ಮೈಸೂರು :8 ಸುಣ್ಣದಕೇರಿ ಬೆಸ್ಥರಕೇರಿ ಯಲ್ಲಿರುವ ಶ್ರೀ ಗಂಗಾದೇವಿ ದೇವಸ್ಥಾನದಲ್ಲಿ ಗಂಗಮ್ಮನ ಪೂಜೆಯನ್ನು ಆಚರಿಸಲಾಯಿತು. ಸುಮಾರು 50 ವರ್ಷಗಳಿಂದ ಪ್ರತಿವರ್ಷ ನಡೆಸಿಕೊಂಡು ಬಂದಿದ್ದು ಇಂದು ಗಂಗಾಮತಸ್ಥರ ಸಂಘದಿಂದ ಪೂಜೆ ಕಾರ್ಯಕ್ರಮ ಅದ್ದೂರಿಯಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಪ್ರಸಾದ ಹಾಗೂ ಸಿಹಿ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗಂಗಾ ಮತಸ್ಥರ ಸಂಘದ ಅಧ್ಯಕ್ಷರಾದ ಎನ್.ಸಿ. ಗೋಪಣ್ಣ,ಯಜಮಾನರಾದ ಜೋಗಪ್ಪ ಮುಖ್ಯಸ್ಥರಾದ ಅಶ್ವಥ್,ಗಂಗಾಧರ್,ಜಿ.ಪ್ರಸಾದ್, ಗಂಗು, ಸುವರ್ಣಬೆಳಕು ಫೌಂಡೇಷನ್ ಅಧ್ಯಕ್ಷರು ಮಹೇಶ್, ಅರುಣ್ ಗಣಪತಿ,ಬೆಸ್ತರ ಸಂಘದ ಮಾಜಿ ಅಧ್ಯಕ್ಷರು ದಾಸಪ್ಪನವರು ಚಿಕ್ಕಯಜಮಾನರು ಮತ್ತು ಮೊಹಲ್ಲಾ ನಿವಾಸಿಗಳು ಹಾಜರಿದ್ದರು.