದಿರನ್ನು ಕಾಣುತ್ತೇವೆ. ಮಕ್ಕಳ ಪಾಲನೆಪೋಷಣೆ ತಂದೆತಾಯಿ ಇಬ್ಬರಿಗೂ ಸೇರಿರುತ್ತದೆಯಾದರೂ ತಂದೆ ಜವಾಬ್ದಾರಿಯ ನಿರ್ವಹಣೆಯಲ್ಲಿ ವಿಪsಲನಾದಾಗ, ತಾಯಿ ಅವನಂತಯೇ ಮಾಡದೆ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿ, ಮಕ್ಕಳ ಪೋಷಣೆ ಮಾಡುತ್ತಾಳೆ. ಇದು ತನ್ನ ನೈಜ ಮತ್ತು ಪರಮ ಜವಾಬ್ದಾರಿ ಎಂಬುದು ಸ್ತ್ರೀ ಸಮುದಾಯದ ಸಾಮಾನ್ಯ ಗ್ರಹಿಕೆ. ಅನಿವಾರ್ಯವಾದಾಗ ಮಕ್ಕಳ ಪಾಲನೆಪೋಷಣೆಯಲ್ಲಿ ಆಕೆ ಏಕಾಂಗಿಯಾದರೂ ಮುನ್ನಡೆಯುತ್ತಾಳೆ. ಪರಿಶ್ರಮ ಲೆಕ್ಕಿಸದೆ ಅಪಮಾನ ಎನ್ನದೆ, ಕೊನೆಗೆ ಭಿಕ್ಷೆ ಬೇಡಿಯಾದರೂ, ಮಕ್ಕಳನ್ನು ಸಾಕುವ, ಬೇಕಾದಷ್ಟು ತಾಯಂದಿರನ್ನು ನಮ್ಮ ಸಮಾಜದಲ್ಲಿ ಕಾಣುತ್ತೇವೆ.

ಆಕೆಗ ಸದಾ ಮಕ್ಕಳ ಬsವಿಷ್ಯದ ಚಿಂತೆ. ಸರೀಕರ ಎದುರು ತನ್ನ ಮಕ್ಕಳು ತಲೆತಗ್ಗಿಸದಂತೆ ಬಾಳಬೇಕೆಂಬುದು ಆಕೆಯ ಹೆಬ್ಬಯಕೆ. ಅದಕ್ಕಾಗಿ ಮಕ್ಕಳ ವಿದ್ಯಾಭ್ಯಾಸದ ಬಗೆಗೂ ಆಕೆಯದು ಹಗಲು – ಇರುಳು ಚಿಂತೆ. ಅದಕ್ಕಾಗಿ ಆಕೆ ಪಡುವ ಶ್ರಮ, ಮಾಡುವ ಯುಕ್ತಿಯು ಪ್ರತಿಕ್ಷಣ ಎಲ್ಲಾ ಕಾಲದಲ್ಲೂ ವ್ಯಕ್ತವಾಗಿದೆ. ಮಕ್ಕಳ ವಿಷಯದಲ್ಲಿ ಆಕೆ ತನ್ನ ಕರ್ತವ್ಯಗಳಿಗೆ ಮಿತಿಯನ್ನು ಹಾಕಿಕೊಳ್ಳುವುದೇ ಇಲ್ಲ. ದೊಡ್ಡವರಾಗಿ ಮಕ್ಕಳು ಸ್ವತಂತ್ರವಾಗಿ ಬಾಳುತ್ತಿದ್ದಾಗಲೂ ಅವರ ಜೀವನದಲ್ಲಿ ಸಂಬsವಿಸುವ ಎಡರು-ತೊಡರು, ಕಷ್ಟ-ಸಂದಿಗ್ಧತೆಯ ಪ್ರಸಂಗದಲ್ಲಿ ತನ್ನೆಲ್ಲಾ ಸಾಮರ್ಥ್ಯವನ್ನು ಒಟ್ಟುಗೂಡಿಸಿ ಮಾರ್ಗದರ್ಶನ ಮಾಡುವುದುಂಟು.

