ಫೆ.28ರಂದು ಉಪ್ಪಾರ ಸಮುದಾಯದ ಗ್ರಾಪಂ ನೂತನ ಸದಸ್ಯರಿಗೆ ಸನ್ಮಾನ

ಗುಂಡ್ಲುಪೇಟೆ: ಉಪ್ಪಾರ ಸಮುದಾಯದಿಂದ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ನೂತನ ಸದಸ್ಯರಿಗೆ ಫೆ.28ರಂದು ಉಪ್ಪಾರ ಜನಜಾಗೃತಿ ಯುವ ವೇದಿಕೆ ವತಿಯಿಂದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಉಪ್ಪಾರ ಸಮುದಾಯದ ಮುಖಂಡ ಹಾಗೂ ಭೀಮನಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ.ಬಿ.ಶಿವಕುಮಾರ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉಪ್ಪಾರ ಸಮುದಾಯದ 57 ಮಂದಿ ಗೆಲುವು ಸಾಧಿಸಿದ್ದು, ಅದರಲ್ಲಿ 5 ಮಂದಿ ಅಧ್ಯಕ್ಷರು, 2 ಜನ ಉಪಾಧ್ಯಕ್ಷರಾಗಿದ್ದಾರೆ. ಎಲ್ಲರಿಗೂ ಪಕ್ಷಾತೀಕವಾಗಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಫೆ.28ರ ಬೆಳಗ್ಗೆ 10 ಗಂಟೆಗೆ ಪಟ್ಟಣದ ಶಿಕ್ಷಕರ ಭವನದಲ್ಲಿ ಸಮಾರಂಭ ನಡೆಯಲಿದ್ದು, ಸಮುದಾಯದ ಮುಖಂಡರು ಹೆಚ್ಚಿನ ರೀತಿಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ಹಾಗೂ ಶಾಸಕ ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಅಯ್ಯನ ಸರಗೂರು ಮಠದ ಶ್ರೀ ಚಿನ್ನಸ್ವಾಮಿ ಸಮಾರಂಭ ಉದ್ಘಾಟಿಸಲಿದ್ದಾರೆ. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ನೂರೊಂದುಶೆಟ್ಟಿ ಭಗೀರಥ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯರಾದ ಜೆ.ಯೋಗೇಶ್, ಪೊಲೀಸ್ ಇನ್ಸ್‍ಪೆಕ್ಟರ್ ಮಹದೇವಸ್ವಾಮಿ, ಮಂಗಲ ಶಿವಕುಮಾರ್, ಪಿ.ಮಾದೇಶ್ ಉಪ್ಪಾರ್, ಗೋವಿಂದರಾಜು, ಗೌಡಳ್ಳಿ ಮಹೇಶ್, ಜಯಕುಮಾರ್, ನಿಟ್ರೆ ನಾಗರಾಜು, ರೂಪಸ್ವಾಮಿ, ತಾಯಮ್ಮ, ನಾಗಶೆಟ್ಟಿ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಉಪ್ಪಾರ ಜನಜಾಗೃತಿ ಯುವ ವೇದಿಕೆಯ ತಾಲ್ಲೂಕು ಅಧ್ಯಕ್ಷ ಮಹದೇವು, ಉಪಾಧ್ಯಕ್ಷ ಸೋಮಣ್ಣ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಕಾನೂನು ಸಲಹೆಗಾರ ರವಿ, ಯುವ ಮುಖಂಡರಾದ ಅರುಣ್, ಈಶ್ವರ್, ಕೃಷ್ಣಮೂರ್ತಿ, ನಾಗಣ್ಣ, ಮಹೇಶ್, ಸೋಮು, ಕೆ.ಸಿ. ಮಹೇಶ್ ಸೇರಿದಂತೆ ಇತರರು ಹಾಜರಿದ್ದರು.

 

ವರದಿ: ಬಸವರಾಜು ಎಸ್ ಹಂಗಳ

By admin