ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ಒತ್ತಾಯಿಸಿದರು ಕೂರೂನಾ ಸಂಕಷ್ಟದಿಂದ ಜನಸಾಮಾನ್ಯರು ಕಂಗೆಟ್ಟಿದ್ದಾರೆ ಇಂತಹ ಸಂದರ್ಭದಲ್ಲಿ ವಿದ್ಯುತ್ ದರ ಏರಿಕೆ ಮಾಡಿರುವುದು ಸರಿಯಲ್ಲ ಗಾಯದ ಮೇಲೆ ಬರೆ ಎಳೆದಂತಾಗಿದೆ .ಆಡಳಿತದ ವೈಫಲ್ಯವನ್ನು ಇದು ಎತ್ತಿ ತೋರುತ್ತದೆ ಲಾಕ್ ಡೌನ್ ಅವಧಿ ಮುಗಿದು ಅನ್ ಲಾಕ್ ಜಾರಿಯಲ್ಲಿದೆ ಎಲ್ಲಾ ರೀತಿಯ ಚಟುವಟಿಕೆಗಳು ಆರಂಭವಾಗಿವೆ. ತೆರಿಗೆ ಕೂಡ ಸರ್ಕಾರಕ್ಕೆ ಬರುತ್ತಿದೆ .ಇಂತಹ ಸಂದರ್ಭದಲ್ಲಿ ವಿದ್ಯುತ್ ದರ ಹೆಚ್ಚಿಸುವುದು ಇದು ಸರಕಾರದ ಮೂರ್ಖತನ .ಮಹಾಮಾರಿ ಕೂರೂನಾ ಹಿನ್ನೆಲೆಯಲ್ಲಿ ಕೈಗಾರಿಕೆಗಳು ನಿಂತಿವೆ .ವಿದ್ಯುತ್ ಬಳಕೆಯೇ ಮಾಮೂಲಿನಂತೆ ಆಗುತ್ತಿಲ್ಲ ಈಗಿರುವ ವಿದ್ಯುತ್ ದರ ಏರಿಕೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ .ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ವಿತರಣಾ ಕಂಪೆನಿಗಳ ದರವನ್ನು ಪರಿಷ್ಕರಣೆ ಮಾಡಿದೆ .ಆಯೋಗವು ಕೂಡ ರಾಜ್ಯ ಸರ್ಕಾರದ ಅಧೀನದಲ್ಲಿ ಬರುವುದರಿಂದ ಸರ್ಕಾರ ಹೆಚ್ಚಳ ಮಾಡಿರುವ ವಿದ್ಯುತ್ ದರವನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸುತ್ತೇನೆ

By admin