ಜೀವನ ಪ್ರಯಾಣದಲ್ಲಿ ಮಕ್ಕಳು ಅನಿವಾರ್ಯವಾಗಿ ಸಾಹಸದ ಕಾರ್ಯವನ್ನು ಮಾಡಬೇಕಾದ ಸಂದಬs ಬಂದಾಗಲೂ ಆಕೆ ತನ್ನ ಕೈಲಾದ ಎಲ್ಲಾ ನೆರವನ್ನು ನೀಡಿ, ಬರಬಹುದಾದ ಅಪಾಯಗಳನ್ನು ಗೆಲ್ಲುವ ಯುಕ್ತಿಗಳನ್ನು ತಿಳಿಸಿ, ದೈವಾನುಗ್ರಹ, ಮಂತ್ರಶಕ್ತಿ, ಸಂಪಾದಿಸಲು ಅವರನ್ನು ಪ್ರೇರೇಪಿಸಿ, ಸೂಕ್ತ ಮಾರ್ಗದರ್ಶನ ಮಾಡುತ್ತಾಳೆ.

ನಿಷ್ಪಕ್ಷಪಾತ ದೃಷ್ಟಿಗೆತಾಯಿಮತ್ತೊಂದು ಹೆಸರು. ತಾನು ಹೆತ್ತ ಮಕ್ಕಳೆಲ್ಲಾ ದೈಹಿಕವಾಗಿ ಮಾನಸಿಕವಾಗಿ ಸಮಾನ ಸ್ಥಿತಿಯಲ್ಲಿ ಇಲ್ಲದಿರುವಾಗ ಆಕೆ ಬುದ್ಧಿವಂತನಲ್ಲದವನನ್ನು ಜರಿಯದೆ ಅವನ ಬಗೆ ವಿಶೇಷ ಕಾಳಜಿಯನ್ನು ವಹಿಸುವುದುಂಟು. ಅವನಿಗೆ ಬೇಕಾದ ನೆರವುಧೈರ್ಯಪೋತ್ಸಾಹ ನೀಡಿ ಅವನು ತನ್ನ ಕಾಲ ಮೇಲೆ ತಾನು ನಿಲ್ಲುವಂತಹ ಅವಕಾಶ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗುತ್ತಾಳೆ. ಇದಕ್ಕಾಗಿ ಕುಟುಂಬದ ಇತರ ಹಲವು ಸದಸ್ಯರ ಮನವೊಲಿಸುವುದನ್ನು ಅನೇಕ ಸಂದರ್ಭಗಳಲ್ಲಿ ಗಮನಿಸುತ್ತೇವೆ.

ಮಕ್ಕಳ ಬದುಕಿಗೆ ಆಕೆ ಸರ್ವ ‘ಚೈತನ್ಯದಾಯಿ’. ತನ್ನ ಮಗ, ಜೀವನದ ಸಂಗ್ರಾಮದಲ್ಲಿ ಇಕ್ಕಟ್ಟಿಗೆ ಸಿಲುಕಿ ಅಸಹಾಯಕನಾಗಿ ಮುಂದು ಕಾಣದೆ, ಮುದುಡಿ ಕುಳಿತಾಗ ತಾಯಿಯು ಎದೆಗುಂದದೆ, ಅವನ ಸಾಮರ್ಥ್ಯವನ್ನು ಅವನ ಅರಿವಿಗೆ ತಂದು ಕೊಟ್ಟು, ಅವನಲ್ಲಿ ಹುಮ್ಮಸ್ಸು ತುಂಬಿ, ಹುರಿದುಂಬಿಸಿ ಹೇಡಿಯಂತಿದ್ದ ಅವನನ್ನು ವೀರನನ್ನಾಗಿಯೋ, ಸಶಕ್ತನನ್ನಾಗಿಯೋ ಮಾಡುತ್ತಾಳೆ. ಇಂತಹ ತಾಯಿಯ ಚಿತ್ರಣವನ್ನು ಅನೇಕರ ಬದುಕಿನಲ್ಲಿ ಕಾಣುತ್ತೇವೆ. ಹತ್ತವರಿಗೆ ಹಗ್ಗಣ ಮುದ್ದು’ ಎಂಬ ಗಾದೆ ಮಕ್ಕಳ ಬಗೆಗಿನ ತಂದ-ತಾಯಿಗಳ ವಾತ್ಸಲ್ಯವನ್ನು ಸೂಚಿಸುತ್ತದೆ. ಮಕ್ಕಳು ಜಾಣರಿರಲಿ, ಇಲ್ಲದಿರಲಿ, ಅಂದವಿರಲಿ, ಅಂದಗೇಡಿಗಳಾಗಿರಲಿ, ಕುಂಟರಿರಲಿ, ಕುರುಡರಿರಲಿ ಅವರಲ್ಲಿ ಭೇದ-ಭಾವ ತೋರದೆ ಎಲ್ಲರನ್ನು ಸಮಾನ ಪ್ರೀತಿಯಿಂದ ನಡುವ ವಿಶಾಲಹೃದಯಿಯಾಗಿರುತ್ತಾಳೆ ತಾಯಿ.

