ಮೈಸೂರು, ಡಿ.29- ಸೈನಿಕ ರಾಜ್ಯ ಅಕಾಡೆಮಿ, ಹೊಯ್ಸಳ ಕರ್ನಾಟಕ ಸಂಘದ ಸಹಯೋಗದಲ್ಲಿ 30 ದಿನಗಳ ಉಚಿತ ಸೈನಿಕ ತರಬೇತಿ ಪಡೆದ ಯುವ ಶಿಬಿರಾರ್ಥಿಗಳಿಗೆ ಉಚಿತ ಸಮವಸ್ತ್ರ(ಟ್ರ್ಯಾಕ್ಸೂಟ್), ಅಭಿನಂದನಾ ಪದಕ ನೀಡಿ ಗೌರವಿಸಲಾಯಿತು.
ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿ ಹೊಯ್ಸಳ ಕರ್ನಾಟಕ ಸಂಘದ ಸಭಾಂಗಣದಲ್ಲಿ ನಡೆದ ಶಿಬಿರಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಸತ್ಯನಾರಾಯಣ, ಶಿಬಿರಾರ್ಥಿಗಳಿಗೆ ಉಚಿತ ಟ್ರ್ಯಾಕ್ಸೂಟ್.ವಾಯುಸೇನೆಯ ನಿವೃತ್ತ ಯೋಧ ಶಂಕರನಾರಾಯಣ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಸತ್ಯನಾರಾಯಣ, ರಂಗನಾಥ್ ನೀಡಿದರು.
ಈ ವೇಳೆ ಸೈನಿಕ ರಾಜ್ಯ ಅಕಾಡೆಮಿಯ ಯೋಧ ಆರ್.ರವಿ
ಅವರ ಸ್ವಂತ ಹಣ ದಿಂದ ಯುವಕರಿಗೆ ಉಚಿತ ಫಿಸಿಕಲ್ ಟ್ರೈನಿಂಗ್ ನೀಡಿರುವ ಬಳಿಕ ಮಾತನಾಡಿ, ಕೆಲಸದಿಂದ ರಜೆ ಮೇಲೆ ಬಂದಾಗ ಯುವಕರಿಗೆ ಸೈನಿಕರಿಗೆ ನೀಡುವಂತಹ ತರಬೇತಿ ನೀಡಿ, ಮುಂದಿನ ಸೈನಿಕರಾಗುವಂತೆ ಪ್ರೋತ್ಸಾಹ ನೀಡಲಾಗುತ್ತಿದೆ. ಇಂದು 2ನೇ ಬ್ಯಾಚ್ನಲ್ಲಿ ತರಬೇತಿ ಪಡೆದ 30 ಯುವಕರಿಗೆ ಉಚಿತ ಟ್ರ್ಯಾಕ್ ಸೂಟ್ ನೀಡಿ, ಅವರ ಮುಂದಿನ ಭವಿಷ್ಯಕ್ಕೆ ಸಹಕರಿಸಲಾಗುತ್ತಿದೆ. ಮುಖ್ಯವಾಗಿ ಯುವಕರು ತಂದೆ-ತಾಯಿ, ಗುರು ಮತ್ತು ದೇಶಕ್ಕೆ ಸದಾ ಗೌರವ ನೀಡಬೇಕು. ಶಿಸ್ತು, ಸಂಯಮದಿಂದ ವರ್ತಿಸಬೇಕು. ಅಲ್ಲದೆ ಇತರರಿಗೆ ಮಾದರಿಯಾಗುವಂತೆ ಬದುಕಬೇಕು. ಸೇನೆಗೆ ಸೇರಿ ದೇಶಸೇವೆಯನ್ನು ಮಾಡಬೇಕು ಎಂದು ಹುರಿದುಂಬಿಸಿದರು. ನಂತರ ಮಾತನಾಡಿದ. ಕರ್ನಾಟಕ , ಹೊಯ್ಸಳ ಸಂಘದ ಅಧ್ಯಕ್ಷ ಸತ್ಯನಾರಾಯಣ.ಮುಂದಿನ ದಿನಗಳಲ್ಲಿ.ರವಿ ಅವರು ಸ್ವಂತ ಹಣ ದಿಂದ ಯುವಕರಿಗೆ ಉಚಿತ ಟ್ರಾಕ್ ಸೂಟ್ ಕೊಟ್ಟಿ ರುವ ಅವರು ಮುಂದಿನ ದಿನಗಳಲ್ಲಿ.ಅದನ್ನು ನಾನು ನನ್ನ ಸ್ವಂತ ಹಣದಿಂದ.ಉತ್ಸಾಹಿ ಯುವಕರಿಗೆ . ಮಾಡಿಸಿ ಕೊಡುತ್ತೇನೆ.ಎಂದು ಹೇಳಿದರು.
ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಸತ್ಯನಾರಾಯಣ, ಶಂಕರನಾರಾಯಣ,ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು