
ಮಾಜಿ ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ಹತ್ತು ಗಂಟೆಗೆ ನಗರದ ಮೌಂಟ್ ಕಾರ್ಮೆಲ್ ಬಳಿ ಇರುವ ಪ್ಲಾಟ್ ನಲ್ಲಿ ಈ ಘಟನೆ ನಡೆದಿದೆ.
ಯಡಿಯೂರಪ್ಪ ಅವರ ಮಗಳು ಆದ ಪದ್ಮಾ ರವರ ಮಗಳು ೩೦ ವರ್ಷದ ಸೌಂದರ್ಯ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2018 ರಲ್ಲಿ ಡಾ.ನೀರಜ್ ಎಂಬಾವವರ ಜೊತೆ ಸೌಂದರ್ಯಗೆ ಮದುವೆ ಅಗಿದ್ದು, ಒಂದು ವರ್ಷದ ಹಿಂದೆ ಮಗು ಅಗಿದೆ.

ಇಂದು ಬೆಳಗ್ಗೆ ಮನೆ ಕೆಲಸದವರು ಬಾಗಿಲು ತೆಗೆಯುತ್ತಿಲ್ಲಾ ಎಂದು ಫೋನ್ ಮಾಡಿದ್ದಾರೆ. ಈ ವೇಳೆ ಮಗು ಮತ್ತೊಂದು ರೂಮ್ ನಲ್ಲಿ ಇತ್ತು. ಮನೆಯ ಬೆಡ್ ರೂಮ್ ಬಾಗಿಲು ತೆಗೆದಿಲ್ಲಾ ಎಂದು ಪತಿ ನೀರಜ್ ಬೆಳಗ್ಗೆ ಎಂಟು ಗಂಟೆಗೆ ಎಂಎಸ್ ರಾಮ್ಯಗೆ ಕೆಲಸಕ್ಕೆ ಹೋಗಿದ್ದರು.
ಆ ವೇಳೆ ಮನೆಯಲ್ಲಿ ಸೌಂದರ್ಯ ಹಾಗೂ ೯ ತಿಂಗಳ ಮಗುವಿನೊಂದಿಗೆ ಇದ್ದರು. ಮನೆ ಕೆಲಸದವರು ಸಹ ಮನೆಯಲ್ಲೆ ಇದ್ರು ಆ ವೇಳೆ ರೂಂ ಗೆ ತೆರಳಿದ ಸೌಂದರ್ಯ ನೇಣು ಹಾಕಿಕೊಂಡಿದ್ದಾರೆ. ತಿಂಡಿಕೊಡಲೆಂದು ಕೆಲಸದಾಕೆ ರೂಂಗೆ ಹೋದಾಗ ಮನೆಯ ರೂಮ್ ನಲ್ಲಿ ಇದ್ದ ಫ್ಯಾನ್ ಗೆ ನೇಣುಹಾಕಿ ಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಮೌಂಟ್ ಕಾರ್ಮೆಲ್ ಬಳಿ ಇರುವ ಈ ಅಪಾರ್ಟ್ಮೆಂಟ್ ಗೆ ಬಂದು ಎರಡು ವರ್ಷಗಳಾಗಿತ್ತು.