ಚಾಮರಾಜನಗರ:ಉತ್ತಮ ಜೀವನ ನಿರ್ವಹಣೆಗಾಗಿ ಸರ್ಕಾರದಿಂದ ಉಚಿತವಾಗಿ ನೀಡಲಾಗುವ ಸುಧಾರಿತ ಉಪಕರಣಗಳನ್ನು ಅಂಗವಿಕಲರು ಮತ್ತು ಫಲಾನುಭವಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಕೆ.ಎಂ. ಗಾಯತ್ರಿ ಅವರು ಇಂದು ವಿತರಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾ ಪಂಚಾಯಾತ್ ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಗ್ರಾಮೀಣ ಕೈಗಾರಿಕೆ ವಿಭಾಗದ ಸಹಯೋಗದಲ್ಲಿಂದು ನಡೆದ ಸರಳ ಕಾರ್ಯಕ್ರಮದಲ್ಲಿ ಈಗಾಗಲೇ ಹೂಲಿಗೆ ತರಬೇತಿ ಪಡೆದ ಅಂಗವಿಕಲರು, ಗ್ರಾಮ ಪಂಚಾಯಿತಿಗಳಿಂದ ಆಯ್ಕೆಗೊಂಡ ಫಲಾನುಭವಿಗಳಿಗೆ ವಿದ್ಯುತ್ ಚಾಲಿತ ಹೂಲಿಗೆಯಂತ್ರ ಮರಗೆಲಸದ ಪವರ್ ಕಟಿಂಗ್ ಮಿಷನ್ ಮತ್ತು ಡ್ರಿಲಿಂಗ್ ಮಿಷಿನ್ ಕಿಟ್ ಸುಧಾರಿತ ಉಪಕರಣಗಳ ವಿತರಣೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಸುಧಾರಿತ ಉಪಕರಣಗಳನ್ನು ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ೨೦೨೧-೨೨ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣಗಳ ಸರಬರಾಜು ಕಾರ್ಯಕ್ರಮದಡಿ ಸುಧಾರಿತ ಉಪಕರಣಗಳನ್ನು ನೀಡಲಾಗುತ್ತಿದೆ. ಉಪಕರಣಗಳನ್ನು ಕೇವಲ ಹಳೆಯ ಬಟ್ಟೆಗಳ ಹೊಲಿಗೆಗೆ ಸೀಮಿತಗೊಳಿಸದೇ ವಿವಿಧ ಬಗೆಯ ಹೂಲಿಗೆಗಳನ್ನು ಕಲಿತು ನೂತನ ಬಗೆಯ ಉಡುಪುಗಳನ್ನು ತಯಾರಿಸಿ ಮಾರಾಟ ಮಾಡುವುದರೊಂದಿಗೆ ಉತ್ತಮ ಜೀವನ ನಿರ್ವಹಣೆಯನ್ನು ಹೊಂದಬೇಕು ಎಂದರು.
ಅಂಗವಿಕಲರಿಗೂ ಸ್ವಯಂ ಉದ್ಯೋಗದ ಬಗ್ಗೆ ಮಾಹಿತಿ ನೀಡಿ ಸೂಕ್ತ ಸಲಹೆ, ಮಾರ್ಗದರ್ಶನ ಮಾಡುವುದರ ಮೂಲಕ ಸರ್ಕಾರದಿಂದ ದೊರೆಯುವ ಸೌಲಭ್ಯ, ಸವಲತ್ತುಗಳನ್ನು ಸದಭಳಕೆ ಮಾಡಿಕೊಳ್ಳಬೇಕು. ಸುಧಾರಿತ ಜೀವನ ನಿರ್ವಹಣೆಯಿಂದ ಅರ್ಥಿಕ ಸದೃಢತೆ ಹೊಂದುವುದು ಕಾರ್ಯಕ್ರಮದ ಆಶಯವಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಕೆ.ಎಂ. ಗಾಯತ್ರಿ ಅವರು ತಿಳಿಸಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖಾ ಉಪನಿರ್ದೇಶಕರಾದ ಕೆ.ಎ. ರಾಜೇಂದ್ರಪ್ರಸಾದ್ ಅವರು ಫಲಾನುಭವಿಗಳಿಗೆ ವಿವಿಧ ಬಗೆಯ ಹೂಲಿಗೆಯ ಬಗ್ಗೆ ಮಾಹಿತಿ ನೀಡಿ ಲೆಗ್ ಆಪರೇಟಿಂಗ್ ಮಿಷಿನ್‌ಗಿಂತ ವಿದ್ಯುತ್ ಚಾಲಿತ ಹೂಲಿಗೆಯಂತ್ರದ ವಿಶೇಷತೆಯನ್ನು ವಿವರಿಸಿ ಅದನ್ನು ಸುಲಭವಾಗಿ ಉಪಯೋಗಿಸುವುದರ ಬಗ್ಗೆ ಮಾಹಿತಿ ನೀಡಿದರು.
ಕೈಗಾರಿಕಾ ವಿಸ್ತಾರಣಾಧಿಕಾರಿಗಳಾದ ಬಿ.ಸಿ. ಪುಷ್ಷಲತಾ. ಇತರರು ಕಾರ್ಯಕ್ರಮದಲ್ಲಿ ಇದ್ದರು.
![](https://i0.wp.com/mysurumirror.com/wp-content/uploads/2021/12/Rep-01-1.jpg?resize=251%2C87)