ಗುಂಡ್ಲುಪೇಟೆ: ಕೂತನೂರು ಸ.ನಂ.368ರ ಗೋಮಾಳದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ಗಣಿಗಾರಿಕೆ ನಿಲ್ಲಿಸಬೇಕು ಎಂದು ತಾಲೂಕಿನ ಕೂತನೂರು ಗ್ರಾಮಸ್ಥರು ತಹಸೀಲ್ದಾರ್‍ಗೆ ದೂರು ಸಲ್ಲಿಸಿದ್ದಾರೆ.

ಕೂತನೂರು ಗ್ರಾಮದ ಸ.ನಂ.368 ಜಾಗ ಸರ್ಕಾರಿ ಗೋಮಾಳವಾಗಿದು ಸದರಿ ಪ್ರದೇಶದಲ್ಲಿ ಕಟ್ಟೆಯಿದೆ ಇಲ್ಲಿ ಜನುವಾರುಗಳು ಮೇಯಲು ಹಾಗು ನೀರು ಕುಡಿಯಲು ಜಾನುವಾರು ಹೋಗಲು ಆಗುತ್ತಿಲ್ಲ ಎಂದು ಗ್ರಾಪಂ ಸದಸ್ಯ ಗೋಪಾಲ್, ಗ್ರಾಮಸ್ಥರಾದ ಸಿದ್ದಶೆಟ್ಟಿ, ಮಹದೇವಶೆಟ್ಟಿ, ಮಾದಶೆಟ್ಟಿ, ಸಿದ್ದಶೆಟ್ಟಿ, ಮಹದೇವಮ್ಮ, ಶಿವಮ್ಮ ದೂರು ಸಲ್ಲಿಸಿದ್ದಾರೆ.

ಗೋಮಾಳದಲ್ಲಿ ಜಾನುವಾರು ತೆರಳಲು ಆಗುತ್ತಿಲ್ಲ ಜೊತೆಗೆ ಸದರಿ ಜಾಗದಲ್ಲಿ ಪುರಾತನ ಕಾಲದ ದೇವರ ಕಲ್ಲಿದೆ ಆ ಕಲ್ಲು ಸೇರಿದಂತೆ ಸನಿಹದಲ್ಲಿ ಕಲ್ಲು ಗಣಿಗಾರಿಕೆ ನಡೆದಿದೆ.ಸದರಿ ಜಾಗದಲ್ಲಿ ಗಣಿಗಾರಿಕೆ ನಡೆಸದಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದಿದ್ದಾರೆ.

ಗೋಮಾಳದ ಸುತ್ತ ಕಾಡಿದ್ದು ಕಾಡಿನಿಂದ ಪ್ರಾಣಿಗಳು ಬರುತ್ತಿದೆ. ಈಗ ಸ್ಪೋಟಕದ ಕಾರಣ ಕಾಡು ಪ್ರಾಣಿಗಳು ಗ್ರಾಮಗಳತ್ತ ಬರುತ್ತಿವೆ ಈ ಸಂಬಂಧ ಗ್ರಾಮಸ್ಥರ ಹಾಗು ಕ್ವಾರಿ ಮಾಲೀಕರ ನಡುವೆ ಗಲಾಟೆ ಸಂಭವಕ್ಕೂ ಮುನ್ನ ಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂದು ದೂರಿನಲ್ಲಿ ತಹಸೀಲ್ದಾರ್‍ರನ್ನು ಆಗ್ರಹಿಸಿದ್ದಾರೆ.

ಕೂತನೂರು ಸ.ನಂ.368 ರ ಗೋಮಾಳದಲ್ಲಿ ಗಣಿಗಾರಿಕೆ ನಡೆಯದಂತೆ ಪುರಸಭೆ ಅಧ್ಯಕ್ಷ ಪಿ.ಗಿರೀಶ್ ಕಳೆದ ಮಾ.28 ರಂದು ಕೂತನೂರು ಗುಡ್ಡದಲ್ಲಿ ನಡೆವ ಗಣಿಗಾರಿಕೆ ಸ್ಥಳ ಗಣಿಗಾರಿಕೆ ನಿಷೇಧ ವಲಯ ಎಂದು ಘೋಷಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.


ಕೂತನೂರು ಗೋಮಾಳದಲ್ಲಿ ಗಣಿಗಾರಿಕೆ ಸಂಬಂಧ ಕೂತನೂರು ಗ್ರಾಮಸ್ಥರು ದೂರು ನೀಡಿದ್ದಾರೆ. ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ದೂರು ನೀಡುವಂತೆ ಹೇಳಿದ್ದೇನೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವರದಿ ಬಳಿಕ ಮುಂದಿನ ಕ್ರಮ ವಹಿಸಲಾಗುವುದು.

  • ಸಿ.ಜಿ.ರವಿಶಂಕರ್, ತಹಸೀಲ್ದಾರ್.

ವರದಿ: ಬಸವರಾಜು ಎಸ್.ಹಂಗಳ