ವಿಕಲಚೇತನನೊಬ್ಬ ತಾನು ಸಂಗೀತಗಾರನಾಗಬೇಕು ಅಥವಾ ಕಲೆಗಾರನಾಗಬೇಕು, ನೃತ್ಯಗಾರನಾಗಬೇಕು,.. ಹೀಗೆ ಆತನ ಅಸಾದs ಬಯಕೆಯನ್ನು ಮುಂದಿಟ್ಟಾಗ, ಸಾಮಾನ್ಯ ವರ್ಗಕ್ಕೆ ಸೇರಿದ ಅವನ ತಾಯಿ ಆತಂಕಕ್ಕೆ ಒಳಗಾಗುತ್ತಾಳಾದರೂ, ಮಗನ ಬಯಕೆಯ ತೀವ್ರತೆಯನ್ನು ಮನಗಂಡು ಅನೇಕ ಬಗೆಯ ಕಷ್ಟಪಟ್ಟು ಆ ಸಾಧನೆಯನ್ನು ಮಾಡಲು ಅದಕ್ಕೆ ಪೂರಕವಾದ ಮಾರ್ಗವನ್ನು ಕಂಡು ಹಿಡಿದು ಮಗನ ಆಸೆ ಪೂರೈಸುತ್ತಾಳೆ. ಅಲ್ಲದೆ, ಮಗ ದೈಹಿಕವಾಗಿ ಮತ್ತು ಮಾನಸಿಕವಾಗಿ ಹೇಗೇ ಇದ್ದರೂ ಅವನ ಬಯಕೆಯನ್ನು ಏನೆಲ್ಲಾ ಕಷ್ಟಪಟ್ಟಾದರೂ ಪೂರೈಸುವಲ್ಲಿಯೂ ಯಶಸ್ವಿಯಾಗುತ್ತಾಳೆ.

