ಮೈಸೂರು-12 ಈ ಬಾರಿ ಜೆಡಿಎಸ್ ಬಹುಮತ ನೀಡಿ. ಐದು ವರ್ಷದಲ್ಲಿ ರಾಜ್ಯದ ನೀರಾವರಿ ಯೋಜನೆ ಅನುಷ್ಠಾನ ಮಾಡುವೇ. ಸಾಧ್ಯವಾಗದಿದ್ದರೆ ಜೆಡಿಎಸ್ ವಿಸರ್ಜನೆ ಮಾಡುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪುನರುಚ್ಚರಿಸಿದರು. ಮೈಸೂರಿನ ತಾಯಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಈ ಬಾರಿ ಕನ್ನಡಿಗರ ಬಹುಮತದ ಸರ್ಕಾರ ಬೇಕು. ಯಾವ ಪಕ್ಷದ ಜೊತೆಯೂ ಹೊಂದಾಣಿಕೆ ಇಲ್ಲ. ೩೦ ಅಥವಾ ೪೦ ಸ್ಥಾನಕ್ಕಾಗಿ ಹೋರಾಟ ಅಲ್ಲ. ಪೂರ್ಣ ಪ್ರಮಾಣದ ಸರ್ಕಾರಕ್ಕೆ ನಮ್ಮ ಹೋರಾಟ. ನಮ್ಮದು ವಿಚಾರಾಧಾರಿತವಾದ ಹೋರಾಟ. ಧರ್ಮ ಧರ್ಮಗಳ ನಡುವೆ ಬೆಂಕಿ ಇಟ್ಟು ಮತ ಕೇಳುತ್ತಿಲ್ಲ. ರಾಜ್ಯದ ಅಭಿವೃದ್ದಿಗಾಗಿ ನಮ್ಮ ಹೋರಾಟ ಎಂದು ನುಡಿದರು.

ಯಾತ್ರೆ ಮೂಲಕ ಅಧಿಕೃತ ಚುನಾವಣಾ ಪ್ರಚಾರ ಆರಂಭ.ಜನತಾ ಜಲಧಾರೆ ಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಇದು ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಪರ್ಯಾಯವಲ್ಲ. ಅದು ಶೋಗಾಗಿ ನಡೆಸಿದ ಯಾತ್ರೆ. ಅವರು ನೇರವಾಗಿ ರಾಜಕೀಯ ಯಾತ್ರೆ ಅಂತಾ ಹೇಳಲಿಲ್ಲ. ನಮ್ಮದು ಜನರ ಮುಂದೆ ಸಮಸ್ಯೆ ಬಿಚ್ಚಿಡಲು ಯಾತ್ರೆ.

ಈ ಮೂಲಕ ಮುಂದಿನ ಚುನಾವಣೆಗಾಗಿ ಯಾತ್ರೆ ಆರಂಭಿಸಿದ್ದೇವೆ. ಯಾತ್ರೆ ಮೂಲಕ ಅಧಿಕೃತ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ. ಇದನ್ನು ನಾನು ನೇರವಾಗಿ ಹೇಳುತ್ತಿದ್ದೇನೆ ಎಂದರು.ಕಲ್ಲಂಗಡಿ ಒಡೆದಾಗ ತೋರಿದ ಅನುಕಂಪ, ತಲೆ ಒಡೆದಾಗಲೂ ತೋರಿ ಎಂಬ ಮಾಜಿ ಸಚಿವ ಸಿ.ಟಿ ರವಿ ಹೇಳಿಕೆಗೆ ಕಿಡಿಕಾರಿದ ಹೆಚ್.ಡಿಕೆ, ನಿಮ್ಮ ಮಾತಿನ ಅರ್ಥ ಏನು.? ರಾಜ್ಯದಲ್ಲಿ ತಲೆ ಒಡೆಯುತ್ತಾ ಇರುತ್ತೇವೆ ಅಂತಾನಾ ನೀವು ತಲೆ ಒಡೆಯುತ್ತಿರಿ ನಾವು ಸಾಂತ್ವನ ಹೇಳಬೇಕಾ ಅನ್ನೋದಾ..? ಎಂದು ವಾಗ್ದಾಳಿ ನಡೆಸಿದರು.

