ಚಾಮರಾಜನಗರ: ನಗರದ ಉಪ್ಪಾರ ಬಡಾವಣೆಯಲ್ಲಿರುವ ಗರಡಿ ಮನೆ ಯುವಕರಿಂದ ಗಣಪತಿ ಉತ್ಸವ ಮೂರ್ತಿ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ಚಾಮರಾಜನಗರದ ಭಗೀರಥ ಯುವ ಸೇನಾ ಸಂಘದ ಯುವಕರಿಂದ ಗಣಪತಿಯನ್ನು ಪ್ರತಿ?ಪಿಸಲಾಗಿತ್ತು.
ಚಾಮರಾಜನಗರದ ಉಪ್ಪಾರ ಬಡಾವಣೆಯಲ್ಲಿ ಗಣಪತಿ ದೇವರನ್ನು ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು ಈ ವೇಳೆ ನಗರಿ ಹಾಗೂ ಡೋಲು ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಈ ವೇಳೆ ನೂರಾರು ಯುವಕರು ಕುಣಿದು ಕುಪ್ಪಳಿಸಿದರು.
ಈ ಸಂದರ್ಭದಲ್ಲಿ ಭಗೀರಥ ಯುವ ಸೇನೆಯ ಮನು, ಆನಂದ್ ಸಲಗ, ರಾಜೇಂದ್ರ ಅಧ್ಯಕ್ಷ, ಕಾರ್ತಿಕ್, ಪವನ್, ಮಹದೇವ, ಅಭಿ, ಮಹೇಶ್ ಡಾಲಿಂಗ್, ಸೂರಿ, ಜವರಶೆಟ್ಟಿ, ಅಜಯ್, ಮಹೇಶ್, ನಟ, ಮಂಜುಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.