ತನ್ನ ಶಕ್ತಿಮೀರಿ ತಾಯಿ ಪ್ರೀತಿಯಿಂದ ಪಾಲನೆ-ಪೋಷಣೆ ಮಾಡುತ್ತಿದ್ದಂತೆಯೇ ಕಲವೊಮ್ಮೆ ಬೈದು, ಗದರಿಸಿ, ಸಿಟ್ಟು ಮಾಡಿಯೂ ಮಗನು ಸರಿಯಾದ ದಾರಿಯಲ್ಲಿ ನಡೆಯಲು ಪ್ರೇರೇಪಿಸುವುದುಂಟು. ಸಹನೆ ಮೀರಿದಾಗ ಈ ವಾತ್ಸಲ್ಯಮಯಿ ಸ್ವಲ್ಪ ವ್ಯಘ್ರವಾಗಿಯೂ ನಡೆದುಕೊಳ್ಳುವುದುಂಟು. ತಾಯಿ ತನ್ನ ಅಸಕ್ತನಾದ ಮಗನನ್ನು ಸಾಕಷ್ಟು ಪಾಲನೆಪೋಷಣೆ ಮಾಡಿ, ಬೆಳೆಸುತ್ತಾಳಾದರೂ ಕೊನೆಗೆ ಅವನು ತನ್ನ ದಾರಿದ್ರ್ಯದಿಂದ ಹೊರಬರದೆ  ಹೋದಾಗಅವನನ್ನು  ನಿನಗೇನು  ಬಂದದೆ  ಬರಬಾರದ್ದು. ಒಲೆ ಮುಂದೇ ಕೂತುಕೊಂಡಿದ್ರೆ ಉಣ್ಣಾಕೆ ಉಟ್ಕೋಳಾಕೆ ಎಲ್ಲಾ ಬಂದಾದ?… ಮುಂತಾಗಿ ಬೈದು, ಬೆದರಿಸಿ, ಬುದ್ಧಿವಾದ ಹೇಳಿ ಅವನಲ್ಲಿ ಕ್ರಿಯಾಶೀಲತೆಯನ್ನು ಬಡಿದೆಚ್ಚರಿಸುತ್ತಾಳೆ. ಇದರಿಂದ ಎಚ್ಚರಗೊಂಡ ಅವನು ಮನೆಯನ್ನು ತೊರೆದು, ಎಲ್ಲಾದರೂ ದುಡಿದು, ಸಂಪಾದಿಸಿ, ತಾನು ಉಳಿದವರಂತೆ ಬಾಳಬಹುದೆಂಬ ತೀರ್ಮಾನಕ್ಕೆ ಬರುತ್ತಾನೆ. ಅಲ್ಲಿಂದ ಅವನ ದಾರಿದ್ರ್ಯ ದೂರವಾಗಿ ಏಳಿಗೆಯ ದಿನಗಳು ಪ್ರಾರಂಬsವಾಗುತ್ತವೆ. ಹೀಗೆ ಬೆಂಗಾಡನ್ನೂ ನಂದನವನ್ನಾಗಿಸುವುದು ಮೊದಲಗೊಂಡು, ನಿತ್ಯ ಜೀವನದಲ್ಲಿ ಮಕ್ಕಳ ಹಸಿವುಬಾಯರಿಕೆ ಇತರರ ಕೆಟ್ಟ ದೃಷ್ಟಿಯಿಂದ ಅವರ ರಕ್ಷಣೆ….ಹೀಗೆ ಮಕ್ಕಳ ಬೆಳವಣಗೆಯ ಪ್ರತಿಹಂತದಲ್ಲಿ ತಾಯಿ ತನ್ನ ಜವಾಬ್ದಾರಿಯನ್ನು ಸಹಜವಾಗಿ ನಿರ್ವಹಿಸುತ್ತಾಳೆ. ಇದು ಸರ್ವೇ ಸಾಮಾನ್ಯವಾಗಿ ಸಮಾಜದಲ್ಲಿ ನಾವು ಕಾಣುವ ತಾಯಿಯ ಚಿತ್ರ.

೨)    ತ್ಯಾಗಮಯ ತಾಯಂದಿರು: ಮಕ್ಕಳ ಪಾಲನೆ-ಪೋಷಣೆ-ಅವರ ಏಳಿಗೆಗಾಗಿ ಆಕೆ ಪಡುವ ಪರಿಶ್ರಮ, ನಿರ್ವಹಿಸುವ ಜವಾಬ್ದಾರಿ ಒಂದು ಮಹಾನ್ ಸಾಹಸದ ಗಾಥೆಯಂತೆ ಕಂಡು ಬರುತ್ತದೆ. ಇದನ್ನು ಮೀರಿ ಆಕೆಯ ಮಕ್ಕಳ ಏಳಿಗೆಗೆ ಅಪಾರ ತ್ಯಾಗ ಮಾಡುವುದು ಉಂಟು.

ಮಗುವಿನ ಜೀವನವನ್ನು ಸರಿದಾರಿಗೆ ತರುವಲ್ಲಿ ಅಸಕ್ತಳಾದಾಗ ತನ್ನ ಕಿಡ್ನಿಗಳಂತಹ ಅಂಗಾಂಗಗಳನ್ನು ಮಾರಿಯಾದರೂ, ಮಗನ ಜೀವನವನ್ನು ರೂಪಿಸುವಲ್ಲಿ ಯಶಸ್ವಿಯಾಗುತ್ತಾಳೆ.

     ಪತಿಯ ಕಟುಕನಾಗಿದ್ದಾಗ ಮಗುವಿನ ಭವಿಷ್ಯಕ್ಕೆ ಕುಂದುಂಟಾಗುತ್ತದೆಯೆಂಬ ಭಾವನೆ ವ್ಯಕ್ತವಾಗುತ್ತಿದ್ದಂತೆಯೇ ಗಂಡನಿಂಗ ಮಗುವನ್ನು ಕರೆದುಕೊಂಡು ಗಂಡ, ಆತನ ಸಂಪತ್ತು ಎಲ್ಲಾ ಬಿಟ್ಟು ಪತಿಯಿಂದ ದೂರವಿಟ್ಟು ಬೆಳೆಸುವ ಸಂದಬsವೂ ಮಗುವಿನಲ್ಲಿಟ್ಟಿರುವ ಅತಿಯಾದ ವ್ಯಾಮೋಹವನ್ನು ವ್ಯಕ್ತಪಡಿಸುತ್ತದೆ.

