ಗುಂಡ್ಲುಪೇಟೆ: ಪ್ರತಿಯೊಬ್ಬರು ಆರ್ಯುವೇದ ಔಷಧಿಗಳನ್ನು ಬಳಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ವಿ.ಸುಜಾತ ತಿಳಿಸಿದರು.
ತಾಲ್ಲೂಕಿನ ಕಿಲಗೆರೆ ಗ್ರಾಮದಲ್ಲಿ ಎಸ್‍ಸಿಪಿ ಕಾರ್ಯಕ್ರಮದಡಿ ಆಯುಷ್ ಇಲಾಖೆ ಚಾಮರಾಜನಗರದ ವತಿಯಿಂದ ಆಯುಷ್ ಸೇವಾ ಗ್ರಾಮದಡಿ ಆಯ್ಕೆಯಾದ ಕಿಲಗೆರೆಯಲ್ಲಿ ಪರಿಶಿಷ್ಟ ಜನಾಂಗದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಔಷಧಿ ವಿತರಿಸಿ ಮಾತನಾಡಿದರು.
ಇಂಗ್ಲೀಷ್ ಔಷಧಿಗಳ ಬಳಕೆ ಕಡಿಮೆ ಮಾಡಿ ಆರ್ಯವೇದ ಔಷಧಿ ಬಳಸಿದರೆÉ ಹೆಚ್ಚು ಕಾಲ ಆರೋಗ್ಯವಂತರಾಗಿಬಹುದು. ಮನೆ ಮುಂದೆ ಕೊಳಚೆ ನೀರು ನಿಲ್ಲದಂತೆ ಕ್ರಮವಹಿಸಿದರೆ ಸೊಳ್ಳೆಗಳು ಉತ್ಪತ್ತಿಯಾಗುವುದು ಕಡಿಮೆಯಾಗುತ್ತದೆ. ಇದರೊಂದಿಗೆ ಗ್ರಾಮದ ಪ್ರತಿಯೊಬ್ಬರು ಶುದ್ಧ ಕುಡಿಯುವ ನೀರು ಸೇವಿಸಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಗ್ರಾಮದ 70ಕ್ಕು ಹೆಚ್ಚು ಮನೆಗಳಿಗೆ ವೈದ್ಯಾಧಿಕಾರಿಗಳ ತಂಡ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಿ ಔಷಧಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಡಾ.ಕೆ.ಜೆ. ಗುರುಪ್ರಸಾದ್, ಡಾ.ನಿಶ್ಚಲ, ಆಸ್ಪತ್ರೆ ಸಿಬ್ಬಂದಿ ವರ್ಗದವರಾದ ಜಿ.ಆರ್.ರವಿ, ಎಂ.ವನಜ, ಚಂದ್ರಪ್ಪ, ಭರತ್, ದಯಾನಂದ್, ಗ್ರಾಪಂ ಸದಸ್ಯರಾದ ಮಂಗಳಮ್ಮ, ಲಕ್ಷ್ಮಿ, ಆಶಾ ಕಾರ್ಯಕರ್ತೆ ಮಂಗಳಮ್ಮ, ಮುಖಂಡರಾದ ಬಸವಣ್ಣ ಸೇರಿದಂತೆ ಇತರರು ಹಾಜರಿದ್ದರು.
ವರದಿ: ಬಸವರಾಜು ಎಸ್ ಹಂಗಳ