ಗುಂಡ್ಲುಪೇಟೆ: ತಾಲ್ಲೂಕಿನ ವಿವಿಧೆಡೆ ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿ 13 ಮಂದಿ ಜೂಜುಕೋರರನ್ನು ಬಂಧಿಸಿದ್ದಾರೆ.
ಪಟ್ಟಣದ ಠಾಣೆ ಸಬ್ ಇನ್ಸ್‍ಪೆಕ್ಟರ್ ಜೆ. ರಾಜೇಂದ್ರ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿರುವ ಪೊಲೀಸರು, ತಾಲ್ಲೂಕಿನ ಹಂಗಳ ಗ್ರಾಮದ ಹಂಗಳ-ಪುತ್ತನಪುರ ರಸ್ತೆಯ ಹಳ್ಳದಲ್ಲಿ ಜೂಜಾಡುತ್ತಿದ್ದ ಇಬ್ಬರನ್ನು ಬಂಧಿಸಿ 700 ರೂ. ವಶಕ್ಕೆ ಪಡೆದಿದ್ದಾರೆ. ಚಿಕ್ಕತುಪ್ಪೂರು ಮಠದ ಹತ್ತಿರ ಅಕ್ರಮ ಜೂಜಾಡುತ್ತಿದ್ದ 8 ಮಂದಿ ಬಂಧಿಸಿ 2800 ರೂ. ವಶಕ್ಕೆ ಪಡೆಯಲಾಗಿದ್ದು, ಮಳ್ಳವಳ್ಳಿ ಗ್ರಾಮದ ಮಹದೇಶ್ವರ ದೇವಸ್ಥಾನದ ಬಳಿ ಜೂಜಾಡುತ್ತಿದ್ದ 3 ಮಂದಿ ಸೆರೆ ಹಿಡಿದು 1250 ರೂ. ವಶಪಡಿಸಿಕೊಂಡಿದ್ದಾರೆ.
ದಾಳಿಯಲ್ಲಿ ಎಎಸ್‍ಐ ಶಿವಶಂಕರಪ್ಪ, ನಟರಾಜು, ಮುಖ್ಯ ಪೇದೆ ಶಿವನಂಜಪ್ಪ, ಮಹೇಶ, ರವಿ, ಯೋಗೀಶ, ಮಹದೇವಪ್ರಸಾದ್, ವಾಹನ ಚಾಲಕ ಶ್ರೀನಿವಾಸ್ ಸೇರಿದಂತೆ ಇತರರು ಭಾಗವಹಿಸಿದ್ದರು.
ವರದಿ: ಬಸವರಾಜು ಎಸ್ ಹಂಗಳ