ಬಡತನದಲ್ಲಿದ್ದ ವಿದsವೆ ಅಥವಾ ಅಬಲೆಯೊಬ್ಬಳು ತನ್ನ ಮಗುವಿನ ಕೋರಿಕೆಯನ್ನೋ, ಅವನ ಜೀವನವನ್ನು ರೂಪಿಸುವದಕ್ಕಾಗಿಯೋ ಕೊನೆಗೆ ದಾರಿತೋರದೆ ಇದ್ದಾಗ ಅನಿವಾರ್ಯವಾಗಿ ಮತ್ತೊಬ್ಬನಿಗೆ ತನ್ನ ಶರೀರ ಒಪ್ಪಿಸುವ ತ್ಯಾಗಕ್ಕೆ ಕೆಲವೊಮ್ಮೆ ಮುಂದಾಗುತ್ತಾಳೆ. ಹೀಗೆ ಶೀಲಕ್ಕಿಂತ ಸಂತಾನ ಹೆಚ್ಚೆಂದು ಪರಿಗಣಸಿದ ಪ್ರಸಂಗವನ್ನು ವಿರಳವಾದರೂ ಕೆಲವಡೆ ಕಾಣುತ್ತೇವೆ.

    ಸರ್ವೇಸಾಮಾನ್ಯವಾಗಿ ತಾಯ್ತನಕ್ಕೂ ಮತ್ತು ತ್ಯಾಗಕ್ಕೂ ಅವಿನಾಭಾವ ಸುಬಂದsವಿರುತ್ತದೆ. ಒಂಬತ್ತು ತಿಂಗಳು ಹೊತ್ತು, ಜನ್ಮ ‘ಒತ್ತೆ’ ಇಟ್ಟು ಹೆತ್ತು, ಅಸಾದs ಪರಿಶ್ರಮ ವಹಿಸಿ, ಬೆಳೆಸಿ, ತನ್ನ ಬದುಕಿನ ಕೊನೆಯ ಉಸಿರನ್ನು ಮಕ್ಕಳ ಕಲ್ಯಾಣದಲ್ಲಿಯೇ ಸಾರ್ಥಕ ಪಡಿಸಿಕೊಳ್ಳುವ ತ್ಯಾಗ, ತಾಯಿಯ ವ್ಯಕ್ತಿತ್ವದ ಸಹಜ ಗುಣವಾಗಿರುತ್ತದೆ.

ಭಾವನಾ ಪ್ರಧಾನವಾದ ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಂತೂ, ತಾಯಿಯ ತ್ಯಾಗ ಬಲಿದಾನಗಳೂ ಲೆಕ್ಕವಿಲ್ಲದಷ್ಟು. ತನ್ನ ಮಕ್ಕಳು ಲೋಕ ಪ್ರಸಿದ್ಧ ವೀರರಾಗಿದ್ದರೂ ಕುಂತಿ ವನವಾಸ ಕಾಲದಲ್ಲಿ ಅವರನ್ನು ನೋಡಿಕೊಳ್ಳಲು ಮಕ್ಕಳೊಂದಿಗೆ ತಾನೂ ಕಾಡಿಗೆ ತೆರಳುವ ಪ್ರಸಂಗ ‘ಮಹಾಭಾರತ’ದಲ್ಲಿ ಪ್ರಸಿದ್ಧವಾಗಿದೆ. 

ಹೀಗೆ ಮಾತೃತ್ವದ ಆಳ ಮತ್ತು ಸತ್ವಗಳು ಇದರಲ್ಲಿ ಅರ್ಥಪೂರ್ಣವಾಗಿ ಅಡಗಿಕೊಂಡಿವೆ. ಇಂಥ ಅಭಿವ್ಯಕ್ತಿಗಳು ಜನಪದ ಪರಂಪರೆಯಲ್ಲಿ ವ್ಯಾಪಕವಾಗಿ ದೊರೆಯುತ್ತವೆ. ಅಷ್ಟು ಮಾತ್ರವಲ್ಲ ತಾಯಿಯ ವ್ಯಕ್ತಿತ್ವದ ವಿವಿದs ಮಗ್ಗಲುಗಳನ್ನು ಶಿಷ್ಟ ಪರಂಪರೆಗಿಂತ ಜನಪದ ಪರಂಪರೆ ಹೆಚ್ಚು ವಾಸ್ತವದ ನೆಲೆಯಲ್ಲಿ ತೆರದಿಡುತ್ತವೆ. ಇದು ಜನಪದ ಪರಂಪರೆಯ ವೈಶಿಷ್ಟ್ಯ.

