22 ನೇ ವಿಶ್ವಕಪ್ ಪಂದ್ಯದ ೨೯/೩೦ ದಿನದ ಪಯಣ :-
2022 ರ ವಿಶ್ವಕಪ್ ಪಂದ್ಯಾವಳಿ ೨೦.೧೧.೨೦೨೨ರಿಂದ ೧೯.೧೨.೨೦೨೨ವರೆಗೆ ಜರುಗಲಿದೆ. ಇದರ ಅಂಗವಾಗಿ ಇದೇ ನವೆಂಬರ್ ೨೦ ಭಾನುವಾರದಂದು ಉದ್ಘಾಟನಾ ಪಂದ್ಯವು ಖತಾರ್ ಮತ್ತು ಇಕುವೇಡರ್ ತಂಡಗಳ ನಡುವೆ ನಡೆಯಲಿದೆ. ನಂತರ ಪ್ರತಿದಿನವೂ ಎರಡು ಘಟಾನುಘಟಿ ತಂಡಗಳ ನಡುವೆ ಜಿದ್ದಾಜಿದ್ದಿ ಸ್ಫರ್ಧಾತ್ಮಕ ಪಂದ್ಯಗಳು ನಡೆಯಲಿವೆ. ಒಟ್ಟಾರೆ ೨೯ ದಿನಗಳ ಪರ್ಯಂತ ೩೨ ತಂಡಗಳು ತಂತಮ್ಮ ಎದುರಾಳಿ ವಿರುದ್ಧ ರೋಷಾವೇಷದಿಂದ ಆಡುವ ಕಾಲ್ಚೆಂಡಾಟದ ಪ್ರತಿಯೊಂದು ಪಂದ್ಯವೂ ಅತ್ಯಂತ ಅಮೋಘ ಕುತೂಹಲಭರಿತ ಆಗಿರುತ್ತದೆ. ಅನೇಕ ರೋಚಕ ಕ್ಷಣಗಳು ನೂತನ ದಾಖಲೆಗಳು ಹುಚ್ಚೆದ್ದು ಕುಣಿದು ಕುಪ್ಪಳಿಸೊ ಅಭಿಮಾನಿಗಳು. ಸೆಕ್ಸೀಮಾಡೆಲ್ಸ್, ಸಿನಿಮ-ಕ್ರೀಡಾ ಸೆಲಿಬ್ರಿಟೀಸ್, ರಾಜಮನೆತನದವರು, ರಾಜಕಾರಣಿ ದಿಗ್ಗಜರು, ಗಣ್ಯಾತಿಗಣ್ಯರು, ಚೀರ್‌ಲೀಡರ್ಸ್, ಬಣ್ಣಬಣ್ಣದಬಾವುಟ, ಬಾಣಬಿರುಸುಪಟಾಕಿ, ಗುದ್ದಾಟ-ಮುದ್ದಾಟ, ಇತ್ಯಾದಿ ಆಕರ್ಷಕ ದೃಶ್ಯಗಳು ಎದುರಾಗಲಿದೆ. ಸೋಲು-ಗೆಲುವಿನ ಗೋಲುಗಳು, ಅದನ್ನು ಹೊಡೆ [ಸಿಕೊಂಡ]ವರ ತುಂಟಾಟ, ಪೀಕಲಾಟ, ವ್ಯಂಗ್ಯ, ಸದ್ದುಗದ್ದಲ, ತಂಡದ ನಾಯಕನ ಅಭಿಪ್ರಾಯ ಕೋಚ್‌ನ ಮಾರ್ಗದರ್ಶನ ಲೈವ್‌ಟಿ.ವಿ.ನೇರ ಪ್ರಸಾರ ಮುಂತಾದವು ಫುಟ್ಬಾಲ್ ಗೊತ್ತಿಲ್ಲದವರನ್ನೂ ಶ್ರೀಸಾಮಾನ್ಯನನ್ನೂ ತನ್ನತ್ತ ಸೆಳೆದು ಇವರೆಲ್ಲರ ಕಣ್ಮನ ತಣಿಸುತ್ತದೆ. ಮತ್ತೊಂದು ಚಿರಸ್ಮರಣೀಯ, ಮತ್ತೊಮ್ಮೆ ಅಜರಾಮರ, ಹೊಸ ಇತಿಹಾಸ ಸೃಷ್ಟಿಸುವುದರಲ್ಲಿ ಸಂಶಯವಿಲ್ಲ. ಕಳೆದ ಒಂದು ವರ್ಷದಿಂದ ನಡೆದ ಅರ್ಹತಾ ಪಂದ್ಯ ಸ್ಫರ್ಧೆಗಳಲ್ಲಿ ಭಾಗವಹಿಸಿದ್ದ ೧೨೫ ರಾಷ್ಟ್ರಗಳ ಪೈಕಿ ಕೇವಲ ೩೨ ದೇಶ-ತಂಡಗಳು ಮಾತ್ರ ಅರ್ಹತೆ ಪಡೆದಿದ್ದವು.