ಸಿಎಂ ಬಸವರಾಜ ಬೊಮ್ಮಾಯಿ ಮೌನ ವಿಚಾರ. ನನ್ನ ಮಾತಲ್ಲ ನನ್ನ ಕೆಲಸ ಮುಖ್ಯ ಎಂದಿದ್ದ ಸಿಎಂ ಬಸವರಾಜ ಬೊಮ್ಮಾಯಿಗೆ ತಿರುಗೇಟು ನೀಡಿದ ಹೆಚ್.ಡಿ ಕುಮಾರಸ್ವಾಮಿ, ನಿಮ್ಮ ಯಾವ ಕೆಲಸ ಮಾತನಾಡುತ್ತಿದೆ.? ರಾಯಚೂರಿನಲ್ಲಿ ತಲವಾರ್ ಹಂಚಿದ್ದಾರೆ.ಯಾವ ಕಾರಣಕ್ಕೆ ತಲವಾರ್ ಹಂಚಿದ್ದಾರೆ.ಅವರನ್ನು ನೀವು ಅರೆಸ್ಟ್ ಮಾಡಿದ್ದೀರಾ.? ಮೌನಿ ಬಸವರಾಜ ಬೊಮ್ಮಾಯಿ ಅವರೇ ಎಂದು ಲೇವಡಿ ಮಾಡಿದರು.ರಾಯಚೂರಿನಲ್ಲಿ ಲವ್ ಕೇಸರಿ ವಿಚಾರ ಸಂಬಂಧ ಯಾವುದೇ ಪ್ರೀತಿಯಲ್ಲಿ ಬಾಂಧವ್ಯ ಮುಖ್ಯ. ಪರಸ್ಪರ ಪ್ರೀತಿಸುವವರಿಗೆ ತೊಂದರೆ ಕೊಡಬಾರದು. ಅವರು ಯಾವ ಧರ್ಮದವರೇ ಆಗಿರಲಿ. ಅವರನ್ನು ನಿಯಂತ್ರಿಸುವ ಕೆಲಸ ಮಾಡಬಾರದು ಎಂದು ನುಡಿದರು.

ಹಾಸನ ಜಿಲ್ಲೆಯಲ್ಲಿ ಯಾವ ಜಾತ್ರೆಯಲ್ಲೂ ಮುಸ್ಲಿಂಮರು ನಿರ್ಬಂಧ ಹೇರುವುದಕ್ಕೆ ಅವಕಾಶ ಕೊಡುವುದಿಲ್ಲ.ನಮ್ಮ ಹಾಸನ ಜಿಲ್ಲೆಯಲ್ಲಿ ಯಾವ ಜಾತ್ರೆಯಲ್ಲೂ ಮುಸ್ಲಿಂಮರು ನಿರ್ಬಂಧ ಹೇರುವುದಕ್ಕೆ ಅವಕಾಶ ಕೊಡುವುದಿಲ್ಲ. ಚೆನ್ನಕೇಶವ ಜಾತ್ರೆಯಲ್ಲಿ ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿದೆ. ಖುದ್ದು ರೇವಣ್ಣ ಅವರಿಗೆ ಸಮಸ್ಯೆ ಬಗೆಹರಿಸುವಂತೆ ಹೇಳಿದ್ದೇನೆ. ನಿರ್ಬಂಧ ತೆರವು ಮಾಡಿಸಿ ಅವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಿಸುತ್ತೇನೆ. ಹಾಸನ ಜಿಲ್ಲೆ ಮಾತ್ರ ಅಲ್ಲ ಎಲ್ಲಾ ಜಿಲ್ಲೆಗಳಲ್ಲೂ ನಿರ್ಬಂಧ ತೆರವಿಗೆ ನನ್ನ ಹೋರಾಟ ಇರುತ್ತದೆ ಎಂದು ಹೆಚ್.ಡಿಕೆ ಹೇಳಿದರು.