ಪ್ರತಿಯೊಬ್ಬರಿಗೂ ಆರೋಗ್ಯ ನೀಡುವಂತೆ ಸೂರ್ಯದೇವನನ್ನು ಪ್ರಾರ್ಥಿಸಿ ರಥಸಪ್ತಮಿ ದಿನವಾದ ಮಂಗಳವಾರ ೧೦೮ ಸೂರ್ಯ ನಮಸ್ಕಾರ

ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಮಂದಿರದಲ್ಲಿ ಸೂರ್ಯೋದಯ ದಿಂದ ಸೂರ್ಯಾಸ್ತದ ವರೆಗೆ ಅಖಂಡ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  ಅಂದು ೧೫೦ ಯೋಗ ಬಂಧುಗಳು ಒಟ್ಟು ೯೫೬೬ ಸೂರ್ಯ ನಮಸ್ಕಾರವನ್ನು  ಮಾಡಿದರು…

. ಬೆಳಿಗ್ಗೆ ೫.೩೦ ರಿಂದ ೭.೩೦ ರಿ ವರೆಗೆ ನಿವೇದಿತಾ ನಗರದ ಸುಬ್ಬರಾವ್ ಪಾರ್ಕ್ ಮುಂಭಾಗದಲ್ಲಿ ಅಜಾದಿಕಾ ಅಮೃತ್ ಮಹೋತ್ಸವದ ಅಂಗವಾಗಿ ೧೫೦ ಯೋಗ ಬಂಧುಗಳು ೭೫ ಸೂರ್ಯ ನಮಸ್ಕಾರವನ್ನು ಮಾಡಿದರು

. DAR ಪೋಲೀಸ್ ಭವನದಲ್ಲಿ ೭೫ ಯೋಗ ಬಂಧುಗಳು ೭೫ ಸೂರ್ಯ ನಮಸ್ಕಾರವನ್ನು ಮಾಡಿದರು

.ರಥಸಪ್ತಮಿಯ ಪ್ರಯುಕ್ತ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದ ಆವರಣದಲ್ಲಿ ೧೦೮ ಯೋಗ ಬಂಧುಗಳು  ೧೦೮ ಸಾಮೂಹಿಕ ಸೂರ್ಯ ನಮಸ್ಕಾರವನ್ನು ಮಾಡಿದರು

. ಬೆಳಗ್ಗೆ ಜೆ ಪಿ ನಗರದ JSS ಪಬ್ಲಿಕ್ ಸ್ಕೂಲ್ ನಲ್ಲಿ ೫೦ ಯೋಗ ಬಂಧುಗಳು ೧೦೮ ಸಾಮೂಹಿಕ ಸೂರ್ಯ ನಮಸ್ಕಾರವನ್ನು ಮಾಡಿದರು

. ಬೆಳಗ್ಗೆ ಆಲನಹಳ್ಳಿ ಬಡಾವಣೆಯಲ್ಲಿ ಇರುವ ಗಣಪತಿ ದೇವಸ್ಥಾನದಲ್ಲಿ ೧೩೨ ಯೋಗ ಬಂಧುಗಳು ೧೦೮ ಸಾಮೂಹಿಕ ಸೂರ್ಯ ನಮಸ್ಕಾರ ಮಾಡುವ ಮೂಲಕ ರಥಸಪ್ತಮಿ ಕಾರ್ಯಕ್ರಮವನ್ನು ಆಚರಿಸಿದರು