ಇದುವರೆಗೆ ನಡೆದಿರುವ ಒಟ್ಟು ೨೧ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ವಿಶ್ವಕಪ್ ವಿಜೇತ ದೇಶಗಳು:-
ಅರ್ಜೆಂಟೀನ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇಯಿನ್. ಈ ಪೈಕಿ ಒಟ್ಟು ೫ ಬಾರಿ ವಿಶ್ವಕಪ್ ಚಾಂಪಿಯನ್‌ಶಿಪ್ ಗೆದ್ದು ನೇರವಾಗಿ ಅರ್ಹತಾ ಗುಂಪು ಪ್ರವೇಶಿಸಿದ ಕೀರ್ತಿ ಹೊಂದಿರುವ ಏಕೈಕ ರಾಷ್ಟ್ರ ಬ್ರೆಝಿಲ್?! ಅರ್ಹತಾ ಗುಂಪಿಗೆ ಸೇರುವ ಮುನ್ನ ಜರುಗುವ ಅರ್ಹತಾ ಪಂದ್ಯಗಳಲ್ಲಿ ವಿಶಿಷ್ಟ ಮತ್ತು ವಿಶೇಷವಾದ ಮಾನದಂಡ ರೂಪುರೇಶೆ ಇರುತ್ತವೆ. ಇದರಲ್ಲಿ ಅತಿ ಹೆಚ್ಚು ಗೋಲು ಹೊಡೆದ, ಗೋಲುಗಳ ಸಂಖ್ಯಾ ಅಂತರ ಕೂಡ ಹೆಚ್ಚಿನದ್ದು ಆಗಿರಬೇಕು. ಅತಿ ಹೆಚ್ಚು ಅಂಕ ಗಳಿಸಿದ ಆಧಾರದ ಮೇಲೆ ಒಟ್ಟು ೩೨ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ. ತಲಾ ೪(ದೇಶದ)ತಂಡ ಗಳನ್ನು ಒಂದೊಂದು ಗುಂಪಿಗೆ ಸೇರಿಸಲ್ಪಟ್ಟು ಎ.ಬಿ.ಸಿ.ಡಿ. ಈ.ಎಫ್,ಜಿ.ಹೆಚ್. ಎಂಬ ೮ ಗುಂಪುಗಳಲ್ಲಿ [೮ ಬೈ ೪=] ೩೨ ತಂಡಗಳು ಅರ್ಹ ಗುಂಪಿಗೆ ಸೇರುತ್ತವೆ. ನಂತರ ಆಯಾ ದೇಶ-ತಂಡ ಗಳಿಸುವ ಗೆಲುವು-ಅಂಕ ಆಧಾರದ ಮೇಲೆ ನಾಕ್‌ಔಟ್‌ಹಂತ ಕ್ವಾರ್ಟರ್‌ಫೈನಲ್ ಸೆಮಿಫೈನಲ್ ಫೈನಲ್ ಪಂದ್ಯಗಳು ನಡೆಯುತ್ತವೆ. ಅಂತಿಮವಾಗಿ ಗೆಲುವು ಸಾಧಿಸುವ ವಿನ್ನರ್-ರನ್ನರ್‌ಅಪ್ ತಂಡಗಳಿಗೆ ನಿಗಧಿಪಡಿಸಿದ ಕಪ್-ಟ್ರೋಪಿ-ನಗದು ಬಹುಮಾನ ವಿತರಿಸಲಾಗುವುದು.
