ಗುಂಡ್ಲುಪೇಟೆ: ಸಮೀಪದ ನಿಟ್ರೆ ಗ್ರಾಮದಲ್ಲಿ ನೂತನ ವಾಗಿ ಶ್ರೀ ಮಲೈ ಮಹದೇಶ್ವರ ಪ್ರೇರಣಾ ಪೌಂಡೇಶನ್ ಟ್ರಸ್ಟ್(ರಿ) ವತಿಯಿಂದ ನಿರ್ಮಾಣವಾಗುತ್ತಿರುವ ಶಬರಿ ಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಯುವ ಕಾಂಗ್ರೆಸ್ ನಾಯಕ ಹೆಚ್.ಎಮ್. ಗಣೇಶ್‍ಪ್ರಸಾದ್ ಭೇಟಿ ನೀಡಿದ ಸಂದರ್ಭದಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಹಾಗೂ ಧರ್ಮದರ್ಶಿ ಎನ್.ಎಸ್.ಮಂಜುನಾಥ ಪ್ರಸಾದ್ ಅವರು ಗಣೇಶ್‍ಪ್ರಸಾದ್ ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಗಣೇಶ್ ಪ್ರಸಾದ್, ದೇವಾಲಯ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ. ದೇವಾಲಯಗಳು ಮನುಷ್ಯನಿಗೆ ನೆಮ್ಮದಿ ನೀಡುವ ಸ್ಥಳವಾಗಿದೆ. ನಿಟ್ರೆ ಗ್ರಾಮದ ಹೊರವಲಯದಲ್ಲಿ ಅಯ್ಯಪಸ್ವಾಮಿ ದೇವಾಲಯ ನಿರ್ಮಾಣವಾಗುತ್ತಿದ್ದು, ನಿರ್ಮಾಣಕ್ಕೆ ಬೇಕಾದ ಸವಲತ್ತುಗಳನ್ನು ಹಾಗೂ ಧನ ಸಹಾಯ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಚಾಮುಲ್ ಅಧ್ಯಕ್ಷ ಹೆಚ್,.ಎಸ್. ನಂಜುಂಡ ಪ್ರಸಾದ್, ಮಾಜಿ ತಾಲ್ಲೂಕು ಅಧ್ಯಕ್ಷ ಹೆಚ್.ಎನ್. ಬಸವರಾಜು, ಟ್ರಸ್ಟ್ ನ ನಿರ್ದೇಶಕರಾದ ಮಹದೇವಪ್ಪ, ವಸಂತಕುಮಾರ್, ಜಿ. ಬಸವರಾಜು, ಸಿ.ನಾಗರಾಜು, ಶಶಿ, ಎನ್.ಎಸ್. ಬಸವರಾಜು ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.
ವರದಿ: ಬಸವರಾಜು ಎಸ್ ಹಂಗಳ