ಮೈಸೂರು, ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷರಾದ ಪ್ರೊ|| ವಸಂತಮ್ಮ ಅವರಿಂದ ಸರ್ಕಾರಕ್ಕೆ ಆಗ್ರಹ. ಮೈಸೂರು ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷರಾದ ಪ್ರೋ ವಸಂತಮ್ಮರವರು ಪತ್ರಿಕಾ ಹೇಳಿಕೆ ನೀಡಿದ್ದು, ಶೀಘ್ರವಾಗಿ ಗಂಗಾಮತಸ್ಥ, ಮೊಗವೀರ, ಕಬ್ಬಲಿಗ ಹಾಗೂ 39 ಪರ್ಯಾಯ ಪದಗಳಿಂದ ಕೂಡಿರುವ ಗಂಗಾಮತಸ್ಥ ಸಮುದಾಯವನ್ನು ಎಸ್.ಟಿ.ಗೆ ಸೇರಿಸಲು 40 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಎಸ್.ಟಿ.ಗೆ ಸೇರಲು ಸಮುದಾಯಕ್ಕೆ ಎಲ್ಲಾ ಅರ್ಹತೆಗಳಿದ್ದರೂ ನಮ್ಮ ಬೇಡಿಕೆಯನ್ನು ರಾಜಕೀಯವಾಗಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದರಿಂದ ಸಮಾಜಕ್ಕೆ ಅನ್ಯವಾಯವಾಗುತ್ತಿದೆ. ಸಮುದಾಯವನ್ನು ರಾಜಕೀಯ ಪ್ರೇರಿತವಾಗಿ ಬಲಿಪಶು ಮಾಡಲಾಗುತ್ತಿದೆ. ಈಗ ಈ ಎಲ್ಲಾ ಅರ್ಹ ದಾಕಲಾತಿಗಳೊಂದಿಗೆ ಕಡತವು ಸದ್ಯ ರಿಜಿಸ್ಟರ್ ಜನರಲ್ ಇಂಡಿಯಾದಲ್ಲಿದ್ದು ಇದಕ್ಕೆ ಕೇಂದ್ರ ಸರ್ಕಾರ ಸಮ್ಮತಿಸಬೇಕು. ನಮ್ಮ ಸಮಾಜ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಅತಿ ಹಿಂದುಳಿದಿದ್ದು, ಕೇಂದ್ರದ ಬಿ.ಜೆ.ಪಿ. ನೇತೃತ್ವದ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಇನ್ನಿತರೇ ಸಚಿವರು ಕಳೆದ ಲೋಕಸಭಾ ಚುನಾವಣೆ ಸಮಯದಲ್ಲಿ ಗಂಗಾಮತ ಮತ್ತು 39 ಪರ್ಯಾಯ ಪದಗಳಿಂದ ಕರೆಯಲ್ಪಡುವ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುತ್ತೇವೆ ಎಂದು ಆಶ್ವಾನ ನೀಡಿದ್ದರು. ಈ ಕೂಡಲೇ ಸರ್ಕಾರವು ಎಸ್.ಟಿ. ಪಟ್ಟಿಯಲ್ಲಿ.