ಬಹುಮಾನದ ಮೊತ್ತ:-
೩೨-೧೭ನೆ ಸ್ಥಾನದ ತಂಡಗಳಿಗೆ ತಲಾ ೯ ದಶಲಕ್ಷ ಡಾಲರ್ ನಗದು; ೧೬ರಿಂದ ೯ನೇ ಸ್ಥಾನದ ತಂಡಗಳಿಗೆ ತಲಾ ೧೩ ದಶಲಕ್ಷ ಡಾಲರ್ ನಗದು; ೮ರಿಂದ ೫ನೇ ಸ್ಥಾನದ ತಂಡಗಳಿಗೆ ತಲಾ ೧೭ ದಶಲಕ್ಷ ಡಾಲರ್ ನಗದು; ೪ನೇ ಸ್ಥಾನದ ತಂಡಕ್ಕೆ ೨೫ ದಶಲಕ್ಷ ಡಾಲರ್ ನಗದು; ೩ನೇ ಸ್ಥಾನದ ತಂಡಕ್ಕೆ ೨೭ ದಶಲಕ್ಷ ಡಾಲರ್ ನಗದು; ರನ್ನರ್ ಅಪ್ ೨ನೇ ಸ್ಥಾನದ ತಂಡಕ್ಕೆ ೩೦ ದಶಲಕ್ಷ ಡಾಲರ್ ಹಾಗೂ ವಿಜೇತ ಚಾಂಪಿಯನ್ಸ್ ತಂಡಕ್ಕೆ ೪೨ ದಶಲಕ್ಷ ಡಾಲರ್ ನಗದು ಬಹುಮಾನ ನೀಡಲಾಗುತ್ತದೆ. ಒಟ್ಟಾರೆ ೪೪೦ ದಶಲಕ್ಷ ಡಾಲರ್ ನಗದು ಬಹುಮಾನದ ಮೊತ್ತ ಖರ್ಚುವೆಚ್ಚ ಮಾಡಲಾಗುತ್ತದೆ.
ಬಜೆಟ್,ಸಿಬ್ಬಂದಿ,ಅಲಂಕಾರ,ತಂಗುದಾಣ,ಕ್ರೀಡಾಂಗಣ, ಇತ್ಯಾದಿ ಬಗ್ಗೆ ಪಕ್ಷಿನೋಟ:-
೨೦೨೨ರ ವಿಶ್ವಕಪ್ ಪಂದ್ಯಾವಳಿಯ ಆತಿಥೇಯ ತಂಡದ ಖತಾರ್ ದೇಶಕ್ಕೆ ಟೂರ್ನಿ ಪ್ರಾಯೋಜಕತ್ವದ ನಿಮಿತ್ತ ತಗಲುವ ಒಟ್ಟು ಖರ್ಚುವೆಚ್ಚದ ಅಂದಾಜು ೧೮೦೦ ಮಿಲಿಯನ್ ಯು.ಎಸ್.ಡಾಲರ್. ಹಾಗೂ ಪ್ರತಿಯೊಂದು ಪಂದ್ಯಕ್ಕೆ:-ಅಂದಾಜು ೬೫ಸಾವಿರ ಪ್ರೇಕ್ಷಕರು, ೪೨ ಆಟಗಾರರುಸೇರಿದಂತೆ ೬೨ ಮಂದಿ ಪ್ರತಿ ತಂಡದಿಂದ, ೧೫೦೦ ಸಿಬ್ಬಂದಿವರ್ಗ, ೨೫೦೦ತಿಂಡಿ-ತಂಪುಪಾನೀಯ, ೩೦ ದಿನದಮಟ್ಟಿಗೆ ೧೮ಹೊಟೇಲುಗಳಲ್ಲಿ ೧೮೦೦ ಕೊಠಡಿಗಳು ವಸತಿ ಊಟ ವಸತಿಗಾಗಿ. ೪೨ ಬಸ್, ೮೪ ಕಾರ್ ಹಾಗೂ ೧೨೫ ದ್ವಿಚಕ್ರವಾಹನ ವ್ಯವಸ್ಥೆ,ಇತ್ಯಾದಿ.
