ಮೈಸೂರು-ಮಾ.13 ಹಿಂದುಳಿದ ವರ್ಗ ಎಂದು ಪರಿಗಣಿಸಲ್ಪಟ್ಟಿರುವ ಮೀನುಗಾರ ಸಮುದಾಯವು ಸುಮಾರು 60 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಮೀನುಗಾರರ ಸಮುದಾಯವು ಸಮಾಜದ ಅವಿಭಾಜ್ಯ ಅಂಗವಾಗಿದೆ. ಮೀನುಗಾರ ಸಮುದಾಯವು 39 ಪರ್ಯಾಯ ಜಾತಿಗಳನ್ನು ಹೊಂದಿದ್ದು ಕೇವಲ ನಮ್ಮ ಜಾತಿಯವರಲ್ಲದೆ ಮುಸ್ಲಿಂ ಹಾಗೂ ಇನ್ನಿತರ ಜಾತಿಗಳ ಜನರು ಮೀನುಗಾರ ವೃತ್ತಿಯಲ್ಲಿ ಕೆಲಸ ಮಾಡುತ್ತ ಅವರ ಅಪಾರ ಕೊಡುಗೆಗಳೊಂದಿಗೆ, ಅವರು ನಮ್ಮ ರಾಷ್ಟ್ರದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ. ಎಂದು ಮೈಸೂರು ಜಿಲ್ಲಾ ಗಂಗಾಮತಸ್ಥರ ಸಂಘದ ಮುಖಂಡರು ಇಂದು ಪತ್ರಿಕಾ ಘೋಷ್ಟಿಯಲ್ಲಿ ಹೇಳಿದರು.
ಇದೇ ಸಂದರ್ಭದಲ್ಲಿ ಪತ್ರಿಕಾಘೋಷ್ಟಿಯಲ್ಲಿ ಮಾತಾನಾಡಿದ ಕರ್ನಾಟಕ ರಾಜ್ಯ ಗಂಗಾಮತಸ್ಥರ ನಿರ್ದೇಶಕರು ನಾಗೇಂದ್ರ, ರವರು ಬಿಜೆಪಿ ಪಕ್ಷವು ತನ್ನ ಸಾಮಾಜಿಕ ಉನ್ನತಿ ಮತ್ತು ಮನ್ನಣೆಯ ಧ್ಯೇಯವನ್ನು ಹೊಂದಿದ್ದು, ಶ್ರೀ.ಪ್ರಮೋದ್ ಮಧ್ವರಾಜ್ ಅವರಿಗೆ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಎಂಪಿ ಟಿಕೆಟ್ ನೀಡುವಂತೆ ಮೈಸೂರು ಸುಣ್ಣದಕೇರಿ ಗಂಗಾಮತಸ್ಥರ (ಬೆಸ್ತ)ರ ಕರ್ನಾಟಕ ರಾಜ್ಯ ಗಂಗಾಮತಸ್ಥ ಜನಾಂಗದವರು ಒತ್ತಾಯ ಮಾಡಿದರು. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ನಿರಂತರ ಬೆಂಬಲ ನೀಡಿದರೂ, ನಮ್ಮ ಸಮುದಾಯಗಳಿಗೆ ಟಿಕೆಟ್ ನೀಡಬೇಕು ಗೆಲ್ಲುವ ಆಕಾಂಕ್ಷಿಯಾಗಿರುವ ಪ್ರಮೋದ್ ಮಧ್ವರಾಜ್ ಈ ಭಾರಿ ಬಿಜೆಪಿ ಲೋಕಸಭಾ ಟಿಕೆಟ್ ನೀಡಬೇಕು ಎಂದು ಹೇಳಿದರು.