ಚಾಮರಾಜನಗರ: ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ಚಾಮರಾಜನಗರ ಜಿಲ್ಲೆಗೆ ರೋಗಿಗಳನ್ನು ಕರೆದೊಯ್ಯಲು ಅನುಕೂಲವಾಗುವಂತೆ ಉಚಿತ ಆಂಬ್ಯುಲೆನ್ಸ್ ನೀಡಲಾಗಿದೆ.
ಈ ಆಂಬ್ಯುಲೆನ್ಸ್ ನ ಸೇವೆಗೆ ಮಾಜಿ ಸಂಸಂದ ಆರ್.ಧ್ರುವನಾರಾಯಣ್ ಅವರು ಕಾಂಗ್ರೆಸ್ ಬಾವುಟ ಬೀಸುವುದರ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿ ಚಾಮರಾಜನಗರ ಜಿಲ್ಲೆಗೆ ಯುವ ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ನಲ್ಪಾಡ್ ಅವರು ನೀಡಿರುವ ಆಂಬ್ಯುಲೆನ್ಸ್ ಇದಾಗಿದೆ. ಇದರಲ್ಲ್ಲಿ ಆಕ್ಷಿಜನ್ ಸೌಲಭ್ಯವಿದ್ದು, ಜಿಲ್ಲೆಯ ಯಾವುದೇ ಮೂಲೆಯಿಂದ ನಮ್ಮ ಸಹಾಯ ವಾಣಿಗೆ ಕರೆ ಮಾಡಿದರೆ ಉಚಿತವಾಗಿ ರೋಗಿಗಳನ್ನು ಆಸ್ಪತ್ರೆಯ ವರೆಗೆ ಕರೆತರುತ್ತದೆ. ಜೊತೆಗೆ ಮಾತ್ರೆಯ ಕಿಟ್‌ನ್ನು ಸಹ ನೀಡಲಾಗುವುದು. ಈ ಕಾರ್ಯಕ್ಕೆ ಯಾವುದೇ ಹಣ ನೀಡಬೇಕಿಲ್ಲ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ೨೮ ಜನರು ಮೃತಪಟ್ಟ ಘಟನೆಯ ತನಿಖೆ ಪ್ರಾರಾಂಭವಾಗಿದೆ. ನಮ್ಮ ಪಕ್ಷದ ವತಿಯಿಂದ ಸರ್ಕಾರಕ್ಕೆ ಒತ್ತಾಯ ಮಾಡುವುದೇನೆಂದರೆ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ವೇಣುಗೋಪಾಲ್ ಮತ್ತು ಕೇಶವನಾರಾಯಣ್ ಅವರು ನ್ಯಾಯಾಲಯಕ್ಕೆ ವರದಿಯನ್ನು ನೀಡಲಿದ್ದಾರೆ. ಆದ್ದರಿಂದ ಸರ್ಕಾರ ನೇಮಿಸಿರುವ ಐ.ಎ.ಎಸ್ ಅಧಿಕಾರಿ ಮತ್ತು ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಕ ಮಾಡಿರುವುದನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.

By admin