ಸ್ವರ್ಣಕಪ್ ತಯಾರಿಕೆ, ಶಿಲ್ಪಿ, ಕಳ್ಳತನ, ಇತ್ಯಾದಿ ಚರಿತ್ರೆ:-
೧೯೩೦ರಿಂದ ೧೯೭೦ವರೆಗೆ ವಿಶ್ವ ಫುಟ್ಬಾಲ್ ಚಾಂಪಿಯನ್‌ಶಿಪ್ ವಿಜೇತ ತಂಡಕ್ಕೆ ’ಜೂಲ್ಸ್ ರಿಮೇಟ್ ರೋಲಿಂಗ್ ಶೀಲ್ಡ್’ ಟ್ರೋಫಿ ನೀಡಲಾಗುತ್ತಿತ್ತು. ೧೯೭೦ರಿಂದ ಸುವರ್ಣ ವಿಶ್ವಕಪ್ ನೀಡಲು ತೀರ್ಮಾನಿಸಿದ ಫಿಫ ಸಂಸ್ಥೆ ಆಡಳಿತ ಮಂಡಳಿಯು ೧೯೭೦ರಲ್ಲಿ ಸದರಿ ಫುಟ್ಬಾಲ್ ಚಾಂಪಿಯನ್‌ಶಿಪ್ ಗೆದ್ದ ಬ್ರೆಜಿಲ್ ದೇಶಕ್ಕೆ ಹೊಸದಾಗಿ ಪ್ರಾರಂಭಿಸಿದ ಸುವರ್ಣ ವಿಶ್ವಕಪ್‌ಅನ್ನು ಮೊಟ್ಟ ಮೊದಲ ಬಾರಿಗೆ ಪ್ರದಾನ ಮಾಡಿತು! ಅಲ್ಲದೇ ೧೯೭೦ರಿಂದ ವಿಶ್ವಕಪ್ ವಿಜೇತ ತಂಡ-ದೇಶ ಸದರಿ ಸುವರ್ಣ ಕಪ್ಪನ್ನು ಶಾಶ್ವತವಾಗಿ ತಮ್ಮಲ್ಲೇ ಇಟ್ಟುಕೊಳ್ಳಲು ಅನುಮತಿ ನೀಡಲಾಯಿತು. ಹೊಸ ನಿಯಮಾವಳಿ ಪ್ರಕಾರ ೬.೨೨೫ ಕಿಲೊಗ್ರಾಂ ತೂಕವಿರುವ ೧೮ ಕ್ಯಾರೆಟ್‌ಬಂಗಾರದ ಸುವರ್ಣ ವಿಶ್ವಕಪ್ ರೂಪುರೇಷೆಯನ್ನು ೧೯೭೦ರಲ್ಲಿ ವಿನ್ಯಾಸಗೊಳಿಸಿದ ಇಟಾಲಿಯನ್ ಆರ್ಕಿಟೆಕ್ಟ್[ಸ್ಕಲ್‌ಪ್ಟರ್] ಹೆಸರು ಸಿಲ್ವಿಯೊ ಘಝನಿಗ! ಇದರ ಬಗ್ಗೆ ಈರ್ಷ್ಯಾಸೂಯೆ ಅಥವ ಮೋಹಕ್ಕೊಳಪಟ್ಟ ಲೋಭಿಗಳು ಅಥವ ಹಿಂಸಾನಂದ ಕಳ್ಳರು [ಸ್ಯಾಡಿಸ್ಟ್ ಸ್ಟೀಲರ್ಸ್] ಸದರಿ ಸುವರ್ಣ ಕಪ್ಪನ್ನು ೧೯೮೩ರಲ್ಲಿ ಅದುಹೇಗೋ ಮೂಲ ಕಪ್ ಸ್ಥಳದಲ್ಲಿ ನಕಲು ಇರಿಸಿ ಒರಿಜಿನಲ್ ಕಪ್ಪನ್ನು ಕದ್ದೊಯ್ದ ಕಳ್ಳರು ಅದನ್ನು ಕರಗಿಸಿಬಿಟ್ಟಿದ್ದರು. ವಿಧಿಇಲ್ಲದೆ ಫಿಫ ಸಂಸ್ಥೆಯು ಕೂಡಲೇ ಮತ್ತೊಮ್ಮೆ ಅದೇ ಶಿಲ್ಪವಿನ್ಯಾಸಕನ ಸಲಹೆ ಸೂಚನೆ ಪಡೆದು ಮೂಲದಂತೆ ಮತ್ತೊಂದು ಸ್ವರ್ಣಕಪ್ ತಯಾರಿಸಿ ವಿಜೇತ ತಂಡ(ದೇಶ)ಕ್ಕೆ ತಲುಪಿಸಿದರು.
