ಕಳೆದ 2 ತಿಂಗಳಿನಿಂದ ಸಂಬಳ ನೀಡದ ಗಣೇಶ್ ಸ್ಪಿನ್ನರ್ ಕಾರ್ಖಾನೆ ಮಾಲೀಕರು:
ಸಂಬಳ ನೀಡದ ಕಾರ್ಖಾನೆಯ ವಿರುದ್ಧ ಕಾರ್ಮಿಕ ದಿನಾಚರಣೆಯಂದೇ ಬೇಸರ ವ್ಯಕ್ತಪಡಿಸಿದ ಸಂಘದ ಅಧ್ಯಕ್ಷ ನಂದಿಪುರ ರವಿಕುಮಾರ್ ನಮ್ಮ ಹಿತ ಕಾಪಾಡಲು ಸರ್ಕಾರ ಮುಂದಾಗಬೇಕು ಎಂದರು.

ಬೆಟ್ಟದಪುರ: ಪಿರಿಯಾಪಟ್ಟಣ ತಾಲ್ಲೂಕಿನ ಸಿಗೂರು ಗ್ರಾಮದ ಗಣೇಶ್ ಸ್ಪಿನ್ನರ್ ಕಾರ್ಮಿಕರ ಸಂಘದ ವತಿಯಿಂದ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.


ಗಣೇಶ್ ಸ್ಪಿನ್ನರ್ ಕಾರ್ಮಿಕ ಸಂಘದ ಅಧ್ಯಕ್ಷ ರವಿಕುಮಾರ್ , ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕಳೆದ 2ವರ್ಷಗಳ ಹಿಂದೆ ಕೊರೋನಾ ಮಹಾಮಾರಿ ಇದ್ದುದ್ದರಿಂದ ಲಾಕ್ ಡೌನ್ ಆಗಿತ್ತು ಆ ಸಂದರ್ಭದಲ್ಲಿ ಕಾರ್ಖಾನೆ ಮಾಲೀಕರು ನಮಗೆ ಸಂಬಳ ನೀಡಲು ಸತಾಯಿಸುತ್ತಿದ್ದರು . ಆ ಸಮಯದಲ್ಲಿ ಶಾಸಕ ಕೆ. ಮಹದೇವ್ ಮುಂದಾಳತ್ವ ವಹಿಸಿ ಸಂಬಳ ಕೊಡಿಸಿದರು. ಇದಕ್ಕೆ ಪಿರಿಯಾಪಟ್ಟಣ ಹಾಗೂ ಬೆಟ್ಟದಪುರ ಪೊಲೀಸ್ ಇಲಾಖೆಯು ಸಹಕಾರ ನೀಡಿತು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.


ಕಾರ್ಮಿಕರ ಹಕ್ಕುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ನಮ್ಮ ಸಾಧನೆಗಳನ್ನು ಗುರುತಿಸಲು ಮೇ ಒಂದರಂದು ಕಾರ್ಮಿಕ ದಿನಾಚರಣೆ ಆಚರಿಸುತ್ತಿದ್ದೇವೆ. ಈ ಹಿಂದೆ ಕಾರ್ಖಾನೆಗಳಲ್ಲಿ 10 ರಿಂದ 15 ಗಂಟೆ ದುಡಿಸಿಕೊಳ್ಳುತ್ತಿದ್ದರು. ಡಾಕ್ಟರ್ ಬಾಬಾಸೇಬ್ ಅಂಬೇಡ್ಕರ್ ಅವರು ಹೋರಾಟ ಮಾಡಿದ ಫಲವಾಗಿ ಕಾರ್ಮಿಕರಿಗೆ 8ಗಂಟೆ ಅವಧಿಗೆ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಟ್ಟರು. ಇಂದಿಗೂ ಕೆಲವು ಕಾರ್ಖಾನೆಗಳಲ್ಲಿ ಈ ನಿಯಮ ಸರಿಯಾಗಿ ಜಾರಿಗೆ ಬಂದಿಲ್ಲ. ಈ ಕಾರ್ಖಾನೆಯಲ್ಲಿ ಕಳೆದ ಮೂವತ್ತು ವರ್ಷಗಳಿಂದಲೂ 120 ಕಾರ್ಮಿಕರು ದುಡಿಯುತ್ತಾ ಬಂದಿದ್ದೇವೆ. ಆದರೆ ವಿದ್ಯುತ್ ಕೊರತೆಯಿಂದ ಕಾರ್ಖಾನೆ 2 ತಿಂಗಳಿಂದ ಮುಚ್ಚಿದ್ದು, ಸಂಬಳವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಶಾಸಕ ಕೆ. ಮಹದೇವ್, ಕಾರ್ಮಿಕ ಇಲಾಖೆ, ಕಾರ್ಮಿಕ ಮಂತ್ರಿಗಳು ಪೊಲೀಸ್ ಇಲಾಖೆ ಹಾಗೂ ಸರ್ಕಾರ ನಮ್ಮ ನಮ್ಮ ರಕ್ಷಣೆಗೆ ಮುಂದಾಗಬೇಕು ಎಂದರು.


ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರಘುರಾಜ್ ಅರಸ್ ,ಕಾರ್ಯದರ್ಶಿ ಕುಬೇರಪ್ಪ , ಗೌರವಾಧ್ಯಕ್ಷ ಕೆ ಮಹೇಂದ್ರ ಕಾರ್ಮಿಕ ಮುಖಂಡರಾದ ಪಿ. ರಾಮ್ ಕುಮಾರ್ , ನಾಗಾಚಾರಿ ,ವಿ. ಕೆ. ಶಂಕರ್ , ಡಿ. ಕೆ. ರಾಮೇಗೌಡ , ವಿ. ಕೆ. ಶಂಕರಾಚಾರಿ ,ರಂಗಸ್ವಾಮಿ, ಶಿವಾನಂದ್ , ಕೆ. ಆರ್. ಲೋಕೇಶ್, ಬಿ. ಸಿ. ಕುಮಾರ್ ,ಎಂ. ಮಲ್ಲೇಶ್ ,ಬಿ. ವಿ. ಸುಂದರ್ ,ಎಸ್. ಎಸ್. ಬಸವರಾಜ್ ಹಾಗೂ ಹಲವು ಕಾರ್ಮಿಕರು ಹಾಜರಿದ್ದರು.