ಮೈಸೂರು – ೮ ಅಖಿಲ ಭಾರತ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರಿಗಾಗಿ ಎಡ್ಯುಟೆಕ್ ಸ್ಟಾರ್ಟ್‌ಅಪ್ ವಂಡರ್ಸ್ಲೇಟ್ `ಲರ್ನಿಂಗ್ ಫ್ರಂ ಗೇಮಿಂಗ್’ ಆಪ್ ಪ್ರೆಪ್‌ಜಾಯ್ ಅನ್ನು ಪರಿಚಯಿಸಿದೆ.

೮ನೇ ಫೆಬ್ರುವರಿ, ೨೦೨೨: ಅಖಿಲ ಭಾರತ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರಿಗಾಗಿ ಮುಂಚೂಣಿ ಎಡ್ಯುಟೆಕ್ ಕಂಪನಿ ವಂಡರ್ಸ್ಲೇಟ್ ಮೊದಲ ಬಾರಿಗೆ ವಿನೋದದ ಕಲಿಕೆಯಿಂದ ಕೂಡಿದ ಆಪ್ ಪ್ರೆಪ್‌ಜಾಯ್ ಅನ್ನು ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಆರಂಭಿಸಿದೆ. ಶ್ರೇಷ್ಠ ಕಲಿಕಾ ಅನುಭವದೊಂದಿಗೆ ಅತಿದೊಡ್ಡ ಶೈಕ್ಷಣಿಕ ಸ್ಟೋರ್ ಅನ್ನು ನಿರ್ಮಿಸುವ ದೃಷ್ಟಿಕೋನ ಹೊಂದಿರುವ ಕಂಪನಿಯು ಕಲಿಕೆಯು ವಿನೋದ ಮತ್ತು ಉತ್ಸಾಹದಿಂದ ಕೂಡಿರಬೇಕು ಎನ್ನುವುದರಲ್ಲಿ ನಂಬಿಕೆ ಇರಿಸಿದೆ. ಅದಕ್ಕಾಗಿ ವೀಕ್ಷಿಸಿ, ಓದಿ ಮತ್ತು ಆಟವಾಡಿ ಎನ್ನುವ ಮೂರು ಸೂತ್ರಗಳೊಂದಿಗೆ ಆ?ಯಪ್ ರೂಪಿಸಿದೆ. ಪ್ರಚಲಿತ ವ್ಯವಹಾರ, ಸಾಮನ್ಯ ತಿಳಿವಳಿಕೆ, ಸಾಮಾನ್ಯ ಜ್ಞಾನ, ಸಾಮಾನ್ಯ ಅಧ್ಯಯನ, ಭಾರತ ಮತ್ತು ಜಾಗತಿಕ ಪರಿಸರ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಹಿತಿಗಳ ಅಪ್‌ಡೇಟ್ ಮತ್ತಿತರ ವಿಷಯಗಳಲ್ಲಿ ಆಪ್ ಬಹಳ ಉಪಯುಕ್ತವಾಗಿದೆ.

`ಅತ್ಯಂತ ವಿಶಿಷ್ಟವಾದ ಲರ್ನಿಂಗ್ ಫ್ರಂ ಗೇಮಿಂಗ್ ಅನುಭವದೊಂದಿಗೆ ಪ್ರೆಪ್‌ಜಾಯ್ ಕಲಿಕಾರ್ಥಿಗಳಿಗೆ ವಿನೋದದಿಂದ ಕೂಡಿದ ಸೀಮಾತೀತವಾದ ಕಲಿಕಾ ಅನುಭವದ ಜತೆಗೆ ವೃತ್ತಿ ಬದುಕಿನ ಗುರಿ ತಲುಪಲು ಹಾಗೂ ಜ್ಞಾನವನ್ನು ಹೆಚ್ಚಿಸಿಕೊಳ್ಳಲೂ ನೆರವಾಗಲಿದೆ. ಬಳಕೆದಾರರಿಗೆ ಪರೀಕ್ಷೆಗಳಲ್ಲಿ ಸ್ಪರ್ಧಾತ್ಮಕ ಅನುಭವ ನೀಡಲು ತಜ್ಞರ ತಂಡವು ಅತ್ಯಂತ ವಿವೇಚನೆಯಿಂದ ಮತ್ತು ಕಾಳಜಿಯಿಂದ ಆಪ್ ಅನ್ನು ವಿನ್ಯಾಸಗೊಳಿಸಿದೆ. ಇದು ಆಕಾಂಕ್ಷಿಗಳು ನಿತ್ಯವೂ ತಮ್ಮ ಪ್ರಗತಿಯನ್ನು ಪರಿಶೀಲಿಸಿಕೊಳ್ಳಲು ಮತ್ತು ಸುಧಾರಣೆ ಮಾಡಿಕೊಳ್ಳಲು ಅವರಿಗೆ ಅವಕಾಶ ಕಲ್ಪಿಸಿಕೊಡುತ್ತದೆ. ಇದೇ ಮೊದಲ ಬಾರಿ ಇಂತಹ ಅನುಭವ ಲಭ್ಯವಾಗಲಿದೆ ಮತ್ತು ವಿನೋದ ಹಾಗೂ ಉತ್ಸಾಹದಿಂದ ಕೂಡಿದ ವಿಧಾನವು ಖಂಡಿತವಾಗಿಯೂ ಆಕಾಂಕ್ಷಿಗಳಿಗೆ ತಮ್ಮ ಬೆಳವಣಿಗೆ ಕುರಿತು ಗಮನ ಕೇಂದ್ರೀಕರಿಸಲು ಮತ್ತು ತಾವು ಬಯಸಿದ ಫಲಿತಾಂಶದ ಗುರಿ ತಲುಪಲು ಖಂಡಿತವಾಗಿಯೂ ನೆರವಾಗುತ್ತದೆ’ ಎಂದು ಶ್ರೀ ಆನಂದ್ ಅಚ್ಯುತ್, ಸಿಇಒ, ವಂಡರ್ಸ್ಲೇಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್  ಅವರು ಹೇಳಿದರು.