ಕಾಲ್ಚೆಂಡಿಗೂ ಕ್ಯಾಮರಾಕಣ್ಣುಳ್ಳ ಆಧುನಿಕ ತಂತ್ರಜ್ಞಾನ :-
ಫುಟ್ಬಾಲ್ ತವರು ಎಂದೇ ಕರೆಯಲಾಗುವ ಬ್ರೆಜಿಲ್ ದೇಶದಲ್ಲಿ ತಂತ್ರಜ್ಞಾನವು ಪ್ರತಿಯೊಂದು ಕ್ಷೇತ್ರದಲ್ಲಿ ಆವರಿಸಿ ಈಗ ಕ್ರೀಡಾ ಕ್ಷೇತ್ರಕ್ಕು ಅಂಟಿದೆ. ಮುಖ್ಯವಾಗಿ ಫುಟ್ಬಾಲ್ ಪಂದ್ಯಕ್ಕೆ ಬೇಕಾದ ಚೆಂಡಿಗೂ ಆಧುನಿಕ ತಂತ್ರಜ್ಞಾನದ ಆವಿಷ್ಕಾರ ಲಗ್ಗೆ ಹಾಕಿದೆ. ಬ್ರಾಜುಕಾಂ (ಬ್ರೆಜಿಲ್‌ಭಾಷೆಯಲ್ಲಿ: ಬ್ರೆಜಿಲಿಯನ್ನರ ಜೀವನಶೈಲಿ) ಎಂದು ಕರೆಯಲ್ಪಡುವ ಕಾಲ್ಚೆಂಡಿನ ಬಣ್ಣವು ನೀಲಿ ಕಿತ್ತಳೆ ಹಸಿರು ಛಾಯೆ ಮತ್ತು ನಕ್ಷತ್ರಗಳನ್ನು ಹೊಂದಿರುವುದರ ಜತೆಗೆ ೬ಇನ್‌ಬಿಲ್ಟ್ ಹೈ-ಡಿಫೈನ್ಡ್ ಕ್ಯಾಮರಗಳನ್ನು ಒಳಗೊಂಡಿದೆ. ಹಾಗಾಗಿ ಕ್ರೀಡಾಂಗಣದ ಸುತ್ತಮುತ್ತ ನಡೆಯುವ ಪ್ರತಿಯೊಂದು ಚಟುವಟಿಕೆಯನ್ನು ೩೬೦ ಡಿಗ್ರಿಯಲ್ಲಿ ಸೆರೆಹಿಡಿವ ದೃಶ್ಯಗಳು ವೀಕ್ಷಕರಿಗೆ ಲಭ್ಯವಾಗಲಿದೆ. ಇದುವರೆಗೆ ಉಪಯೋಗಿಸಲಾಗುತ್ತಿದ್ದ ತುಸು ಹಗುರಭಾರದ ಚೆಂಡುಗಳಿಗೆ ಪ್ರತಿಯಾಗಿ ಹೊಸದಾದ ಸುಧಾರಿಸಿದ ಉತ್ತಮ ಗ್ರಿಪ್-ಟಚ್‌ಉಳ್ಳ ಚೆಂಡುಗಳನ್ನು ನೀಡಲಾಗುತ್ತ್ತಿದೆ. ಇದರಿಂದಾಗಿ ಯಾವುದೇ ಆಟದ ಮೈದಾನದಲ್ಲಿ ಚೆಂಡು ಸಾಗುವ ಹಾದಿಯನ್ನು ಗುರುತಿಸುವಂಥ ತಂತ್ರಜ್ಞಾನ ಹೊಂದಿರುವ ಕ್ಯಾಮರಸಹಿತ ವಿನ್ಯಾಸವಿರುವುದೆ ಈ ಬ್ರಾಜುಕಾಂ ಫುಟ್ಬಾಲ್ ವಿಶೇಷತೆ!
