ಮೈಸೂರು ಸೆ. 2 ಸುವರ್ಣ ಬೆಳಕು ಫೌಂಡೇಷನ್ ಹಾಗೂ ವಿನಾಯಕರ ಸ್ನೇಹ ಬಳಗ ವತಿಯಿಂದ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು ಪಾಲ್ಗೊಂಡರು. ಮಹಿಳೆಯರು ಮತ್ತು ವಿದ್ಯಾರ್ಥಿಗಳು ಚಿತ್ತಾಕರ್ಷಕ ರಂಗೋಲಿ ಬಿಡಿಸಿದರು. ಬಣ್ಣ ಬಣ್ಣದ ರಂಗೋಲಿಗಳು ನೋಡುಗರ ಗಮನ ಸೆಳೆದವು.ಗಣಪತಿ ಉತ್ಸವದ ಅಂಗವಾಗಿ ಶ್ರೀ. ವಿನಾಯಕರ ಸ್ನೇಹ ಬಳಗವು ಸುಣ್ಣದಕೇರಿ ೮ ನೇ ಕ್ರಾಸ್ ಬೀದಿಯಲ್ಲಿನ ಆವರಣದಲ್ಲಿ ಗುರುವಾರ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಉದ್ಘಾಟನೆ ಮಾಡಿ ಮಾತನಾಡಿದ ಎಂ. ಎನ್ ನವೀನ್ ಕುಮಾರ್ ಕಾಂಗ್ರೆಸ್ ಮುಖಂಡರು ಹೊಸದಾಗಿ ಬೆಳೆಯುತ್ತಿರುವ ಸಾಮಾಜಿಕ ಪ್ರತಿಭೆ ಅಪೂರ್ವ ಶಿವಣ್ಣ ಅವರಿಗೆ ಅಭಿನಂದನೆಯನ್ನು ತಿಳಿಸಿವುದರ ಮೂಲಕ ನಿವಾಸಿಗಳಿಗೆ ಗೌರಿ ಗಣೇಶ ಹಬ್ಬದ ಶುಭಕೋರಿದರು ಜೊತೆಗೆ ಸಾಂಪ್ರದಾಯಿಕ, ಸಾಂಸ್ಕೃತಿಕ ಆಚರಣೆಗಳನ್ನು ಸಂತೋಷದಿಂದ ಆಚರಿಸುತ್ತಿರುವುದನ್ನು ಕಂಡು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ, ಭರತನಾಟ್ಯ ಪ್ರದರ್ಶನ, ರಂಗೋಲಿ ಸ್ಪರ್ಧೆ, ಯೋಗ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಯಿತು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು. ನಂತರ ಮಾತನಾಡಿದ ಅಪೂರ್ವ ಶಿವಣ್ಣ ರವರು ಗಣೇಶ ಹಬ್ಬದ ಮಹತ್ವವನ್ನು ಸಾರಿದರು ಮತ್ತು ಆಚರಣೆಗಳು ಸೌಹರ್ದಯುತವಾಗಿ ನೆಡಿಸಿಕೂಡುವುದು ಸಮಾಜದ ಒಳಿತು ಈ ನಿಟ್ಟಿನಲ್ಲಿ ಇಲ್ಲಿನ ನಿವಾಸಿಗಳು ಕಾರ್ಯಕ್ರಮವನ್ನು ಶಾಂತಿಯುತವಾಗಿ ನೆಡಿಸುತ್ತಿರುವುದು ಸಂತೋಷ, ಎಲ್ಲರಿಗೂ ಶುಭವಾಗಲೀ ಎಂದರು.ಕಾರ್ಯಕ್ರಮದಲ್ಲಿ ಸುವರ್ಣ ಬೆಳಕು ಫೌಂಡೇಶನ್ ಅಧ್ಯಕ್ಷರು ಮಹೇಶ್ ನಾಯಕ್, ಕಾರ್ಯದರ್ಶಿ ಮಂಜುನಾಥ ಬಿ. ಆರ್. ಶಿವುಕುಮಾರ್, ಯುವ ಮುಖಂಡರು ರಹೀಂ ರೆಸ್ಟೋರೆಂಟ್ ಆಕಾಶ್, ಹುಫೇಜ್,ರವಿ, ರಾಜು, ವಿಜಯ ಭರತ ನಾಟ್ಯ ಶಿಕ್ಷಕರು ಹಾಗೂ ಅವರ ತಂಡ,ರಮೇಶ್ ಯೋಗ ತಂಡ ವಿನಾಯಕ ಬಳಗ ಸದಸ್ಯರು, ಹಾಜರಿದ್ದರು.