ಎಂತಹ ಕಠಿಣ ಪ್ರಸಂಗಗಳು ಎದುರಾದರೂ ಮಕ್ಕಳನ್ನೂ ಸಾಕಲು ಹಿಂಜರಿಯದ ತಾಯಿಗೆ, ಪ್ರಸಕ್ತ ಆಧುನಿಕ ಸಮಾಜದ ಮಕ್ಕಳು ಕೃತಘ್ನರಾಗಿಲ್ಲ. ಹತ್ತು ಮಕ್ಕಳನ್ನು ಹೆತ್ತ ತಾಯಿಗೆ ಪೋಷಣೆಗೆ ತೊಂದರೆ ಕಾಣಲಲಿಲ್ಲ. ಹತ್ತು ಮಕ್ಕಳು ಇರುವ ಒಬ್ಬ ತಾಯಿಯನ್ನು ನೋಡಲಾಗಲಿಲ್ಲ. ತ್ಯಾಗಮಯಿ, ವಾತ್ಸಲ್ಯಮಯಿಯಾದ ಆಕೆಗೆ ಒಂದಿಷ್ಟು ಸಂತೋಷ, ನೆಮ್ಮದಿ, ಶಾಂತಿಯಿಂದಿಡಲು ಸಾಧ್ಯವಾಗಲಿಲ್ಲ.

ನಾ..ಏಳೇಳು ಜನ್ಮ ಎತ್ತಿದರೂ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ಮತ್ತೊಮ್ಮೆ, ಮೊಗದೊಮ್ಮೆ ಕೈಮುಗಿವೆ, ತುತ್ತು ಕೊಟ್ಟ ದೇವತೆಗೆ, ಹೊತ್ತು ಕಳೆದು, ಮುಪ್ಪಾದರೂ ನಾ ತಳ್ಳಲಾರೆ ವೃದ್ಧಾಶ್ರಮಕ್ಕೆ. ಆದರೆ, ಬುದ್ಧಿಗೇಡಿ ಮ್ಮಕಳಿಂದಾಗಿ ಈಗಾಗಲೇ ಪರಿತ್ಯಕ್ತಳಾಗಿ ವೃದ್ಧಾಶ್ರಮದ ಮೂಲೆಯೊಂದರಲ್ಲಿ ಕುಳಿತಿದ್ದ ತಾಯಿಯ ಹೃದಯ ಪ್ರತಿಕ್ಷಣ ಹಾರೈಸುತ್ತದೆ, ಏನೆಂದು?

‘ನನ್ನ ಮಗ ಚೆನ್ನಾಗಿರಲಿ, ಸುಖ-ಸಮೃದ್ಧಿಯಿಂದ ಬದುಕಲಿ’ ಎಂದು. ಅಷ್ಟೇಅಲ್ಲ, ತನ್ನ ಮಗನ ಬಾಲ್ಯದ ಸವಿಸವಿ ನೆನಪು..ನೆನೆಯುತ್ತಾ, ನಸುನಗೆ ಬೀರುತ್ತಾ, ಅಲ್ಲಿಂದಲೇ ಮಗನ ಭವಿಷ್ಯಕ್ಕಾಗಿ ಕೈಮುಗಿವ ದೈವತ್ವದ ಸಾಕಾರ ಮೂರ್ತಿ ಆಕೆ. ಆಕೆಯೇ ‘ಈ ನೆಲದ ದೇವತೆ’. ಈ ಧರೆಗೆ ದೊಡ್ಡವಳಲ್ಲದೆ ಮತ್ತೇನು?

ಡಾ ಅನಸೂಯ ಎಸ್ ಕೆಂಪನಹಳ್ಳಿ

ಸಾಹಿತಿ, ಮೈಸೂರು