ಫುಟ್ಬಾಲ್ ಲೋಕದ ದಂತಕತೆ ದಿಗ್ಗಜರು:-
೧೯೩೦-೫೦ : ಸರ್ ಸ್ಟ್ಯಾನ್ಲಿಮ್ಯಾಥ್ಯೂಸ್, ರೈಟ್‌ವಿಂಗರ್ – ಇಂಗ್ಲೆಂಡ್ ತಂಡ
೧೯೫೦-೬೦ : ಲೆವ್‌ಯಶೀನ್, ಗೋಲ್‌ಕೀಪರ್ – ಡೈನಮೊಮಾಸ್ಕೊ+ರಷ್ಯ ತಂಡ
೧೯೫೦-೬೦ : ಗಾರಿಂಚಾ, ರೈಟ್‌ವಿಂಗರ್ – ಬೊಟಫೊಗೊ+ಬ್ರೆಜಿಲ್ ತಂಡ
೧೯೫೦-೭೦ : ಪೀಲೇ, ಫಾರ್ವರ್ಡ್ – ಬ್ರೆಜಿಲ್+ಸ್ಯಾಂಟಾಸ್ ತಂಡ
೧೯೫೦-೭೦ : ಸರ್ ಬಾಬಿಚಾರಿಟಾನ್, ಎಟಿಟಿಮಾಡಿಫಯರ್ – ಇಂಗ್ಲೆಂಡ್+ಮ್ಯಾನ್‌ಯುಟಿಡಿ ತಂಡ
೧೯೫೦-೫೫ : ಫೆರಿಕ್‌ಪುಸ್ಕಾಸ್, ಫಾರ್ವರ್ಡ್ – ಹಾನ್ವೆಡ್[ರಿಯಲ್‌ಮ್ಯಾಡ್ರಿಡ್]+ಹಂಗರಿ ತಂಡ
೧೯೫೦-೫೫ : ಆಲ್‌ಫ್ರೆಡೊ.ಡಿ.ಸ್ಟಿಫಾನೊ ಆಲ್ರೌಂಡರ್ – ರಿಯಲ್‌ಮ್ಯಾಡ್ರಿಡ್+ಸ್ಪೇನ್ ತಂಡ
೧೯೬೦-೬೫ : ಇಸಾಬಿಯೊ, ಸ್ಟ್ರೈಕರ್ – ಪೋರ್ಚುಗಲ್+ಬೆನಿಫಿಕಾ ತಂಡ
೧೯೬೦-೭೦ : ಜಾರ್ಜ್‌ಬೆಸ್ಟ್, ರೈಟ್-ಲೆಫ್ಟ್‌ವಿಂಗರ್ – ಉ.ಕೊರಿಯಾ+ಮ್ಯಾನ್‌ಯುಟಿಡಿ ತಂಡ
೧೯೬೦-೭೦ : ಫ್ರಾಂಚ್‌ಬೆಕೆನ್, ಸ್ವೀಪರ್ – ಪ.ಜರ್ಮನಿ+ಬೈರನ್ ಮ್ಯೂನಿಚ್ ತಂಡ
೧೯೭೦-೭೫ : ಜೋಹಾನ್‌ಕ್ರಿಫ್, ಫಾರ್ವರ್ಡ್ – ನೆದರ್‌ಲ್ಯಾಂಡ್+ಬಾರ್ಸಲೋನ ತಂಡ
೧೯೭೦-೮೦ : ಮೈಕೆಲ್‌ಪ್ಲಾಟಿನಿ, ಮಿಡ್‌ಫೀಲ್ಡರ್ – ಫ್ರಾನ್ಸ್+ಜ್ಯುವೆಂಟಸ್ ತಂಡ
೧೯೮೦-೯೦ : ಡಿಯಾಗೋಮೆರಡೋನ, ಮಿಡ್‌ಫೀಲ್ಡರ್ – ಅರ್ಜೆಂಟಿನ+ಬಾರ್ಸಲೋನ ತಂಡ
೧೯೯೦-೨೦೦೦ : ರೊನಾಲ್ಡೊ, ಸ್ಟ್ರೈಕರ್ – ಬ್ರೆಜಿಲ್+ಬಾರ್ಕಾ ತಂಡ
೧೯೯೦-೨೦೦೦ : ಜೆನೆಡಿನ್‌ಜಿಡಾನೆ, ಮಿಡ್‌ಫೀಲ್ಡರ್ – ಫ್ರಾನ್ಸ್+ಜ್ಯುವೆಂಟಿಸ್ ತಂಡ
೨೦೦೦-೨೦೧೦ : ಲಯನ್‌ಮೆಸ್ಸಿ, ರೈಟ್‌ವಿಂಗರ್/ಫಾರ್ವರ್ಡ್ – ಅರ್ಜೆಂಟಿನ+ಬಾರ್ಸಲೋನ ತಂಡ
೨೦೦೦-೨೦೨೦ : ಡಿಯೆಗೊಫೋರ್ಲಾನ್‌ಕೊರಝೊ, ಫಾರ್ವರ್ಡ್- ಉರುಗ್ವೆ+ಯೂರೋಪ್ ತಂಡ
೨೦೦೦-೨೦೨೦ : ಮಿರೊಸ್ಲವ್‌ಕ್ಲೋಸ್, ಸ್ಟ್ರೈಕರ್ – ಜರ್ಮನಿ ತಂಡ

ಕುಮಾರಕವಿ ಬಿ.ಎನ್.ನಟರಾಜ
೯೦೩೬೯೭೬೪೭೧